ನವದೆಹಲಿ: ಅರ್ಜುನ ಪ್ರಶಸ್ತಿ ಪುರಸ್ಕೃತ ದೀಪಕ್ ಪೂನಿಯಾ ಸೇರಿದಂತೆ ಮೂವರು ಕುಸ್ತಿಪಟುಗಳಿಗೆ ಕೋವಿಡ್ 19 ಟೆಸ್ಟ್ನಲ್ಲಿ ಪಾಸಿಟಿವ್ ಬಂದಿದೆ ಎಂದು ಸ್ಫೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಗುರುವಾರ ತಿಳಿಸಿದೆ.
ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸಲು ಎಸ್‌ಎಐ ಎಸ್‌ಒಪಿ ಅನ್ವಯ ಸೋನೆಪತ್‌ನ ಎಸ್‌ಎಐ ಕೇಂದ್ರದಲ್ಲಿ ರಾಷ್ಟ್ರೀಯ ಶಿಬಿರಕ್ಕೆ ಆಗಮಿಸಿದ ನಂತರ ಎಲ್ಲಾ ಕುಸ್ತಿಪಟುಗಳನ್ನು ಪರೀಕ್ಷಿಸಲಾಗಿದೆ. ಪ್ರೋಟೋಕಾಲ್ ಪ್ರಕಾರ, ಕುಸ್ತಿಪಟುಗಳು ಮತ್ತು ತರಬೇತುದಾರರು ಹಾಗೂ ಸಹಾಯಕ ಸಿಬ್ಬಂದಿಯನ್ನು ಕಡ್ಡಾಯವಾಗಿ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸಾಯ್ ತಿಳಿಸಿದೆ.
ಸೋನೆಪತ್‌ನ ಸಾಯ್ ಕೇಂದ್ರದಲ್ಲಿ ರಾಷ್ಟ್ರೀಯ ಕುಸ್ತಿ ತರಬೇತಿಗಾಗಿ ನೋಂದಾಯಿಸಿಕೊಂಡಿದ್ದ ಮೂವರು ಹಿರಿಯ ಕುಸ್ತಿಪಟುಗಳಿಗೆ ಕೋವಿಡ್-19 ಪಾಸಿಟಿವ್ ಬಂದಿದೆ ಎಂದು ಪ್ರಕಟಣೆಯಲ್ಲಿ ಸಾಯ್ ತಿಳಿಸಿದೆ.
ಪರೀಕ್ಷೆಯಲ್ಲಿ ದೀಪಕ್ ಪೂನಿಯಾ (86 ಕೆಜಿ), ನವೀನ್ (65 ಕೆಜಿ) ಮತ್ತು ಕ್ರಿಶನ್ (125 ಕೆಜಿ)ಗೆ ಪಾಸಿಟಿವ್ ದೃಢಪಟ್ಟಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅವರ ಮೇಲ್ವಿಚಾರಣೆಗಾಗಿ ಅವರನ್ನು ಸಾಯ್ ಎಂಪನೇಲ್ಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದರು.