ಸಿಡ್ನಿ(ಆಸ್ಟ್ರೇಲಿಯಾ): ಮಹಿಳೆಯರ ವಿಶ್ವಕಪ್ನ 15 ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 17 ರನ್ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಪಾಕಿಸ್ತಾನ ತಂಡ ಸೆಮಿಫೈನಲ್ ಪ್ರವೇಶಿಸಿಬೇಕಾದರೆ ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಆದರೆ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಮೊದಲು ಬ್ಯಾಟಿಂಗ್ ನಡೆಸಿ 136 ರನ್ ಗಳಿಸಿತ್ತು. ಯುವ ಬ್ಯಾಟ್ಸ್ವುಮನ್ ಲೌರಾ ವೋಲ್ವಾರ್ಟ್ ಕೇವಲ 36 ಎಸೆತಗಳಲ್ಲಿ 53 ರನ್ ಗಳಿಸಿ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು. ಆಲ್ರೌಂಡರ್ ಮರಿಜಾನ್ ಕಾಪ್ 31 ರನ್ ಗಳಿಸಿ ಲೌರಾಗೆ ಸಾಥ್ ನೀಡಿದರು.
ಪಾಕಿಸ್ತಾನ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ದಿಯಾನ ಬೈಗ್ 4 ಓವರ್ಗಳಲ್ಲಿ 19 ರನ್ ನೀಡಿ 2 ವಿಕೆಟ್ ಕಿತ್ತರು. ಅನಮ್ ಅಮಿನ್, ಐಮನ್ ಅನ್ವರ್, ಸಯಿದಾ ಅರೋಬ್ ಶಾ ಹಾಗೂ ನಿಡಾ ದಾರ್ ತಲಾ ಒಂದು ವಿಕೆಟ್ ಪಡೆದರು.
-
All smiles after qualifying for the #T20WorldCup semi-finals 😃🤳#SAvPAK pic.twitter.com/WQibFxS64B
— T20 World Cup (@T20WorldCup) March 1, 2020 " class="align-text-top noRightClick twitterSection" data="
">All smiles after qualifying for the #T20WorldCup semi-finals 😃🤳#SAvPAK pic.twitter.com/WQibFxS64B
— T20 World Cup (@T20WorldCup) March 1, 2020All smiles after qualifying for the #T20WorldCup semi-finals 😃🤳#SAvPAK pic.twitter.com/WQibFxS64B
— T20 World Cup (@T20WorldCup) March 1, 2020
137 ರನ್ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕಿ ಜವೇರಿಯಾ ಖಾನ್, ಅಲಿಯಾ ರಿಯಾಜ್ 39 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್ವುಮನ್ಗಳು ದಕ್ಷಿಣ ಆಫ್ರಿಕಾ ಬೌಲರ್ಗಳ ಮುಂದೆ ರನ್ ಗಳಿಸಲಾಗದೆ ಪರದಾಡಿ ಸೋಲೊಪ್ಪಿಕೊಂಡರು.
ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಶಬ್ನಿಮ್ ಇಸ್ಮಾಯಿಲ್ 4 ಓವರ್ಗಳಲ್ಲಿ ಒಂದು ಮೇಡನ್ ಸಹಿತ ಕೇವಲ 17ರನ್ ನೀಡಿ 1 ವಿಕೆಟ್ ಪಡೆದರು. ಸ್ಪಿನ್ನರ್ಗಳಾದ ಮಲಬ 20ಕ್ಕೆ1, ನಾಯಕಿ ನೀಕರ್ಕ್ 17ಕ್ಕೆ1 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
ಈ ಗೆಲುವಿನ ನೊಂದಿಗೆ ಆಡಿದ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಪ್ರವೇಶಿದ ಎರಡನೇ ತಂಡ ಎನಿಸಿಕೊಂಡಿತು. ಈಗಾಗಲೇ ಭಾರತ ತಂಡ ಎ ಗುಂಪಿನ ಪಂದ್ಯದಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.