ಸಿಡ್ನಿ(ಆಸ್ಟ್ರೇಲಿಯಾ): ಟಿ-20 ವಿಶ್ವಕಪ್ನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಕ್ರಿಕೆಟ್ ಜಗತ್ತನ್ನೇ ಬೆರಗಾಗಿಸುವಂತಹ ಪ್ರದರ್ಶನ ನೀಡಿದ ಥಾಯ್ಲೆಂಡ್ ಮಹಿಳೆಯರ ಚೊಚ್ಚಲ ಗೆಲುವಿಗೆ ಮಳೆರಾಯ ನಿರಾಶೆ ಮೂಡಿಸಿದ್ದಾನೆ.
ಟೂರ್ನಿಯಲ್ಲಿ ತನ್ನ ಹಿಂದಿನ ಮೂರು ಪಂದ್ಯಗಳಲ್ಲಿ 82, 78, 78 ರನ್ಗಳಿಗೆ ಆಲೌಟ್ ಆಗಿದ್ದ ಥಾಯ್ಲೆಂಡ್ ತನ್ನ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ಬೌಲಿಂಗ್ ದಾಳಿಯನ್ನ ನುಚ್ಚುನೂರು ಮಾಡಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ್ದ ಥಾಯ್ಲೆಂಡ್ ಮೊದಲ ವಿಕೆಟ್ಗೆ 93 ರನ್ ಪೇರಿಸುವ ಮೂಲಕ 2020ರ ವಿಶ್ವಕಪ್ನ 2ನೇ ಗರಿಷ್ಠ ಮೊತ್ತದ ಜೊತೆಯಾಟ ನೀಡಿತು.
-
Thailand's highest T20I total ✅
— T20 World Cup (@T20WorldCup) March 3, 2020 " class="align-text-top noRightClick twitterSection" data="
Thailand's first World Cup fifty ✅
The highest T20I total at the Sydney Showground ✅
Thailand's first World Cup win ❓#PAKvTHA | #T20WorldCup
SCORE 📝 https://t.co/OjVeetMdXL pic.twitter.com/a6sfLZDjFf
">Thailand's highest T20I total ✅
— T20 World Cup (@T20WorldCup) March 3, 2020
Thailand's first World Cup fifty ✅
The highest T20I total at the Sydney Showground ✅
Thailand's first World Cup win ❓#PAKvTHA | #T20WorldCup
SCORE 📝 https://t.co/OjVeetMdXL pic.twitter.com/a6sfLZDjFfThailand's highest T20I total ✅
— T20 World Cup (@T20WorldCup) March 3, 2020
Thailand's first World Cup fifty ✅
The highest T20I total at the Sydney Showground ✅
Thailand's first World Cup win ❓#PAKvTHA | #T20WorldCup
SCORE 📝 https://t.co/OjVeetMdXL pic.twitter.com/a6sfLZDjFf
ಆರಂಭಿಕರಾದ ನಟ್ಟಕನ್ ಚಾಂಟಮ್ 50 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ 56 ರನ್ ಸಿಡಿಸಿದರೆ, ನಟ್ಟಾಯ ಬೂಚಥಾಮ್ ಆಕರ್ಷಕ 44 ರನ್ ಗಳಿಸಿದರು. ಈ ಜೋಡಿ ಔಟಾದ ನಂತರ ಬಂದ ಚನಿಡಾ ಸತ್ತಿರುವಾಂಗ್ 20, ನನ್ನಾಪಟ್ ಕೊಂಚರೋಯೆಂಕಾಯ್ ಔಟಾಗದೆ 20 ರನ್ ಗಳಿಸುವ ಮೂಲಕ 150 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದರು. ಇದು ಟೂರ್ನಿಯಲ್ಲೇ 6ನೇ ಗರಿಷ್ಠ ರನ್ ಹಾಗೂ ಥಾಯ್ಲೆಂಡ್ ಮೊದಲ ಬಾರಿಗೆ 100ರ ಗಡಿ ದಾಟಿದ್ದಾಗಿತ್ತು. ಅಲ್ಲದೆ ಸಿಡ್ನಿ ಮೈದಾನದಲ್ಲಿ ದಾಖಲಾದ ಗರಿಷ್ಠ ಮೊತ್ತ ಕೂಡ ಆಗಿತ್ತು.
ದುರದೃಷ್ಟವೆಂದರೆ ಸೆಮಿಫೈನಲ್ ಪ್ರವೇಶಿಸಿರುವ ಭಾರತ ತಂಡವೇ ಇನ್ನು ಒಮ್ಮೆಯೂ 150ರ ಗಡಿ ದಾಟಿಲ್ಲ. ಅಂತಹದರಲ್ಲಿ ಅಚ್ಚರಿಯ ಬ್ಯಾಟಿಂಗ್ ಪ್ರದರ್ಶನ ನೀಡಿದ ಥಾಯ್ಲೆಂಡ್ ತಂಡಕ್ಕೆ ಮಳೆರಾಯ ನಿರಾಶೆ ಮೂಡಿಸಿದ. ಅಲ್ಲದೆ ಥಾಯ್ಲೆಂಡ್ ಚೊಚ್ಚಲ ವಿಶ್ವಕಪ್ ಪಂದ್ಯದ ಗೆಲುವಿನ ಕನಸು ಕೂಡ ನುಚ್ಚುನೂರಾಯಿತು. ಆದರೂ ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲಿ 9ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಬಾಂಗ್ಲಾದೇಶ ಮಹಿಳಾ ತಂಡ ಕೊನೆಯ ಸ್ಥಾನ ಪಡೆದಿದೆ.