ಮೆಲ್ಬೋರ್ನ್(ಆಸ್ಟ್ರೇಲಿಯಾ): ವಿಶ್ವ ಮಹಿಳಾ ದಿನಚರಣೆಯಂದು ನಡೆದ ವನಿತೆಯರ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡ ಮುಗ್ಗರಿಸಿದೆ. ಆಸೀಸ್ ವನಿತೆಯರು ಐದನೇ ಬಾರಿ ಟಿ20 ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಆಸೀಸ್ ವನಿತೆಯರು ನೀಡಿದ್ದ 185 ರನ್ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ವನಿತೆಯರ ತಂಡ ಬ್ಯಾಟಿಂಗ್ ವೈಫಲ್ಯದಿಂದ 99 ರನ್ಗಳಿಗೆ ಸರ್ವ ಪತನ ಕಂಡಿದೆ. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದ ಶೆಫಾಲಿ ವರ್ಮಾ ಕೇವಲ 2 ರನ್ಗಳಿಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ರು.
-
AUSTRALIA HAVE DEFENDED THEIR #T20WORLDCUP CROWN 👑 pic.twitter.com/dSeaN3srVR
— T20 World Cup (@T20WorldCup) March 8, 2020 " class="align-text-top noRightClick twitterSection" data="
">AUSTRALIA HAVE DEFENDED THEIR #T20WORLDCUP CROWN 👑 pic.twitter.com/dSeaN3srVR
— T20 World Cup (@T20WorldCup) March 8, 2020AUSTRALIA HAVE DEFENDED THEIR #T20WORLDCUP CROWN 👑 pic.twitter.com/dSeaN3srVR
— T20 World Cup (@T20WorldCup) March 8, 2020
ಸ್ಮೃತಿ ಮಂಧಾನ ಕೂಡ 11 ರನ್ಗಳಿಸಿ ಪೆವಿಲಿಯನ್ ಸೇರಿಕೊಂಡ್ರು. ನಾಯಕಿ ಹರ್ಮನ್ ಪ್ರೀತ್ ಕೌರ್, ತಾನಿಯಾ ಭಾಟಿಯಾ, ರೋಡ್ರಿಗಸ್ ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. ದೀಪ್ತಿ ಶರ್ಮಾ (33), ವೇದಾ ಕೃಷ್ಣಮೂರ್ತಿ(19) ರಿಚಾ ಘೋಷ್ 18 ರನ್ ಗಳಿಸಿದ್ದು ಬಿಟ್ಟರೆ, ಯಾವೊಬ್ಬ ಆಟಗಾರ್ತಿಯರು ಕೂಡ ಆಸೀಸ್ ಬೌಲರ್ಗಳಿಗೆ ಪ್ರತಿರೋಧ ತೋರಲಿಲ್ಲ.
ಅಂತಿಮವಾಗಿ ಭಾರತ ಮಹಿಳಾ ತಂಡ 19.1 ಓವರ್ಗಳಲ್ಲಿ 99 ರನ್ಗಳಿಗೆ ಸರ್ವ ಪತನ ಕಂಡು, 85ರನ್ಗಳಿಂದ ಸೋಲೊಪ್ಪಿಕೊಂಡಿತು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ಆಸೀಸ್ ತಂಡದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಅಲಿಸ್ಸಾ ಹೀಲಿ ಮತ್ತು ಬೆತ್ ಮೂನಿ ಭಾರತೀಯ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿ 153 ರನ್ನುಗಳ ಜೊತೆಯಾಟ ನೀಡಿದರು. ಅಲಿಸ್ಸಾ ಹೀಲಿ 39 ಎಸೆತಗಳನ್ನೆದುರಿಸಿ 75 ರನ್ ಕಲೆ ಹಾಕಿದ್ರೆ, ಬೆತ್ ಮೂನಿ 54 ಎಸೆತಗಳಲ್ಲಿ 78 ರನ್ ಕಲೆ ಹಾಕಿ ಅಜೇಯರಾಗುಳಿದರು.
ಭಾರತೀಯ ಬೌಲರ್‌ಗಳಾದ ದೀಪ್ತಿ ಶರ್ಮಾ 2 ವಿಕೆಟ್ ಪಡೆದರೆ, ಪೂನಂ ಯಾದವ್ ಮತ್ತು ರಾಧಾ ಯಾದವ್ ತಲಾ 1 ವಿಕೆಟ್ ಪಡೆದರು. ಶಿಖಾ ಪಾಂಡೆ 4 ಓವರುಗಳಲ್ಲಿ ಬರೋಬ್ಬರಿ 52 ರನ್ನುಗಳನ್ನು ನೀಡಿ ದುಬಾರಿ ಬೌಲರ್ ಎನಿಸಿದರು.