ಸಿಡ್ನಿ: ಐಸಿಸಿ ಮಹಿಳಾ ಟಿ-20 ವಿಶ್ವಕಪ್ಗೆ ಈಗಾಗಲೇ ಕ್ಷಣಗಣನೆ ಆರಂಭಗೊಂಡಿದ್ದು, ಟೂರ್ನಿಯಲ್ಲಿ ಆಸ್ಟ್ರೇಲಿಯಾ, ಭಾರತ,ಇಂಗ್ಲೆಂಡ್,ನ್ಯೂಜಿಲ್ಯಾಂಡ್,ಬಾಂಗ್ಲಾದೇಶ, ಪಾಕ್ ಸೇರಿದಂತೆ ಪ್ರಮುಖ ತಂಡಗಳು ಭಾಗಿಯಾಗಿವೆ.
ಟೂರ್ನಮೆಂಟ್ನಲ್ಲಿ ಪಾಕಿಸ್ತಾನ ಮಹಿಳಾ ತಂಡ ಸಹ ಭಾಗಿಯಾಗುತ್ತಿದ್ದು, ಮೊದಲ ಪಂದ್ಯ ಆಡುವುದಕ್ಕೂ ಮುಂಚಿತವಾಗಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಐಸಿಸಿ ತನ್ನ ಅಧಿಕೃತ ಟ್ವೀಟರ್ನಲ್ಲಿ ಶೇರ್ ಮಾಡಿಕೊಂಡಿದೆ.
-
🎤💥
— ICC (@ICC) February 19, 2020 " class="align-text-top noRightClick twitterSection" data="
The @TheRealPCB team are absolute rockstars! pic.twitter.com/F4EODVhcfI
">🎤💥
— ICC (@ICC) February 19, 2020
The @TheRealPCB team are absolute rockstars! pic.twitter.com/F4EODVhcfI🎤💥
— ICC (@ICC) February 19, 2020
The @TheRealPCB team are absolute rockstars! pic.twitter.com/F4EODVhcfI
ವೆಸ್ಟ್ ಇಂಡೀಸ್ ವಿರುದ್ಧ ಪಾಕ್ ತನ್ನ ಮೊದಲ ಪಂದ್ಯದಲ್ಲಿ ಭಾಗಿಯಾಗಲಿದ್ದು, ತದನಂತರ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಥಾಯ್ಲೆಂಡ್ ವಿರುದ್ಧ ಸೆಣಸಲಿದೆ. ಇನ್ನು ಪಾಕಿಸ್ತಾನ ಮಹಿಳಾ ಕ್ರಿಕೆಟರ್ಸ್ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಲ್ಲಿನ ಫ್ಯಾನ್ಸ್ ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಟೂರ್ನಿಯಲ್ಲಿ ಟೀಂ ಇಂಡಿಯಾ ಮಹಿಳಾ ಪಡೆ ಸಹ ಭಾಗಿಯಾಗಲಿದ್ದು, ಆಸ್ಟ್ರೇಲಿಯಾ, ಬಾಂಗ್ಲಾದೇಶ, ನ್ಯೂಜಿಲ್ಯಾಂಡ್ ಹಾಗೂ ಶ್ರೀಲಂಕಾ ವಿರುದ್ಧ ಸೆಣಸಾಟ ನಡೆಸಲಿದೆ. ಮಾರ್ಚ್ 8ರಂದು ಫೈನಲ್ ಪಂದ್ಯ ನಡೆಯಲಿದೆ.