ETV Bharat / sports

ಮಹಿಳಾ ಟಿ-20 ವಿಶ್ವಕಪ್:​ ಶ್ರೀಲಂಕಾ ವಿರುದ್ಧ ಚಾಂಪಿಯನ್​​ ಆಸ್ಟ್ರೇಲಿಯಾಗೆ ಪ್ರಯಾಸದ ಗೆಲುವು

author img

By

Published : Feb 24, 2020, 5:19 PM IST

ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ ತಂಡ ಟಿ-20 ವಿಶ್ವಕಪ್​ನಲ್ಲಿ ಶ್ರೀಲಂಕಾ ತಂಡವನ್ನು 5 ವಿಕೆಟ್​ಗಳಿಂದ ಮಣಿಸಿ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿದೆ.

Women T20 world cup
ಮಹಿಳಾ ಟಿ20 ವಿಶ್ವಕಪ್

ಪರ್ತ್​: ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ ತಂಡ ಶ್ರೀಲಂಕಾ ಮಹಿಳೆಯರ ತಂಡದ ವಿರುದ್ಧ 5 ವಿಕೆಟ್​ಗಳ ಪ್ರಯಾಸದ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್​ ನಡೆಸಿದ ಶ್ರೀಲಂಕಾ ನಾಯಕಿ ಚಾಮರಿ ಅಟಪಟ್ಟು(50) ಅವರ ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ ಕೇವಲ 122 ರನ್ ​ಗಳಿಸಲಷ್ಟೇ ಶಕ್ತವಾಯಿತು.

ಆಸ್ಟ್ರೇಲಿಯಾ ಪರ ಮೊಲಿ ಸ್ಟ್ರೇನೊ 2 ವಿಕೆಟ್​, ನಿಕೋಲ ಕ್ಯಾರಿ 2 ವಿಕೆಟ್​, ಮೇಗನ್​ ಶೂಟ್​​ ಹಾಗೂ ಜೊನಾಸೆನ್​ ತಲಾ ಒಂದು ವಿಕೆಟ್​ ಪಡೆದರು.

123 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಕೇವಲ 10 ರನ್​ ಆಗುವಷ್ಟರಲ್ಲಿ ಅಲಿಸಾ ಹೇಲಿ(0), ಬೆತ್​ ಮೂನಿ(6) ಹಾಗೂ ಗಾರ್ಡ್ನರ್​(2) ರನ್​ಗೆ ವಿಕೆಟ್​ ಒಪ್ಪಿಸಿದರು.

ಆದರೆ ನಾಯಕಿ ಲ್ಯಾನ್ನಿಂಗ್​(41) ಹಾಗೂ ರಚೀಲ್​ ಹೇನೆಸ್​(60) 4ನೇ ವಿಕೆಟ್​ ಜೊತೆಯಾಟದಲ್ಲಿ 95 ರನ್​ ಸೇರಿಸಿ ಆರಂಭಿಕ ಆಘಾತದಿಂದ ಪಾರು ಮಾಡಿದರು. ಅಬ್ಬರದ ಬ್ಯಾಟಿಂಗ್ ನಡೆಸಿದ ಹೇನೆಸ್​ 47 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್​ಗಳ ನೆರವಿನಿಂದ 60 ರನ್​ ಗಳಿಸಿ ಔಟಾದರು. ನಂತರ ಬಂದ ನಿಕೋಲ ಕ್ಯಾರಿ(5)ರನ್​ಗೆ ವಿಕೆಟ್ ಒಪ್ಪಿಸಿದರು. ಆದರೆ ನಾಯಕಿಯಾಟವಾಡಿದ ಮೆಗ್​ ಲ್ಯಾನ್ನಿಂಗ್​ 44 ಎಸೆತಗಳಲ್ಲಿ 4 ಬೌಂಡರಿ ಸಹಿತ 41 ರನ್ ​ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇವರಿಗೆ ಸಾಥ್​ ನೀಡಿದ ಆಲ್​ರೌಂಡರ್​ ಪೆರ್ರಿ ಔಟಾಗದೆ 5 ರನ್ ರನ್​ ಗಳಿಸಿದರು.

ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ವಿಶ್ವಕಪ್​ನಲ್ಲಿ ಮೊದಲ ಗೆಲುವು ಪಡೆಯಿತು. ಇತ್ತ ಶ್ರೀಲಂಕಾ ಸತತ ಎರಡನೇ ಸೋಲು ಕಂಡು ನಿರಾಶೆ ಅನುಭವಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.