ETV Bharat / sports

ಐಪಿಎಲ್​ ವಿಶ್ವದ ಪ್ರಸಿದ್ಧ ಲೀಗ್​, ಅದರಲ್ಲಿ ಪಾಕಿಸ್ತಾನ ಯುವಕರು ಆಡಬೇಕೆಂದು ಬಯಸುತ್ತೇನೆ: ವಾಸಿಂ ಅಕ್ರಮ್​

ಪಾಕಿಸ್ತಾನದ ಲೆಜೆಂಡ್​ ಭವಿಷ್ಯದಲ್ಲಿ ಪಾಕಿಸ್ತಾನ ಹಾಗೂ ಭಾರತ ತಂಡದ ಆಟಗಾರರು ಐಪಿಎಲ್ ಮತ್ತು ಪಿಎಸ್​ಎಲ್​ನ ಭಾಗವಾಗಬೇಕೆಂದು ಬಯಸಿದ್ದಾರೆ.

ವಾಸಿಮ್ ಅಕ್ರಮ್​
ವಾಸಿಮ್ ಅಕ್ರಮ್​
author img

By

Published : Nov 3, 2020, 4:43 PM IST

ನವದೆಹಲಿ: ಟಿ-20 ಕ್ರಿಕೆಟ್​ ಜಗತ್ತಿನಲ್ಲಿ ಐಪಿಎಲ್ ದೊಡ್ಡ ಕ್ರಾಂತಿಯನ್ನೇ ಎಬ್ಬಿಸಿದೆ. 2007ರ ವಿಶ್ವಕಪ್​ ನಂತರದ ವರ್ಷದಲ್ಲೇ ಆರಂಭವಾದ ಐಪಿಎಲ್​ ಇದೀಗ ಎಲ್ಲ ಕ್ರಿಕೆಟ್​ ಆಡುವ ರಾಷ್ಟ್ರಗಳಲ್ಲಿ ಕ್ರಿಕೆಟ್​ ಲೀಗ್​ಗಳ ಆರಂಭಕ್ಕೆ ದಾರಿ ದೀಪವಾಗಿದೆ. ಈ ಮೂಲಕ ವಿಶ್ವ ಯುವ ಕ್ರಿಕೆಟಿಗರಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ನೆರವಾಗಿದೆ.

ಮೊದಲ ಆವೃತ್ತಿಯಲ್ಲಿ ಕೆಕೆಆರ್ ಕೋಚ್​ ಆಗಿದ್ದ ಪಾಕಿಸ್ತಾನದ ವಾಸಿಂ ಅಕ್ರಮ್ ಇದೀಗ ಚೊಚ್ಚಲ ಲಂಕಾದ ಪ್ರೀಮಿಯರ್​ ಲೀಗ್​ನಲ್ಲೂ ತಮ್ಮ ಅನುಭವನ್ನು ಹಂಚಲು ಕಾತುರರಾಗಿದ್ದಾರೆ. ಸುಲ್ತಾನ್ ಆಫ್​ ಸ್ವಿಂಗ್​ ಎಂದೇ ಖ್ಯಾತರಾಗಿರುವ ಅಕ್ರಂ​ ಎಲ್​ಪಿಎಲ್​ನಲ್ಲೂ ಕೋಚ್​ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿರುವ ಅವರು ಟಿ-20 ಕ್ರಿಕೆಟ್​ ವಿಶ್ವದಾದ್ಯಂತ ಇರುವ ಯುವ ಕ್ರಿಕೆಟಿಗರಿಗೆ ಅದ್ಭುತ ವೇದಿಕೆ ಕಲ್ಪಿಸಿಕೊಡುತ್ತಿದೆ. ಇದರಿಂದ ಕ್ರಿಕೆಟ್​ ವೇಗವಾಗಿ ಬೆಳೆಯುವಂತಾಗಿದೆ. ಬ್ಯಾಟ್ಸ್​ಮನ್​ಗಳು ವೇಗವಾಗಿ ರನ್​ಗಳಿಸುತ್ತಿದ್ದರೆ, ಬೌಲರ್​ಗಳು ತುಂಬಾ ನವೀನ ಮಾದರಿಯಲ್ಲಿ ಬೌಲಿಂಗ್ ಮಾಡಲು ಶುರುಮಾಡಿದ್ದಾರೆ. ಅಲ್ಲದೇ ಫೀಲ್ಡಿಂಗ್​ನಲ್ಲೂ ಅದ್ಭುತ ಬದಲಾವಣೆಗಳು ಕಂಡು ಬರುತ್ತಿವೆ ಎಂದಿದ್ದಾರೆ.

ಟಿ-20 ಕ್ರಿಕೆಟ್​ನ ಪ್ರಭಾವದಿಂದ ಟೆಸ್ಟ್​ ಕ್ರಿಕೆಟ್​ನಲ್ಲೂ ಹಿಂದಿಗಿಂತಲೂ ಪ್ರಸ್ತುತ ಹೆಚ್ಚಿನ ಫಲಿತಾಂಶಗಳನ್ನು ಕಾಣುತ್ತಿದ್ದೇವೆ. ಇದು ಆಟಕ್ಕೆ ಉತ್ತಮ ಸಂಕೇತವಾಗಿದೆ. ನೀವು ವಿವಿಧ ದೇಶದ ಆಟಗಾರರೊಂದಿಗೆ ಕ್ರಿಕೆಟ್ ಆಡುವಾಗ, ವಿವಿಧ ರೀತಿಯ ವಿಕೆಟ್​ನಲ್ಲಿ ಹಲವು ವೈವಿಧ್ಯಮಯ ಬೌಲರ್​ಗಳ ದಾಳಿಯನ್ನು ಎದುರಿಸುತ್ತೀರಾ. ಇದರಿಂದ ನಿಮ್ಮ ಆಟ ತುಂಬಾ ಸುಧಾರಣೆ ಕಾಣುತ್ತದೆ. ಅದನ್ನ ಈಗಾಗಲೆ ವಿಶ್ವದ ಎಲ್ಲಾ ಟಿ-20 ಲೀಗ್​ಗಳಲ್ಲೂ ನಾವು ನೋಡುತ್ತಿದ್ದೇವೆ ಎಂದು ಅಕ್ರಮ್​ ತಿಳಿಸಿದ್ದಾರೆ.

ಪಾಕಿಸ್ತಾನದ ಲೆಜೆಂಡ್​ ಭವಿಷ್ಯದಲ್ಲಿ ಪಾಕಿಸ್ತಾನ ಹಾಗೂ ಭಾರತ ತಂಡದ ಆಟಗಾರರು ಐಪಿಎಲ್ ಮತ್ತು ಪಿಎಸ್​ಎಲ್​ನ ಭಾಗವಾಗಬೇಕೆಂದು ಬಯಸಿದ್ದಾರೆ.

ಸ್ಪೋರ್ಟ್ಸ್​ ರಾಜಕಾರಣಕ್ಕೆ ಬಲಿಯಾಗಬಾರದು ಎಂದು ನಾನು ಯಾವಾಗಲು ನಂಬಿದ್ದೇನೆ. ಆದರೆ, ಇದು ಎರಡು ದೇಶಗಳ ಸರ್ಕಾರದ ವಿಷಯವಾಗಿದೆ. ಇದರ ಬಗ್ಗೆ ನಾನು ಏನನ್ನು ಹೇಳುವುದು ಸೂಕ್ತವಲ್ಲ. ಆದರೆ, ಐಪಿಎಲ್ ವಿಶ್ವದ ಸ್ಪರ್ಧಾತ್ಮಕ ದೇಶೀಯ ಲೀಗ್​ಗಳಲ್ಲಿ ಅತ್ಯಂತ ಪ್ರಸಿದ್ಧವಾದ್ದಾಗಿದೆ. ಈ ಲೀಗ್​ನಲ್ಲಿ ಪಾಕಿಸ್ತಾನದ ಯುವ ಆಟಗಾರರು ಭಾಗವಾಗಬೇಕು ಎಂದು ನಾನು ಬಯಸುತ್ತೇನೆ. ಹಾಗೂ ಭಾರತೀಯ ಆಟಗಾರರನ್ನು ಪಾಕಿಸ್ತಾನ ಪ್ರೀಮಿಯರ್​ ಲೀಗ್​ನಲ್ಲಿ ನೋಡಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.