ETV Bharat / sports

ಇಂದಿನಿಂದ ಏಕದಿನ ಸರಣಿ ಆರಂಭ: ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ - ಟೀಂ ಇಂಡಿಯಾ

ವಿಂಡೀಸ್​ ನೆಲದಲ್ಲೇ ಚುಟುಕು ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿರುವ ಟೀಂ ಇಂಡಿಯಾ ಇಂದಿನಿಂದ ಏಕದಿನ ಪಂದ್ಯಗಳನ್ನು ಆಡಲಿದೆ.

ಟೀಂ ಇಂಡಿಯಾ
author img

By

Published : Aug 8, 2019, 7:53 AM IST

ಗಯಾನ: ವೆಸ್ಟ್​ ಇಂಡೀಸ್​ ವಿರುದ್ಧ ಟಿ-20 ಸರಣಿಯನ್ನ ಕ್ಲೀನ್​ ಸ್ವೀಪ್​ ಮಾಡಿರುವ ಟೀಂ ಇಂಡಿಯಾ ಇಂದು ವಿಂಡೀಸ್​ ವಿರುದ್ಧ ಗಯಾನದಲ್ಲಿ ಮೊದಲ ಏಕದಿನ ಪಂದ್ಯ ಆಡಲಿದೆ.

ವಿಂಡೀಸ್​ ಪ್ರವಾಸದಲ್ಲಿರುವ ಭಾರತ ತಂಡ 3 ಪಂದ್ಯಗಳ ಟಿ-20 ಸರಣಿಯನ್ನ ಕ್ಲೀನ್​ ಸ್ವೀಪ್​ ಮಾಡಿದ್ದು, ಇಂದಿನಿಂದ 3 ಪಂದ್ಯಗಳ ಏಕದಿನ ಸರಣಿ ಪ್ರಾರಂಭವಾಗಲಿದೆ. ಟಿ-20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿರುವ ಟೀಂ ಇಂಡಿಯಾ ಆಟಗಾರರು, ಏಕದಿನ ಸರಣಿಯಲ್ಲೂ ಉತ್ತಮ ಪ್ರದರ್ಶನ ತೋರುವ ಉತ್ಸಾಹದಲ್ಲಿದ್ದಾರೆ.

ಹಾಗೆಯೇ ಟಿ-20 ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ವಿಂಡೀಸ್​ ಆಟಗಾರರು ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ಚುಟುಕು ಪಂದ್ಯಗಳಲ್ಲಿ ಕಾಣಿಸಿಕೊಳ್ಳದ ಕೆರಿಬಿಯನ್ ದೈತ್ಯ ಕ್ರಿಸ್​ ಗೇಲ್ ಏಕದಿನ ಟೂರ್ನಿಯಲ್ಲಿ ಸ್ಥಾನ ಪಡೆದಿದ್ದು, ವಿಂಡೀಸ್​ ತಂಡದ ಬಲ ಹೆಚ್ಚಿಸಿದೆ.

ಇತ್ತ ಟಿ-20 ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದ ಯುವ ವೇಗಿ ನವ್​ದೀಪ್ ಸೈನಿ ಏಕದಿನ ಸರಣಿಯಲ್ಲೂ ಸ್ಥಾನ ಪಡೆದುಕೊಳ್ಳುವ ನಿರೀಕ್ಷೆ ಇದೆ. ಟಿ-20 ಸರಣಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯದ ಶ್ರೇಯಸ್​ ಐಯ್ಯರ್​ ಇಂದಿನ ಪಂದ್ಯದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಸಂಭಾವ್ಯ ತಂಡ
ಟೀಂ ಇಂಡಿಯಾ:
ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಮನಿಶ್ ಪಾಂಡೆ, ರಿಷಭ್ ಪಂತ್, ಕೇದಾರ್ ಜಾಧವ್, ರವೀಂದ್ರ ಜಡೆಜಾ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್, ಮೊಹ್ಮದ್ ಶಮಿ, ನವ್​ದೀಪ್ ಸೈನಿ.

ವೆಸ್ಟ್ ಇಂಡೀಸ್: ಕ್ರಿಸ್ ಗೇಲ್, ಎವಿನ್ ಲೇವಿಸ್, ಶೈ ಹೋಪ್, ನಿಕೋಲಸ್ ಪೂರನ್, ಶಿಮ್ರಾನ್ ಹೇಟ್ಮೈರ್, ರೋಸ್ಟನ್ ಚೇಸ್, ಜಾಸನ್ ಹೋಲ್ಡರ್, ಫಾಬಿನ್ ಅಲೆನ್, ಶೆಲ್ಡನ್ ಕಾಟ್ರೆಲ್, ಒಶಾನೆ ಥಾಮಸ್.

Intro:Body:

sports

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.