ETV Bharat / sports

ನಾಯಕತ್ವ ಕಳೆದುಕೊಂಡ ಒಂದೇ ವಾರದಲ್ಲಿ ಅದೇ ತಂಡದ ಕೋಚ್​ ಹುದ್ದೆಗೇರಿದ ಡರೇನ್ ಸಾಮಿ - ಪೇಶಾವರ್​ ಜಲ್ಮಿ ತಂಡದ ಕೋಚ್​

ಸಾಮಿ 2016 ರಲ್ಲಿ ಪೇಶಾವರ್​ ಜಲ್ಮಿ ತಂಡವನ್ನು 2016ರಿಂದ ಮುನ್ನಡೆಸಿಕೊಂಡು ಬಂದಿದ್ದರು. 2017ರಲ್ಲಿ ತಂಡವನ್ನು ಚಾಂಪಿಯನ್​ ಆಗಿ ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಕೋಚ್​ ಆಗಿ ಮುಂದಿನ ಎರಡು ವರ್ಷ ಅದೇ ತಂಡದ ಪರವಾಗಿ ಕಾರ್ಯ ನಿರ್ವಹಿಸಲಿದ್ದಾರೆ.

Darren Sammy
ಡರೇನ್ ಸಾಮಿ
author img

By

Published : Mar 5, 2020, 10:31 PM IST

ಲಾಹೋರ್​: ಪಾಕಿಸ್ತಾನ ಪ್ರೀಮಿಯರ್ ಲೀಗ್​ನಲ್ಲಿ ಪೇಶಾವರ್​ ಜಲ್ಮಿ ತಂಡದ ನಾಯಕನಾಗಿದ್ದ ಡೆರೇನ್​ ಸಾಮಿಯನ್ನು ಅದೇ ತಂಡದ ಮುಖ್ಯ ಕೋಚ್​ ಆಗಿ ನೇಮಕಗೊಂಡಿದ್ದಾರೆ.

2020ರ ಪಾಕಿಸ್ತಾನ ಪ್ರೀಮಿಯರ್​ ಲೀಗ್​ನಲ್ಲಿ ಕಳೆದ 5 ಪಂದ್ಯಗಳಲ್ಲಿ ಪೇಶಾವರ್​ ಜಲ್ಮಿ ತಂಡದ ನಾಯಕನಾಗಿದ್ದ ವಿಂಡೀಸ್​ ಮಾಜಿ ನಾಯಕ ಸಾಮಿಯನ್ನು ಜಲ್ಮಿ ಪ್ರಾಂಚೈಸಿ ತಂಡದ ಮುಖ್ಯ ಕೋಚ್​ ಹುದ್ದೆಗೆ ಆಯ್ಕೆ ಮಾಡಿದೆ. ಇದರಿಂದ ಕಳೆದೆರಡು ಪಂದ್ಯಗಳಿಂದ ತಂಡದ ಹಂಗಾಮಿ ನಾಯಕನಾಗಿದ್ದ ವಹಾಬ್ ರಿಯಾಜ್​ ಇನ್ಮುಂದೆ ಖಾಯಂ ನಾಯಕರಾಗಲಿದ್ದಾರೆ.

ಪೇಶಾವರ್​ ತಂಡದ ಮುಖ್ಯ ಕೋಚ್​ ಆಗಿದ್ದ ಮೊಹಮ್ಮದ್​ ಅಕ್ರಮ್​ ತಂಡದ ಡೈರೆಕ್ಟರ್​ ಆಗಿ ನೇಮಕಗೊಂಡಿದ್ದಾರೆ. ಸಾಮಿ ಇಂದಿನಿಂದ ಪೇಶಾವರ್​ ಜಲ್ಮಿ ತಂಡದ ಮುಖ್ಯಕೋಚ್​ ಆಗಿ ಇಂದಿನಿಂದ ಮುಂದಿನ ಎರಡು ವರ್ಷದವರೆಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಡರೇನ್ ಸಾಮಿ ತಂಡದಲ್ಲಿ ಆಟಗಾರನಾಗಿಯೂ ಕಾಣಿಸಿಕೊಳ್ಳಲಿದ್ದಾರೆ. ಆದರೆ ತಂಡದಲ್ಲಿ ಅವರ ಪ್ರಮುಖ ಸ್ಥಾನ ಕೋಚ್​ ಎಂದು ತಂಡದ ಆಡಳಿತ ಮಂಡಳಿ ಸೂಚಿಸಿದೆ.

ಸಾಮಿ 2016 ರಲ್ಲಿ ಪೇಶಾವರ್​ ಜಲ್ಮಿ ತಂಡವನ್ನು 2016ರಿಂದ ಮುನ್ನಡೆಸಿಕೊಂಡು ಬಂದಿದ್ದರು. 2017ರಲ್ಲಿ ತಂಡವನ್ನು ಚಾಂಪಿಯನ್​ ಆಗಿ ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಕೋಚ್​ ಆಗಿ ಮುಂದಿನ ಎರಡು ವರ್ಷ ಅದೇ ತಂಡದ ಪರವಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಪಾಕಿಸ್ತಾನ ಕ್ರಿಕೆಟ್​ಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಡರೇನ್ ಸಾಮಿ ಪಾಕಿಸ್ತಾನದ ಅತ್ಯಂತ ದೊಡ್ಡ ನಾಗರಿಕ ಪ್ರಶಸ್ತಿ (ನಿಶಾನ್-ಇ- ಪಾಕಿಸ್ತಾನ) ಹಾಗೂ ಗೌರವ ಪೌರತ್ವವನ್ನ ಪಾಕ್‌ ಅಧ್ಯಕ್ಷ ಆರೀಫ್​ ಅಲ್ವಿ ಮಾರ್ಚ್​ 23 ರಂದು ಪಡೆಯಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.