ಮುಂಬೈ: 2020ರ ವಿಶ್ವಕಪ್ನಲ್ಲಿ ಭಾರತ ತಂಡದ ಮಾಜಿ ನಾಯಕ ಧೋನಿ ಅವರ 7ನೇ ಕ್ರಮಾಂಕದಲ್ಲಿ ಫಿನಿಶಿಂಗ್ ಜವಾಬ್ದಾರಿ ನಿರ್ವಹಿಸುತ್ತೀರಾ ಎಂಬ ಪ್ರಶ್ನೆಗೆ ಹಾರ್ದಿಕ್ ಪಾಂಡ್ಯ ಆಶ್ಚರ್ಯಕರ ಉತ್ತರ ನೀಡಿದ್ದಾರೆ.
ಲೋಯರ್ ಬ್ಯಾಕ್ (ಕೆಳಬೆನ್ನು) ಸರ್ಜರಿ ಬಳಿಕ ಭಾರತ ತಂಡಕ್ಕೆ ಮರಳಲು ಸಿದ್ದರಿರುವ ಹಾರ್ದಿಕ್ ಪಾಂಡ್ಯ ನ್ಯೂಜಿಲ್ಯಾಂಡ್ ಎ ವಿರುದ್ಧದ ಸರಣಿಗೆ ಭಾರತ ಎ ತಂಡದಲ್ಲಿ ಅವಕಾಶ ಗಿಟ್ಟಿಕೊಂಡಿದ್ದಾರೆ. ಮುಂದಿನ ವಿಶ್ವಕಪ್ನಲ್ಲಿ ಧೋನಿಗೆ ತಂಡದಲ್ಲಿ ಅವಕಾಶ ಸಿಗದಿದ್ದರೆ ನೀವು ಫಿನಿಶರ್ ಜವಾಬ್ದಾರಿ ನಿರ್ವಹಿಸುತ್ತೀರಾ ಎಂದು ಖಾಸಗಿ ಮಾಧ್ಯಮ ನಡೆಸಿದ ಸಂದರ್ಶನದಲ್ಲಿ ಉತ್ತರಿಸಿದ ಪಾಂಡ್ಯ, " ಧೋನಿ ಶೂ ಜಾಗವನ್ನು ತುಂಬಲು ಎಂದಿಗೂ ಸಾಧ್ಯವಿಲ್ಲ' ಎಂದು ಧೋನಿ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.
" ನನ್ನಿಂದ ಧೋನಿ ಶೂ ಜಾಗವನ್ನೂ ತುಂಬಲೂ ಸಾಧ್ಯವಿಲ್ಲ, ಆ ಬಗ್ಗೆ ನಾನು ಆಲೋಚನೆ ಮಾಡುವುದೂ ಇಲ್ಲ. ನಾನು ಸವಾಲುಗಳನ್ನು ಎದುರಿಸಲು ಕಾತುರದಿಂದ ಇದ್ದೇನೆ. ನಾನೇನೇ ಮಾಡಿದರೂ ಅದರಿಂದ ತಂಡಕ್ಕೆ ಅನುಕೂಲವಾಗಬೇಕೆಂದು ಬಯಸುತ್ತೇನೆ. ಇದೀಗ ಏಣಿಯ ಮೊದಲ ಹಂತದಲ್ಲಿದ್ದೇನೆ. ನಿಧಾನವಾಗಿ ವಿಶ್ವಕಪ್ ಕಡೆ ಗಮನ ನೀಡುತ್ತೇನೆ" ಎಂದು ಪಾಂಡ್ಯ ತಿಳಿಸಿದ್ದಾರೆ.
ವಿಶ್ವಕಪ್ ನಂತರ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ ಅವರೂ ಕೂಡ ಗಾಯದಿಂದ ಹೊರಗುಳಿದಿದ್ದಾರೆ. ಧೋನಿ ಮತ್ತೆ ಯಾವಾಗ ತಂಡ ಸೇರಿಕೊಳ್ಳುತ್ತಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಅಂದಿನಿಂದ ಭಾರತ ತಂಡದ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ರಿಷಭ್ ಪಂತ್ ನಿರ್ವಹಿಸುತ್ತಿದ್ದಾರೆ.