ಚೆನ್ನೈ: ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ದೈಹಿಕ ಚಟುವಟಿಕೆಯ ಕೊರತೆಯಿಂದ ದೇಹ ಜಡ್ಡುಗಟ್ಟಿದೆ. ಹೀಗಾಗಿ ಆಟಗಾರರು ಮ್ಯಾಚ್-ಫಿಟ್ನೆಸ್ ಸಾಧಿಸಲು ಕನಿಷ್ಠವೆಂದರೂ ನಾಲ್ಕು ವಾರಗಳನ್ನು ತೆಗೆದುಕೊಳ್ಳಬೇಕಿದೆ ಎಂದು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ತರಬೇತಿಯನ್ನು ಪುನರಾರಂಭಿಸಿದ ನಂತರ ಕ್ರಿಕೆಟಿಗರು ಕ್ರಮೇಣ ತೀವ್ರತೆಯನ್ನು ಹೆಚ್ಚಿಸಬೇಕಾಗುತ್ತದೆ ಎಂದು ಕಾರ್ತಿಕ್ ಹೇಳಿದರು.
ಪರಿವರ್ತನೆಯು ತುಂಬಾ ಕಠಿಣವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ದೇಹವನ್ನು ಮತ್ತೆ ಫಾರ್ಮಿಗೆ ತರಲು ಕನಿಷ್ಠ ನಾಲ್ಕು ವಾರಗಳಾದರೂ ಬೇಕಾಗುತ್ತದೆ.
ಲಾಕ್‌ಡೌನ್ ನಿಯಮಗಳು ಚೆನ್ನೈನಲ್ಲಿ ಸರಳವಾಗುತ್ತಿವೆ. ಆದ್ದರಿಂದ ಈಗ ಕ್ರೀಡಾಪಟುಗಳು ಅಭ್ಯಾಸ ಮಾಡಬಹುದು. ನಾನು ಕೂಡಾ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲು ಯೋಚಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.