ETV Bharat / sports

ಮಿಸ್ಬಾ ಮತ್ತು ಸಹಚರರು ತಂಡ ಬಿಟ್ಟರೆ ಮತ್ತೆ ಪಾಕ್ ಪರ ಆಡುವೆ; ಮೊಹಮ್ಮದ್ ಅಮೀರ್​

ಎರಡು ವರ್ಷಗಳ ಹಿಂದೆಯೇ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ 28 ವರ್ಷದ ವೇಗಿ ಕಳೆದ ತಿಂಗಳು ಪಿಸಿಬಿಯಿಂದ ತಾವೂ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದು, ನಿವೃತ್ತಿ ಘೋಷಿಸುವುದಾಗಿ ತಿಳಿಸಿದ್ದರು. ನಂತರ ಕೋಚ್​ಗಳಾದ ಮಿಸ್ಬಾ, ವಕಾರ್​ ಯೂನುಸ್​ ತಮ್ಮ ವರ್ಚಸ್ಸನ್ನು ನಾಶ ಮಾಡಿದರೆಂದು ಕಿಡಿಕಾರಿದ್ದರು.

ಮೊಹಮ್ಮದ್ ಅಮೀರ್​ ನಿವೃತ್ತಿ
ಮೊಹಮ್ಮದ್ ಅಮೀರ್​ ನಿವೃತ್ತಿ
author img

By

Published : Jan 18, 2021, 8:01 PM IST

ಕರಾಚಿ: ಕಳೆದ ತಿಂಗಳು ಎಲ್ಲಾ ಮಾದರಿಯ ಕ್ರಿಕೆಟ್​ಗೆ ದಿಢೀರ್​ ನಿವೃತ್ತಿ ಘೋಷಿಸಿ ಪಿಸಿಬಿ ವಿರುದ್ಧ ಕಿಡಿಕಾರಿದ್ದ ಎಡಗೈ ವೇಗಿ ಮೊಹಮ್ಮದ್ ಅಮೀರ್​, ಇದೀಗ ಮತ್ತೆ ತಾವು ಪಾಕಿಸ್ತಾನ ತಂಡದ ಪರ ಆಡಬೇಕಾದರೆ ಪ್ರಸ್ತುತ ಕೋಚ್​ ಆಗಿರುವ ಮಿಸ್ಬಾ ಉಲ್ ಹಕ್​ ಮತ್ತು ಅವರ ಸಹಚರರು ಪಾಕಿಸ್ತಾನ ತಂಡವನ್ನು ಬಿಟ್ಟು ಹೋಗಬೇಕೆಂದು ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆಯೇ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ 28 ವರ್ಷದ ವೇಗಿ ಕಳೆದ ತಿಂಗಳು ಪಿಸಿಬಿಯಿಂದ ತಾವು ಮಾನಸಿಕ ಕಿರುಕುಳ ಅನುಭವಿಸುತ್ತಿದ್ದು, ನಿವೃತ್ತಿ ಘೋಷಿಸುವುದಾಗಿ ತಿಳಿಸಿದ್ದರು. ನಂತರ ಕೋಚ್​ಗಳಾದ ಮಿಸ್ಬಾ, ವಕಾರ್​ ಯೂನುಸ್​ ತಮ್ಮ ವರ್ಚಸ್ಸನ್ನು ನಾಶ ಮಾಡಿದರೆಂದು ಕಿಡಿಕಾರಿದ್ದರು.

  • I would like to clarify that yes I will be available for Pakistan only once this management leaves. so please stop spreading fake news just to sell your story.

    — Mohammad Amir (@iamamirofficial) January 18, 2021 " class="align-text-top noRightClick twitterSection" data=" ">

"ಈಗಿರುವ ನಿರ್ವಹಣಾ ಮಂಡಳಿ ಪಿಸಿಬಿಯನ್ನು ತ್ಯಜಿಸಿದ ನಂತರ ಮತ್ತೆ ನಾನು ಪಾಕಿಸ್ತಾನ ತಂಡದ ಪರ ಆಡಲು ಲಭ್ಯನಾಗುತ್ತೇನೆ ಎಂದು ತಿಳಿಸಲು ಇಚ್ಛಿಸುತ್ತೇನೆ. ದಯವಿಟ್ಟು ನಿಮ್ಮ ಕಥೆಗಳನ್ನು ಮಾರಾಟ ಮಾಡಲು ಸುಳ್ಳುಸುದ್ದಿಯನ್ನು ಹಬ್ಬಿಸುವುದನ್ನು ಮೊದಲು ನಿಲ್ಲಿಸಿ." ಎಂದು ಅಮೀರ್ ಟ್ವಿಟರ್​ ಮೂಲಕ ತಿಳಿಸಿದ್ದಾರೆ.

ಕಳೆದ ವಾರವಷ್ಟೇ ಅಮೀರ್​ ತಾವು ದಿಢೀರ್​ ನಿವೃತ್ತಿ ಘೋಷಿಸುವುದಕ್ಕೆ ಡ್ರೆಸ್ಸಿಂಗ್​ ರೂಮ್​ನ ಪರಿಸರವೇ ಕಾರಣ. ಆಟಗಾರರಿಗೆ ಸ್ವಾತಂತ್ರ್ಯ ಸಿಗುತ್ತಿಲ್ಲ ಎಂದು ತಿಳಿಸಿದ್ದ ಅವರು, ಡ್ರೆಸ್ಸಿಂಗ್​ ರೂಂ ನಲ್ಲಿ ಭಯಾನಕ ವಾತಾವರಣವನ್ನು ಕೊನೆಗೊಳಿಸಿ, ನಂತರ ಆಟಗಾರರು ನಿಮಗೆ ಪಂದ್ಯಗಳನ್ನು ಗೆದ್ದುಕೊಡಲಿದ್ದಾರೆ ಎಂದು ಪಾಕ್ ತಂಡದ ಸಹಾಯಕ ಸಿಬ್ಬಂದಿಯನ್ನು ಟೀಕಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.