ETV Bharat / sports

ನಾನು ಯಾವ ಕ್ರಮಾಂಕದಲ್ಲಾದರು ಬ್ಯಾಟ್​ ಬೀಸಲು ಸಿದ್ದ: ಕ್ರಿಸ್ ಗೇಲ್

ಕಳೆದ ಬಾರಿಯ ಐಪಿಎಲ್​​ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಬ್ಯಾಟ್​ ಬಿಸಿದ್ದ ಗೇಲ್​, ಪಂಜಾಬ್ ಕಿಂಗ್ಸ್​​ನ ಮುಖ್ಯ ಕೋಚ್​ ಅನಿಲ್​​​ ಕುಂಬ್ಳೆ ಸಲಹೆ ಮೇರೆಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಬಿಸಿ ಕ್ಲಿಕ್​ ಕೂಡಾ​ ಆಗಿದ್ದರು.

Chris Gayle
ಕ್ರಿಸ್ ಗೇಲ್
author img

By

Published : Mar 2, 2021, 11:07 AM IST

ಸೇಂಟ್ ಜಾನ್ಸ್ [ಆಂಟಿಗುವಾ]: ವೆಸ್ಟ್ ಇಂಡೀಸ್‌ನ ಲೆಜೆಂಡರಿ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಮರಳಿ ತಂಡದಲ್ಲಿ ಸ್ಥಾನ ಪಡೆದಿದ್ದು, ತಾವು ಯಾವ ಕ್ರಮಾಂಕದಲ್ಲಿ ಬೇಕಾದರೂ ಆಡುತ್ತೇನೆ ಎಂದು ಹೇಳಿದ್ದಾರೆ.

ಯೂನಿವರ್ಸ್ - ಬಾಸ್ ಕ್ರಿಸ್ ಗೇಲ್ ಬ್ಯಾಟಿಂಗ್​ ನಲ್ಲಿ ಓಪನರ್​ ಆಗಿ ಕಣಕ್ಕಿಳಿದಿದ್ದೆ ಹೆಚ್ಚು. ಓಪನಿಂಗ್​ ಬ್ಯಾಟಿಂಗ್​​ ನಲ್ಲಿ ಉತ್ತಮ ಸ್ಟ್ರೈಕ್​​ ರೇಟ್​​ ಹೊಂದಿರುವ ಅವರು, ನಾನು ಯಾವ ಕ್ರಮಾಂಕದಲ್ಲಿ ಬೇಕಾದರೂ ಬ್ಯಾಟ್​ ಬೀಸಬಲ್ಲೆ ಎಂದು ಹೇಳಿದ್ದಾರೆ.

ಕಳೆದ ಬಾರಿಯ ಐಪಿಎಲ್​​ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಬ್ಯಾಟ್​ ಬಿಸಿದ್ದ ಗೇಲ್​, ಪಂಜಾಬ್ ಕಿಂಗ್ಸ್​​ನ ಮುಖ್ಯ ಕೋಚ್​ ಅನೀಲ್​ ಕುಂಬ್ಳೆ ಸಲಹೆ ಮೇರೆಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಬಿಸಿ ಕ್ಲಿಕ್​​​ ಆಗಿದ್ದರು.

"ನಾನು ಈಗ ಮೂರನೆಯ ನಂಬರ್ ಸ್ಪೆಷಲಿಸ್ಟ್ ಎಂದು ತೋರುತ್ತಿದೆ. ಕೋಚ್ ಅನಿಲ್ ಕುಂಬ್ಳೆ ನನ್ನನ್ನು ಮೂರನೇ ಕ್ರಮಾಂಕದಲ್ಲಿ ಆಡಲು ಹೇಳಿದ್ದರು. ಐಪಿಎಲ್ ಪ್ರಾರಂಭವಾಗುವ ಮೊದಲು ಅವರು ಅದನ್ನು ಪ್ರಸ್ತಾಪಿಸಿದ್ದರು. ಅದರಲ್ಲಿ ನನಗೆ ಯಾವುದೇ ಸಮಸ್ಯೆ ಇರಲಿಲ್ಲ. ಅಂತಿಮವಾಗಿ ನಾನು 3ನೇ ಕ್ರಮಾಮಕದಲ್ಲಿ ಬ್ಯಾಟ್​ ಬಿಸಿದ್ದೆ. ಮಾಯಾಂಕ್ ಅಗರ್ವಾಲ್ ಮತ್ತು ಕೆ.ಎಲ್. ರಾಹುಲ್ ಆ ಸಮಯದಲ್ಲಿ ತಂಡಕ್ಕೆ ಉತ್ತಮ ಓಪನಿಂಗ್​ ನೀಡುತ್ತಿದ್ದರು, ಹಾಗಾಗಿ ನಾನು ಮೂರನೇ ಕ್ರಮಾಂಕದಲ್ಲಿ ಆಡಿದ್ದೆ "ಎಂದು ಗೇಲ್ ಹೇಳಿದ್ದಾರೆ.

"ಇದು ಒಂದು ಸಮಸ್ಯೆಯಲ್ಲ. ನಾನು ಸ್ಪಿನ್ ಮತ್ತು ವೇಗದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿದ್ದೇನೆ, ಹಾಗಾಗಿ ನಾನು ಯಾವ ಕ್ರಮಾಂಕದಲ್ಲಾದರೂ ಬ್ಯಾಟ್​ ಮಾಡುತ್ತೇನೆ. ನಾನು ಮೂರರಿಂದ, ಐದನೇ ಕ್ರಮಾಂಕದವರೆಗೂ ಬ್ಯಾಟಿಂಗ್​ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಓದಿ : ಲಂಕಾ ವಿರುದ್ಧದ ಟಿ-20 ಸರಣಿಗೆ ವಿಡೀಸ್ ತಂಡ ಪ್ರಕಟ: ಗೇಲ್​, ಫಿಡಲ್​ಗೆ ಅವಕಾಶ!

"ನಾನು ನಿವೃತ್ತಿ ಘೋಷಿಸಿಸುವ ಯೋಚನೆಯಲ್ಲಿದ್ದೆ, ಆದರೆ, ಕೆಲವು ಸ್ನೇಹಿತರು ಮತ್ತು ಅಭಿಮಾನಿಗಳು ನಿವೃತ್ತಿ ಘೋಷಿಸದಂತೆ ಕೇಳಿಕೊಂಡಿದ್ದರು. ನಾನು ಫ್ರ್ಯಾಂಚೈಸಿ ಕ್ರಿಕೆಟ್ ಆಡಲು ಹೋಗುತ್ತೇನೆ, ಸಾಧ್ಯವಾದಷ್ಟು ಜನರನ್ನು ರಂಜಿಸುತ್ತೇನೆ, ಮತ್ತು ಕ್ರಿಸ್ ಗೇಲ್ ಅವರಿಂದ ಆಟದೊಳಗೆ ಏನು ನೀಡಲು ಉಳಿದಿದೆ, ಅದನ್ನು ನೀಡಲು ಬಯಸುತ್ತೇನೆ " ಎಂದು ಗೇಲ್ ಹೇಳಿಕೊಂಡಿದ್ದಾರೆ.

"ನನಗೆ ತಂಡದಲ್ಲಿ ಸ್ಥಾನ ನೀಡುವ ಬಗ್ಗೆ ಕರೆ ಬಂದಾಗ , ನೀವು ಆಡಲು ಸಿದ್ಧರಿದ್ದಾರ ಮತ್ತು ಆಸಕ್ತಿ ಹೊಂದಿದ್ದೀರಾ ಎಂದು ಅವರು ಕೇಳಿದ್ದರು. ನಾನು ಆಗ ಹೌದು, ನಾನು ವೆಸ್ಟ್ ಇಂಡೀಸ್ ಪರ ಆಡಲು ಬಯಸುತ್ತೇನೆ. ಅಲ್ಲಿಯೇ ನನ್ನ ಹೃದಯವಿದೆ. ನಾನು ಎಂದಿಗೂ ವೆಸ್ಟ್ ಇಂಡೀಸ್​​ಗೆ ಸಂಬಂಧಿಸಿದ ಯಾವುದನ್ನೂ ತಿರಸ್ಕರಿಸುವುದಿಲ್ಲ. ಈ ವರ್ಷ ಭಾರತದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಗೆಲ್ಲಲು ಬಯಸುತ್ತೇನೆ ಎಂದು ಗೇಲ್ ಭರವಸೆ ನೀಡಿದ್ದಾರೆ.

2012 ಮತ್ತು 2016 ಟಿ -20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದಲ್ಲಿ ಗೇಲ್ ಸ್ಥಾನ ಪಡೆದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.