ಸೇಂಟ್ ಜಾನ್ಸ್(ಆ್ಯಂಟಿಗುವಾ): ಜುಲೈ 8ರಿಂದ ಆರಂಭವಾಗಲಿರುವ 3 ಟೆಸ್ಟ್ಗಳ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳಲು ವೆಸ್ಟ್ ಇಂಡೀಸ್ ತಂಡ ಆ್ಯಂಟಿಗುವಾದಿಂದ ಇಂಗ್ಲೆಂಡ್ನತ್ತ ಹೊರಟಿದೆ.
ಪ್ರವಾಸಕ್ಕೆ ತೆರಳಿರುವ ಎಲ್ಲಾ ಆಟಗಾರರು ಕೋವಿಡ್ ಪರೀಕ್ಷೆಗಳನ್ನು ಪೂರ್ತಿಗೊಳಿಸಿದ್ದು, ಫಲಿತಾಂಶಗಳು ನೆಗೆಟಿವ್ ಬಂದಿರುವುದಾಗಿ ದೃಢಪಟ್ಟಿವೆ ಕ್ರಿಕೆಟ್ ಮಂಡಳಿ ತಿಳಿಸಿದೆ.
ಮಂಗಳವಾರ ಮ್ಯಾಂಚೆಸ್ಟರ್ ತಲುಪಿದ ನಂತರ ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿ ಮತ್ತೊಮ್ಮೆ ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಫಲಿತಾಂಶ ಬಂದ ನಂತರ ಬಯೋ ಸುರಕ್ಷಿತ ತಾಣದಲ್ಲಿ ಸರಣಿ ನಡೆಯಲಿದೆ.
ಕಳೆದ ಮೂರು ತಿಂಗಳಿನಿಂದ ಕೊರೊನಾ ಸಾಂಕ್ರಾಮಿಕ ರೋಗದ ಭೀತಿಯಿಂದ ಯಾವುದೇ ಕ್ರಿಕೆಟ್ ಪಂದ್ಯಗಳು ನಡೆದಿಲ್ಲ.
ಮೊದಲ ಟೆಸ್ಟ್ ಸೌತಂಪ್ಟನ್ನಲ್ಲಿ ಜುಲೈ 8ರಿಂದ ಆರಂಭವಾಗಲಿದೆ. ಎರಡನೇ ಟೆಸ್ಟ್ ಮ್ಯಾಂಚೆಸ್ಟರ್ನಲ್ಲಿ ಜುಲೈ 16-20, ಮೂರನೇ ಟೆಸ್ಟ್ ಜುಲೈ 24ರಿಂದ 28ರವರೆಗೆ ನಡೆಯಲಿದೆ.
ವೆಸ್ಟ್ ಇಂಡೀಸ್ ತಂಡ:
ಜಾಸನ್ ಹೋಲ್ಡರ್(ನಾಯಕ) ಜಮೈನ್ ಬ್ಲಾಕ್ವುಡ್, ನಕ್ರುಮ್ ಬಾನ್ನರ್, ಕ್ರೈಗ್ ಬ್ರಾಥ್ವೇಟ್, ಸರ್ಮಥ್ ಬ್ರೂಕ್ಸ್, ಜಾನ್ ಕ್ಯಾಂಪ್ಬೆಲ್, ರಾಸ್ಟನ್ ಚಸ್, ರಖೀಮ್ ಕಾರ್ನ್ವಾಲ್, ಶೇನ್ ಡೋರಿಚ್, ಚೆಮರ್ ಹೋಲ್ಡರ್, ಶಾಯ್ ಹೋಪ್, ಅಲ್ಝಾರಿ ಜೋಸೆಫ್ ರೇಮನ್ ರೀಫರ್, ಕೆಮರ್ ರೋಚ್