ಜಮೈಕಾ: ಪ್ರವಾಸಿ ಭಾರತದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಕೆರಿಬಿಯನ್ ಪಡೆ ಬೌಲಿಂಗ್ ಆಯ್ದುಕೊಂಡಿದ್ದು, ಟಾಸ್ ಸೋತ ಟೀಂ ಇಂಡಿಯಾ ಬ್ಯಾಟಿಂಗ್ ನಡೆಸಲಿದೆ.
ಈಗಾಗಲೇ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿಯಾಗಿ ಗೆಲುವು ದಾಖಲು ಮಾಡಿ ಟೆಸ್ಟ್ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮೊದಲ ಪಂದ್ಯದಲ್ಲಿ ಮೈದಾನಕ್ಕಿಳಿದಿದ್ದ ತಂಡವೇ ಇಲ್ಲೂ ಕಣಕ್ಕಿಳಿದಿದ್ದು, ನಾಯಕ ವಿರಾಟ್ ಕೊಹ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ.
ಕಿಂಗ್‌ಸ್ಟನ್‌ನ ಸಬಿನಾ ಪಾರ್ಕ್ ಸ್ಟೇಡಿಯಂನಲ್ಲಿ ಪಂದ್ಯ ಆರಂಭಗೊಂಡಿದ್ದು, ಸರಣಿಯ ಕೊನೆಯ ಪಂದ್ಯದಲ್ಲೂ ಗೆಲುವು ದಾಖಲು ಮಾಡಿ ವೈಟ್‌ವಾಶ್ ಮಾಡುವ ಗುರಿ ಕೊಹ್ಲಿ ಪಡೆಗಿದೆ. ಇನ್ನು ಎರಡನೇ ಪಂದ್ಯದಲ್ಲಿ ಗೆಲುವು ದಾಖಲು ಮಾಡಿ ಸರಣಿ ಸಮಬಲ ಮಾಡಿಕೊಳ್ಳುವ ಉದ್ದೇಶವನ್ನ ಹೋಲ್ಡರ್ ಪಡೆ ಹೊಂದಿದೆ. ಮೊದಲ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಹಾಗೂ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ,ಆರ್ ಅಶ್ವಿನ್,ಉಮೇಶ್ ಯಾದವ್ ಹಾಗೂ ಕುಲ್ದೀಪ್ ಯಾದವ್ಗೆ ಎರಡನೇ ಟೆಸ್ಟ್ ಪಂದ್ಯದಿಂದಲೂ ಹೊರಗಿಡಲಾಗಿದೆ.
-
#TeamIndia Playing XI for the 2nd Test against West Indies.#WIvIND pic.twitter.com/QE5VTKzJc3
— BCCI (@BCCI) August 30, 2019 " class="align-text-top noRightClick twitterSection" data="
">#TeamIndia Playing XI for the 2nd Test against West Indies.#WIvIND pic.twitter.com/QE5VTKzJc3
— BCCI (@BCCI) August 30, 2019#TeamIndia Playing XI for the 2nd Test against West Indies.#WIvIND pic.twitter.com/QE5VTKzJc3
— BCCI (@BCCI) August 30, 2019
ಟೀಂ ಇಂಡಿಯಾ: ಕೆಎಲ್ ರಾಹುಲ್,ಮಯಾಂಕ್ ಅಗರವಾಲ್,ಚೇತೇಶ್ವರ್ ಪೂಜಾರ್,ವಿರಾಟ್ ಕೊಹ್ಲಿ(ಕ್ಯಾಪ್ಟನ್)ಅಜಿಂಕ್ಯ ರಹಾನೆಎ,ಹನುಮ ವಿಹಾರಿ,ರಿಷಭ್ ಪಂತ್(ವಿ.ಕೀ),ರವೀಂದ್ರ ಜಡೇಜಾ, ಇಶಾಂತ್ ಶರ್ಮಾ,ಮೊಹಮ್ಮದ್ ಶಮಿ,ಜಸ್ಪ್ರೀತ್ ಬುಮ್ರಾ.