ETV Bharat / sports

ಈ ಯುವಕ ವಿಶ್ವಕಪ್​ ವಿಜೇತ ತಂಡದ ಭಾಗವಾಗುತ್ತಾನೆ: ಯುವ ಬೌಲರ್​ ಬಗ್ಗೆ ಗುಣಗಾನ ಮಾಡಿದ ಶ್ರೀಶಾಂತ್

ಆರ್​ಸಿಬಿಯಲ್ಲಿ ದೇವದತ್​ ಪಡಿಕ್ಕಲ್, ಕೋಲ್ಕತ್ತಾದಲ್ಲಿ ಶಿವಂ ಮಾವಿ, ಗಿಲ್, ನಾಗರ ಕೋಟಿ, ಡೆಲ್ಲಿ ತಂಡದಲ್ಲಿ ಪೃಥ್ವಿ ಶಾ, ರಾಜಸ್ಥಾನ್​ ತಂಡದಲ್ಲಿ ಕಾರ್ತಿಕ್ ತ್ಯಾಗಿ ಪಂಜಾಬ್ ತಂಡದಲ್ಲಿ ರವಿ ಬಿಷ್ನೋಯ್​, ಕ್ರಿಕೆಟ್​ ದಿಗ್ಗಜರ ಗಮನ ಸೆಳೆದಿದ್ದಾರೆ.

ಐಪಿಎಲ್ 2020
ತ್ಯಾಗಿ ಬಗ್ಗೆ ಶ್ರೀಶಾಂತ್​
author img

By

Published : Oct 8, 2020, 8:37 PM IST

ಮುಂಬೈ: 13ನೇ ಆವೃತ್ತಿಯಲ್ಲಿ ಅನುಭವಿಗಳ ಜೊತೆ ಜೊತೆಗೆ ಯುವ ಆಟಗಾರರಿಗೂ ಹೆಚ್ಚಿನ ಅವಕಾಶ ಕೊಡಲಾಗುತ್ತಿದೆ. ಇದಕ್ಕೆ ತಕ್ಕಂತೆ ಆ ಯುವ ಆಟಗಾರರು ಆಡಿರುವ ಕೆಲವೇ ಪಂದ್ಯಗಳಲ್ಲಿ ಕ್ರಿಕೆಟ್​ ಪಂಡಿತರ ಗಮನ ಸೆಳೆಯಲು ಶುರುಮಾಡಿದ್ದಾರೆ.

ಆರ್​ಸಿಬಿಯಲ್ಲಿ ದೇವದತ್​ ಪಡಿಕ್ಕಲ್, ಕೋಲ್ಕತ್ತಾದಲ್ಲಿ ಶಿವಂ ಮಾವಿ, ಗಿಲ್, ನಾಗರ ಕೋಟಿ, ಡೆಲ್ಲಿ ತಂಡದಲ್ಲಿ ಪೃಥ್ವಿ ಶಾ, ರಾಜಸ್ಥಾನ್​ ತಂಡದಲ್ಲಿ ಕಾರ್ತಿಕ್ ತ್ಯಾಗಿ ಪಂಜಾಬ್ ತಂಡದಲ್ಲಿ ರವಿ ಬಿಷ್ನೋಯ್​, ಕ್ರಿಕೆಟ್​ ದಿಗ್ಗಜರ ಗಮನ ಸೆಳೆದಿದ್ದಾರೆ.

ಕಾರ್ತಿಕ್ ತ್ಯಾಗಿ
ಕಾರ್ತಿಕ್ ತ್ಯಾಗಿ

ಎರಡು ದಿನಗಳ ಹಿಂದೆಯಷ್ಟೇ ಮುಂಬೈ ಇಂಡಿಯನ್ಸ್‌ ವಿರುದ್ಧ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್ ಪರ ಪದಾರ್ಪಣೆ ಮಾಡಿದ್ದ ಯುವ ವೇಗಿ ಕಾರ್ತಿಕ್‌ ತ್ಯಾಗಿ ಕೂಡ ಬ್ರೆಟ್​ ಲೀ, ಬೆನ್​ಸ್ಟೋಕ್ಸ್​ರಂತಹ ದಿಗ್ಗಜರಿಂದ ಮೆಚ್ಚುಗೆ ಪಡೆದಿದ್ದರು. ಇದೀಗ ಭಾರತ ಎರಡು ವಿಶ್ವಕಪ್​ ಗೆದ್ದ ತಂಡದಲ್ಲಿದ್ದ ಟೀಮ್​ ಇಂಡಿಯಾ ವೇಗಿ ಶ್ರೀಶಾಂತ್​ ಕೂಡ ತ್ಯಾಗಿ ಭವಿಷ್ಯದಲ್ಲಿ ಯಶಸ್ವಿ ಬೌಲರ್ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಬುಮ್ರಾ ಜೊತೆ ಕಾರ್ತಿಕ್ ತ್ಯಾಗಿ
ಬುಮ್ರಾ ಜೊತೆ ಕಾರ್ತಿಕ್ ತ್ಯಾಗಿ

ಕಾರ್ತಿಕ್‌ ತ್ಯಾಗಿ ಅಂಡರ್​ 19 ವಿಶ್ವಕಪ್‌ನಲ್ಲಿ ಭಾರತ ಫೈನಲ್​ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧ ಪದಾರ್ಪಣೆ ಮಾಡಿದ ಮೊದಲನೇ ಓವರ್‌ನಲ್ಲಿ ಕ್ವಿಂಟನ್‌ ಡಿ ಕಾಕ್‌ ಅವರ ವಿಕೆಟ್‌ ಪಡೆಯುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದರು.

ಯಾರಾದರೂ ಸಾಕಷ್ಟು ಶ್ರಮವಿಲ್ಲದೇ ಬೌಲಿಂಗ್ ಮಾಡುವುದನ್ನ ನೋಡುವುದೇ ಅದ್ಭುತ. ನಾನು ವಾರ್ವಿಕ್​ಶೈರ್​ನಲ್ಲಿದ್ದಾಗ ಅಲನ್ ಡೊನಾಲ್ಡ್​ ಸರ್​ ಕೂಡ ನನಗೆ ಇದನ್ನೆ ಹೇಳುತ್ತಿದ್ದರು. ಶ್ರಮವಿಲ್ಲದೇ ವೇಗ ಬ್ಯಾಟ್ಸ್​ಮನ್​ಗಳಿಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ತ್ಯಾಗಿ ಒಬ್ಬ ಕಠಿಣ ಪರಿಶ್ರಮಿ ಕ್ರಿಕೆಟರ್​ ಎಂದು ಖಾಸಗಿ ವೆಬ್​ ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಶ್ರೀಶಾಂತ್​ ಯುವ ಬೌಲರ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾನು ಅವನು(ತ್ಯಾಗಿ) ಕೌಶಲಗಳನ್ನು ಅಭ್ಯಾಸ ಮಾಡುವ ಸಂದರ್ಭದಲ್ಲಿ ನೋಡುತ್ತಿದ್ದೇನೆ. ಇಂತಹ ಯುವ ಬೌಲರ್‌ಗಳು ಬರುತ್ತಿರುವುದು ಭಾರತೀಯ ಕ್ರಿಕೆಟ್‌ಗೆ ಒಳ್ಳೆಯದು. ಕೋಲ್ಕತಾ ನೈಟ್‌ ರೈಡರ್ಸ್‌ನ ಶಿವಂ ಮಾವಿ ಹಾಗೂ ಕಮಲೇಶ್‌ ನಾಗರಕೋಟಿ ಕೂಡ ತಮ್ಮ ಬೌಲಿಂಗ್‌ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ," ಎಂದು ಎಸ್‌ ಶ್ರೀಶಾಂತ್‌ ತಿಳಿಸಿದ್ದಾರೆ.

ಕಾರ್ತಿಕ್ ತ್ಯಾಗಿ
ಕಾರ್ತಿಕ್ ತ್ಯಾಗಿ

" ಮುಂಬರುವ ವರ್ಷಗಳಲ್ಲಿ ವಿಶ್ವ ಕ್ರಿಕೆಟ್​ನ ಎಲ್ಲಾ ಮಾದರಿಯಲ್ಲೂ ಕಾರ್ತಿಕ್‌ ತ್ಯಾಗಿ ಭಾರತ ತಂಡವನ್ನು ಪ್ರತಿನಿಧಿಸುವುದನ್ನು ನಾನು ಖಂಡಿತ ನೋಡುತ್ತೇನೆ. ಅವರು ಪಂದ್ಯವನ್ನು ಗೆಲ್ಲಿಸಿಕೊಡಬಲ್ಲ ಬೌಲರ್​ಮತ್ತು ಭವಿಷ್ಯದಲ್ಲಿ ಭಾರತ ತಂಡದೊಂದಿಗೆ ವಿಶ್ವಕಪ್ ಕೂಡ ಗೆಲ್ಲಬಹುದು ಎಂದು ನಾನು ನಂಬುತ್ತೇನೆ.

ಆದರೆ, ಆತನಿಗೆ ನಾನು ಒಂದೇ ಒಂದು ಸಲಹೆಯನ್ನು ನೀಡಲು ಬಯಸುತ್ತೇನೆ. ಅದೇನೆಂದರೆ, ಆತ ಬೌಲಿಂಗ್ ಮಾಡುವಾಗ ಇನ್ನೂ ಸ್ವಲ್ಪ ಜಂಪ್‌ ಮಾಡಬೇಕು ಹಾಗೂ ಕ್ರೀಸ್‌ ಅನ್ನು ಸರಿಯಾಗಿ ಬಳಸಿಕೊಳ್ಳಬೇಕು. ಈ ಸಣ್ಣ ತಪ್ಪುಗಳನ್ನು ತಿದ್ದಿಕೊಂಡರೆ ತ್ಯಾಗಿ ಇನ್ನಷ್ಟು ಅತ್ಯುತ್ತಮ ಬೌಲರ್‌ ಆಗುತ್ತಾನೆ," ಎಂದು ಶ್ರೀಶಾಂತ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.