ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 51 ರನ್‌ಗಳ ಅಂತರದಿಂದ ಟೀಂ ಇಂಡಿಯಾ ಸೋಲು ಕಂಡಿದೆ. ಸಿಡ್ನಿ ವಿಕೆಟ್‌ನಲ್ಲಿ ಹೇಗೆ ಬೌಲಿಂಗ್ ಮಾಡಬೇಕು ಎಂದು ಹಾರ್ದಿಕ್ ಪಾಂಡ್ಯ ತೋರಿಸಿಕೊಟ್ಟಿದ್ದಾರೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ನಾವು ಪರಿಣಾಮಕಾರಿಯಾದ ಬೌಲಿಂಗ್ ಪ್ರದರ್ಶನ ತೋರಲಿಲ್ಲ. ಅಲ್ಲದೆ ನಾವು ಬಯಸಿದ ಪ್ರದೇಶಗಳಲ್ಲಿ ಚೆಂಡನ್ನು ಸ್ಥಿರವಾಗಿ ಹೊಡೆಯಲು ಸಾಧ್ಯವಾಗಲಿಲ್ಲ ಎಂದು ವಿರಾಟ್ ಸೋಲಿಗೆ ಕಾರಣ ಬಿಚ್ಚಿಟ್ಟಿದ್ದಾರೆ.
ಪಾಂಡ್ಯ ಈ ಪಿಚ್‌ನಲ್ಲಿ ಹೇಗೆ ಬೌಲಿಂಗ್ ಮಾಡಬೇಕು ಎಂದು ತೋರಿಸಿಕೊಟ್ಟಿದ್ದಾರೆ. ಬಹಳಷ್ಟು ಆಸೀಸ್ ಬೌಲರ್ಗಳು ಕಟ್ಟರ್‌ಗಳನ್ನು ಬೌಲ್ ಮಾಡಿದರು. ಕೊನೆಯ 10 ಓವರ್ಗೆ 100 ರನ್ ಬೇಕಿದ್ದರೂ ಹಾರ್ದಿಕ್ ಜೊತೆ ಬ್ಯಾಟಿಂಗ್ ಮಾಡಿ ಗಳಿಸಬಹುದು ಎಂದು ನಾನು ಮತ್ತು ರಾಹುಲ್ ಯೋಚನೆ ಮಾಡಿದ್ವಿ. ನಾನು ಅಥವಾ ರಾಹುಲ್ 40ನೇ ಓವರ್‌ವರೆಗೆ ಕ್ರೀಸ್ನಲ್ಲಿ ಇದ್ದಿದ್ದರೆ ಅವರ ಮೇಲೆ ಒತ್ತಡ ಹೇರಬಹುದಿತ್ತು ಎಂದು ವಿರಾಟ್ ಹೇಳಿದ್ದಾರೆ.
ಬೆನ್ನತ್ತಿ ಗೆಲ್ಲುವ ಬಲ ಕಳೆದುಕೊಂಡ ಟೀಂ ಇಂಡಿಯಾ.. ಆಸೀಸ್ ಮುಡಿಗೆ ಏಕದಿನ ಸರಣಿ
ಮೊದಲ ಏಕದಿನ ಪಂದ್ಯದ ಬಳಿಕ ಮಾತನಾಡಿದ್ದ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲು ಸಂಪೂರ್ಣವಾಗಿ ಫಿಟ್ ಆಗಿಲ್ಲ ಎಂದಿದ್ದರು. ಆದರೆ, ಎರಡನೇ ಪಂದ್ಯದಲ್ಲಿ ಪಾಂಡ್ಯ ಬೌಲಿಂಗ್ ಮಾಡಿ ಮಿಂಚಿದ್ದಾರೆ. ಪಾಂಡ್ಯ 4 ಓವರ್ ಬೌಲಿಂಗ್ ನಡೆಸಿ 24 ರನ್ ಬಿಟ್ಟುಕೊಟ್ಟು ಸ್ಟೀವ್ ಸ್ಮಿತ್ ವಿಕೆಟ್ ಪಡೆದುಕೊಂಡಿದ್ದಾರೆ.