ಲಂಡನ್: ವಿಶ್ವಕಪ್ ಅಭ್ಯಾಸ ಪಂದ್ಯದಿಂದಲೂ ವಾರ್ನರ್ ಹಾಗೂ ಸ್ಮಿತ್ರನ್ನು ಚೀಟರ್ಸ್ ಎಂದು ಕೂಗಿ ಅವಮಾನಿಸುತ್ತಿದ್ದ ಇಂಗ್ಲೆಂಡ್ ಅಭಿಮಾನಿಗಳು ವಿಶ್ವಕಪ್ ಅರ್ಧಕ್ಕಿಂದ ಹೆಚ್ಚು ಪಂದ್ಯಗಳು ಮುಗಿದರೂ ಇನ್ನೂ ಆಸೀಸ್ ಆಟಗಾರರನ್ನು ನಿಂದಿಸುವುದನ್ನು ಮಾತ್ರ ಬಿಟ್ಟಿಲ್ಲ.
ನಿನ್ನೆ ಲಾರ್ಡ್ಸ್ನಲ್ಲಿ ನಡೆದ ಪಂದ್ಯದಲ್ಲಿ ವಾರ್ನರ್ ಭರ್ಜರಿ ಅರ್ಧಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ ವಾರ್ನರ್ ಮೈದಾನಕ್ಕೆ ಬರುತ್ತಿದ್ದಂತೆ ಇಂಗ್ಲೆಂಡ್ ಅಭಿಮಾನಿಗಳು ಮತ್ತೆ ಕೆಟ್ಟದಾಗಿ ಪ್ರವರ್ತಿಸಿದ್ದಾರೆ. ಅಲ್ಲದೇ ಆಸ್ಟ್ರೇಲಿಯಾ ತಂಡದ ಆಟಗಾರರು ಬೌಂಡರಿ ಹೊಡೆದಾಗಲೂ ಚಪ್ಪಾಳೆ ತಟ್ಟದೇ ಕ್ರೀಡಾಸ್ಪೂರ್ತಿ ಮರೆತಿದ್ದಾರೆ. ಇದನ್ನು ಭಾರತ ತಂಡದ ಮಾಜಿ ಕ್ರಿಕೆಟಿಗ ಆಕಾಶ್ ಚೊಪ್ರಾ ತೀವ್ರವಾಗಿ ಖಂಡಿಸಿದ್ದಾರೆ.
-
English crowed at Lord’s utterly disappointing....didn’t hear a clap for Warner’s half century. Very very poor taste. #EngvAus #CWC19
— Aakash Chopra (@cricketaakash) June 25, 2019 " class="align-text-top noRightClick twitterSection" data="
">English crowed at Lord’s utterly disappointing....didn’t hear a clap for Warner’s half century. Very very poor taste. #EngvAus #CWC19
— Aakash Chopra (@cricketaakash) June 25, 2019English crowed at Lord’s utterly disappointing....didn’t hear a clap for Warner’s half century. Very very poor taste. #EngvAus #CWC19
— Aakash Chopra (@cricketaakash) June 25, 2019
ಇಂಗ್ಲೆಂಡ್ ಅಭಿಮಾನಿಗಳ ಈ ದುರ್ವರ್ತನೆ ಗಮನಿಸಿರುವ ಖಂಡಿಸಿರುವ ಭಾರತೀಯ ಮಾಜಿ ಆಟಗಾರ ಆಕಾಶ್ ಚೊಪ್ರಾ " ವಾರ್ನರ್ ಅರ್ಧಶತಕ ಬಾರಿಸಿದರು ಲಾರ್ಡ್ಸ್ನಲ್ಲಿ ನೆರೆದಿದ್ದ ಸಾವಿರಾರು ಸಂಖ್ಯೆಯ ಅಭಿಮಾನಿಗಳು ನಡೆದುಕೊಂಡ ರೀತಿ ನಿಜಕ್ಕೂ ಬೇಸರತಂದಿದೆ. ಇದು ತುಂಬಾ ಕೆಟ್ಟ ಅಭಿರುಚಿ" ಎಂದು ಟ್ವೀಟ್ ಮಾಡಿ ತಮ್ಮ ಬೇಸರ ಹೊರ ಹಾಕಿದ್ದಾರೆ.
ಭಾರತದ ಅಭಿಮಾನಿಗಳು ಕೂಡ ಸ್ಮಿತ್ರನ್ನು ಹಿಯಾಳಿಸಿದ್ದರು. ಆ ವೇಳೆ ಸಿಟ್ಟಿಗೆದ್ದಿದ್ದ ಟೀಮ್ ಇಂಡಿಯಾ ನಾಯಕ ಉತ್ತಮವಾಗಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಸ್ಮಿತ್ರನ್ನು ಚೆಪ್ಪಾಳೆ ತಟ್ಟಿ ಪ್ರೋತ್ಸಾಹಿಸುವಂತೆ ಮೈದಾನದಿಂದಲೇ ಕೇಳಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗಿ ಕೊಹ್ಲಿಯನ್ನು ಇಡೀ ಕ್ರಿಕೆಟ್ ಜಗತ್ತು ಕೊಂಡಾಡಿತ್ತು.