ETV Bharat / sports

ಮಹಿಳೆಯರ ಬಿಬಿಎಎಲ್​: ಮೆಲ್ಬೋರ್ನ್ಸ್​ ಸ್ಟಾರ್ ತಂಡಕ್ಕೆ ಮರಳಿದ ಆಸ್ಟ್ರೇಲಿಯಾ ನಾಯಕಿ

author img

By

Published : Jul 22, 2020, 4:58 PM IST

ಮೆಗ್​ ಲ್ಯಾನಿಂಗ್​ ಬಿಬಿಎಲ್​ನಲ್ಲಿ ಒಟ್ಟಾರೆ 51 ಪಂದ್ಯಗಳನ್ನಾಡಿದ್ದು, 1982 ರನ್​ಗಳಿಸಿದ್ದಾರೆ. ಒಂದು ಶತಕ ಹಾಗೂ 19 ಅರ್ಧಶತಕ ಸಿಡಿಸಿದ್ದಾರೆ.

ಮೆಗ್​ ಲ್ಯಾನಿಂಗ್​
ಮೆಗ್​ ಲ್ಯಾನಿಂಗ್​

ಮೇಲ್ಬೋರ್ನ್​: ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್​ ಲ್ಯಾನಿಂಗ್​ ಮತ್ತೆ ಮೆಲ್ಬೋರ್ನ್​ ಸ್ಟಾರ್​ ತಂಡದ ಪರ 6ನೇ ಮಹಿಳಾ ಬಿಗ್​ಬ್ಯಾಶ್​ ಲೀಗ್​ನಲ್ಲಿ ಕಣಕ್ಕಿಳಿಯುತ್ತಿದ್ದಾರೆ.

ಲ್ಯಾನಿಂಗ್​ ಉದ್ಘಾಟನಾ ಲೀಗ್​ನಲ್ಲಿ ಸ್ಟಾರ್ಸ್​ ತಂಡದ ನಾಯಕಿಯಾಗಿದ್ದರು. ಅವರು ಮೊದಲೆರಡು ಆವೃತ್ತಿಗಳಲ್ಲಿ ಸ್ಟಾರ್​ ಪರ 27 ಪಂದ್ಯಗಳನ್ನಾಡಿದ್ದರು. ಅವರು ಒಟ್ಟಾರೆ 1062 ರನ್​ಗಳಿಸಿ ಎರಡು ಆವೃತ್ತಿಗಳಲ್ಲೂ ಗರಿಷ್ಠ ಸ್ಕೋರರ್​ ಆಗಿದ್ದರು. ನಂತರ 3,4, ಹಾಗೂ 5ನೇ ಆವೃತ್ತಿಯಲ್ಲಿ ಪರ್ತ್​ ಸ್ಕಾರ್ಚರ್ಸ್​ ತಂಡದ ಪರ ಆಡಿದ್ದರು.

ಈ ಮೂರು ಆವೃತ್ತಿಗಳಲ್ಲಿ ನನಗೆ ಬೆಂಬಲ ನೀಡಿದ ಪರ್ತ್​ ತಂಡದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಲು ಇಷ್ಟಪಡುತ್ತೇನೆ. ಹಾಗೂ ಮತ್ತೆ ಮೆಲ್ಬೋರ್ನ್​ ಸ್ಟಾರ್ಸ್​ ತಂಡಕ್ಕೆ ವಾಪಾಸ್ಸಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಲ್ಯಾನಿಂಗ್​ ತಿಳಿಸಿದ್ದಾರೆ.

28 ವರ್ಷದ ಲ್ಯಾನಿಂಗ್​ 3ನೇ ಆವೃತ್ತಿಯ ಲೀಗ್​ಗೂ ಮುನ್ನ ಪರ್ತ್​ ಸ್ಕಾರ್ಚರ್ಸ್​ ಜೊತೆ 3 ವರ್ಷಗಳ ಒಪ್ಪಂದಕ್ಕೆ ಸಹಿಯಾಕಿದ್ದರು. ಆದರೆ ಮೊದಲ ಸೀಸನ್​ನಲ್ಲಿ ಗಾಯದ ಕಾರಣ ಆಡಿರಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.