ದುಬೈ: ಸತತ ಮೂರು ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಗೆಲುವಿನ ಹಳಿಗೆ ಮರಳಿದೆ.
ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಬಲಿಷ್ಟ ಮುಂಬೈ ಇಂಡಿಯನ್ಸ್ ತಂಡವನ್ನೇ ಬಗ್ಗಬಡಿದಿದ್ದ ಧೋನಿ ಬಳಗ ನಂತರ ಸತತ ಮೂರು ಪಂದ್ಯಗಳಲ್ಲಿ ಸೋಲನುಭವಿಸಿ ಟೀಕೆಗೆ ಗುರಿಯಾಗಿತ್ತು. ಆದರೆ ಇಂದಿನ ಪಂದ್ಯದಲ್ಲಿ ತಿರುಗಿಬಿದ್ದ ಚೆನ್ನೈ 179 ರನ್ಗಳ ಗುರಿಯನ್ನು ಇನ್ನು 14 ಎಸೆತಗಳು ಬಾಕಿಯುಳಿದಿರುವಂತೆ ಜಯ ಸಾಧಿಸಿದೆ.
ಅನುಭವಿಗಳಾದ ಶೇನ್ ವಾಟ್ಸನ್ ಹಾಗೂ ಪ್ಲೆಸಿಸ್ ಪಂಜಾಬ್ ಬೌಲರ್ಗಳನ್ನು ಮನಬಂದಂತೆ ದಂಡಿಸಿ ಬೌಂಡರಿ-ಸಿಕ್ಸರ್ಗಳ ಸುರಿಮಳೆ ಸುರಿಸಿದರು. ಶೇನ್ ವಾಟ್ಸನ್ 53 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 83 ರನ್ ಸಿಡಿಸಿದರೆ, ಪ್ಲೆಸಿಸ್ 53 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 87 ರನ್ ಕಲೆಯಾಕಿ ತಂಡವನ್ನು ಗೆಲುವಿನ ದಡ ಸೇರಿಸಿದರು.
-
An emphatic win by @ChennaiIPL in Match 18 of #Dream11IPL.
— IndianPremierLeague (@IPL) October 4, 2020 " class="align-text-top noRightClick twitterSection" data="
Second 10 wickets win for #CSK. Their first one was also against KXIP in 2013.
They are also the first team in #Dream11IPL 2020 to win batting second in Dubai. pic.twitter.com/qh77Wrc27J
">An emphatic win by @ChennaiIPL in Match 18 of #Dream11IPL.
— IndianPremierLeague (@IPL) October 4, 2020
Second 10 wickets win for #CSK. Their first one was also against KXIP in 2013.
They are also the first team in #Dream11IPL 2020 to win batting second in Dubai. pic.twitter.com/qh77Wrc27JAn emphatic win by @ChennaiIPL in Match 18 of #Dream11IPL.
— IndianPremierLeague (@IPL) October 4, 2020
Second 10 wickets win for #CSK. Their first one was also against KXIP in 2013.
They are also the first team in #Dream11IPL 2020 to win batting second in Dubai. pic.twitter.com/qh77Wrc27J
ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನ ತೋರಿದ ಪಂಜಾಬ್ ತಂಡದ ಯಾವುದೇ ಬೌಲರ್ ಕೂಡ ಈ ಹಿರಿಯ ಜೋಡಿಗಳಿಗೆ ಸರಿಸಾಟಿಯಾಗಲಿಲ್ಲ. ಕಾಟ್ರೆಲ್ 3 ಓವರ್ಗಳಲ್ಲಿ 30 ರನ್, ಶಮಿ 3.4 ಓವರ್ಗಳಲ್ಲಿ 35, ಹರ್ಪ್ರೀತ್ ಬ್ರಾರ್ 4 ಓವರ್ಗಳಲ್ಲಿ 40 , ರವಿ ಬಿಷ್ಣೋಯ್ 4 ಓವರ್ಗಳಲ್ಲಿ 33, ಕ್ರಿಸ್ ಜೋರ್ಡನ್ 3 ಓವರ್ಗಳಲ್ಲಿ 42 ರನ್ ಬಿಟ್ಟುಕೊಟ್ಟು ದುಬಾರಿಯಾದರು.
ಇದಕ್ಕು ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡ ರಾಹುಲ್ ಅವರ 63, ಅಗರ್ವಾಲ್ 26, ಪೂರನ್ 33, ,ಮಂದೀಪ್ ಸಿಂಗ್ 27 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 178 ರನ್ಗಳಿಸಿತ್ತು.
ಸಿಎಸ್ಕೆ ಪರ ಶಾರ್ದುಲ್ ಠಾಕೂರ್ 2 ವಿಕೆಟ್ ಪಡೆದರೆ, ಅನುಭವಿ ಪಿಯೂಷ್ ಚಾವ್ಲಾ ಹಾಗೂ ದೀಪಕ್ ಚಹಾರ್ ತಲಾ ಒಂದು ವಿಕೆಟ್ ಪಡೆದಿದ್ದರು.