ಸೂರತ್: 15 ವರ್ಷದ ಶೆಫಾಲಿ ವರ್ಮಾ ಭಾರತ ತಂಡದ ಪರ ಟಿ20 ಕ್ರಿಕೆಟ್ಗೆ ಕಾಲಿಟ್ಟ 2ನೇ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
15 ವರ್ಷದ ಶೆಫಾಲಿ ಮಂಗಳವಾರ ಸೂರತ್ನಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಆರಂಭಿಕರಾಗಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಮೂಲಕ ಗಾರ್ಗಿ ಬ್ಯಾನರ್ಜಿ(14 ವರ್ಷ,165 ದಿನಗಳು) ನಂತರ ಭಾರತ ತಂಡ ಸೇರಿದ ಎರಡನೇ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಶೆಫಾಲಿ ಪಾತ್ರರಾಗಿದ್ದಾರೆ.
ಗಾರ್ಗಿ ಬ್ಯಾನರ್ಜಿ 14 ವರ್ಷ 165 ದಿನಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಟಿ20 ಕ್ರಿಕೆಟ್ಗೆ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ದೇಶಿ ಕ್ರಿಕೆಟ್ನಲ್ಲಿ ರನ್ ಹೊಳೆಯನ್ನೆ ಹರಿಸಿರುವ ಶೆಫಾಲಿ ವರ್ಮಾರನ್ನು ಆಯ್ಕೆ ಸಮಿತಿ ತಂಡಕ್ಕೆ ಸೇರಿಸಿಕೊಂಡಿದೆ.
-
What a moment this is for the hard-hitting batter Shafali Verma, who makes her India debut today. She is only 15! 😊💪🏾#INDWvsSAW pic.twitter.com/nD0C6ApQld
— BCCI Women (@BCCIWomen) September 24, 2019 " class="align-text-top noRightClick twitterSection" data="
">What a moment this is for the hard-hitting batter Shafali Verma, who makes her India debut today. She is only 15! 😊💪🏾#INDWvsSAW pic.twitter.com/nD0C6ApQld
— BCCI Women (@BCCIWomen) September 24, 2019What a moment this is for the hard-hitting batter Shafali Verma, who makes her India debut today. She is only 15! 😊💪🏾#INDWvsSAW pic.twitter.com/nD0C6ApQld
— BCCI Women (@BCCIWomen) September 24, 2019
ಸೊನ್ನೆಗೆ ವಿಕೆಟ್ ನೀಡಿ ಸಚಿನ್ ನೆನಪಿಸಿದ ಶೆಫಾಲಿ!
ಭಾರತ ಕ್ರಿಕೆಟ್ನ ಲೆಜೆಂಡರಿ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ಅವರನ್ನು ಸ್ಫೂರ್ತಿಯಾಗಿಸಿಕೊಂಡಿದ್ದ ಶೆಫಾಲಿ ಅವರು ಸಚಿನ್ ಅವರಂತೆಯೇ ಮೊದಲ ಪಂದ್ಯದಲ್ಲಿ ಡಕ್ಔಟ್ ಆಗಿದ್ದಾರೆ. ಸಚಿನ್ ಕೂಡ ತಮ್ಮ1989ರಲ್ಲಿ ಪಾಕಿಸ್ತಾನ ವಿರುದ್ಧ ತಮ್ಮ ಡೆಬ್ಯೂ ಏಕದಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು.