ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ 4ನೇ ಟೆಸ್ಟ್ನಲ್ಲಿ ಭಾರತ ತಂಡದ ಅನಾನುಭವಿ ಬೌಲಿಂಗ್ ವಿಭಾಗವನ್ನು ಮೆಚ್ಚಿ ಮಾತನಾಡಿರುವ ಆಸೀಸ್ ಸಹಾಯಕ ಕೋಚ್ ಆಂಡ್ರ್ಯೂ ಮೆಕ್ಡೊನಾಲ್ಡ್, ಯುವ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅನುಭವಿ ರವಿ ಚಂದ್ರನ್ ಸ್ಥಾನವನ್ನು ತುಂಬಲು ಸಮರ್ಥ ಬೌಲರ್ ಎಂದು ಕೊಂಡಾಡಿದ್ದಾರೆ.
ಸರಣಿಯಲ್ಲಿ ತಂಡದ ಬೌಲರ್‌ಗಳು ಗಾಯಕ್ಕೊಳಾದ ಹಿನ್ನೆಲೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಅನಿವಾರ್ಯವಾಗಿ ಅನಾನಭವಿಗಳ ಮೊರೆ ಹೋಗಬೇಕಾಗಿದೆ. ಆದರೆ, ಪದಾರ್ಪಣೆ ಪಂದ್ಯದಲ್ಲೇ ತಮ್ಮ ಆಯ್ಕೆ ಸಮರ್ಥಿಸಿಕೊಂಡ ನಟರಾಜನ್ 78ಕ್ಕೆ3, ಸುಂದರ್ 89ಕ್ಕೆ3 ವಿಕೆಟ್ ಪಡೆದು ಮಿಂಚಿದ್ದಾರೆ. ವಿಶೇಷ ಎಂದರೆ ಈ ಇಬ್ಬರು ಆಸ್ಟ್ರೇಲಿಯಾಕ್ಕೆ ನೆಟ್ಬೌಲರ್ ಆಗಿ ಉಳಿದುಕೊಂಡಿದ್ದರು.
" ಭಾರತೀಯ ಬೌಲರ್‌ಗಳು ಬಹಳ ಸ್ಥಿರತೆಯೊಂದಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅದರಲ್ಲೂ ವಾಷಿಂಗ್ಟನ್ ಸುಂದರ್ ಶಿಸ್ತುಬದ್ಧ ಹಾಗೂ ರವಿಚಂದ್ರನ್ ಅಶ್ವಿನ್ ಅವರ ಪಾತ್ರವನ್ನು ಯಶಸ್ವಿಯಾಗಿ ತುಂಬಿದ್ದಾರೆ. ತಮ್ಮ ಜವಾಬ್ದಾರಿಗೆ ಅಂಟಿಕೊಂಡಿದ್ದರಿಂದ ಅವರು ಮೊದಲ ಪಂದ್ಯದಲ್ಲೇ ಪ್ರಮುಖ ವಿಕೆಟ್‌ಗಳನ್ನು ತೆಗೆದುಕೊಳ್ಳಲು ಸಾಧ್ಯವಾಯಿತು" ಎಂದು ಮ್ಯಾಕ್ಡೊನಾಲ್ಡ್ ಹೇಳಿದರು. 2ನೇ ದಿನದ ನಂತರ ನಡೆದ ವರ್ಚುಯಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನನ್ನ ಪ್ರಕಾರ ವಾಷಿಂಗ್ಟನ್ ಈ ಪಂದ್ಯದಲ್ಲಿ ಆಟದ ಗತಿಯನ್ನು ಚೆನ್ನಾಗಿ ನಿಯಂತ್ರಿಸಿದ ಬೌಲರ್ ಎಂದು ನನಗೆ ಎದ್ದು ಕಾಣುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ತಮ್ಮದೇ ಕೋಚಿಂಗ್ನಲ್ಲಿ ಐಪಿಎಲ್ನಲ್ಲಿ ಪಳಗಿರುವ ನಟರಾಜನ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟರಾಜನ್ ಎಡಗೈ ಸ್ವಿಂಗ್ ಬೌಲರ್ ಆಗಿದ್ದಾರೆ, ಅವರು ಅನಾನುಭವಿ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಈ ಪ್ರವಾಸದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡುವಷ್ಟು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಇದು ಅವರ ದೊಡ್ಡ ಸಾಧನೆ ಎಂದು 39 ವರ್ಷದ ಮ್ಯಾಕ್ ಡೊನಾಲ್ಡ್ ತಿಳಿಸಿದ್ದಾರೆ.
ಇದನ್ನು ಓದಿ:ರಿಷಭ್ ಪಂತ್ ಜೊತೆ ಕಾದಾಟಕ್ಕೆ ಕಾಯುತ್ತಿರುವೆ: ನಾಥನ್ ಲಿಯಾನ್