ಬ್ರಿಸ್ಬೇನ್: ಕಾಂಗರೋ ಪಡೆ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಚೊಚ್ಚಲ ಪಂದ್ಯದಲ್ಲೇ ದಾಖಲೆ ಬರೆದಿದ್ದು ಮಾತ್ರವಲ್ಲದೇ ವಿನೂತನವಾಗಿ ಸಿಕ್ಸ್ ಬಾರಿಸಿ ಅಚ್ಚರಿ ಮೂಡಿಸಿದ್ದಾರೆ.
ಎಡಗೈ ಬ್ಯಾಟ್ಸ್ಮನ್ ಆಗಿರುವ ವಾಷಿಂಗ್ಟನ್ ಸುಂದರ್, ಆಸ್ಟ್ರೇಲಿಯಾದ ಆಫ್ ಸ್ಪಿನ್ನರ್ ನಥಾನ್ ಲಿಯಾನ್ ಅವರ ಎಸೆತವನ್ನು ಹೊಡೆದಿದ್ದಾರೆ. ಆ ಚೆಂಡು ಸಿಕ್ಸರ್ ಆಗಿದ್ದು, ಹೊಡೆದ ಚೆಂಡು ಏನಾಯ್ತು ಎಂಬುದನ್ನೂ ಕೂಡಾ ಸುಂದರ್ ನೋಡಲಿಲ್ಲ. ಈ ಹೊಸ ಬಗೆಯ ಸಿಕ್ಸರ್ ಟ್ರೆಂಡ್ ಹುಟ್ಟುಹಾಕಿದೆ.
-
That's spicy! A no-look six from Sundar 6️⃣
— cricket.com.au (@cricketcomau) January 17, 2021 " class="align-text-top noRightClick twitterSection" data="
Live #AUSvIND: https://t.co/IzttOVtrUu pic.twitter.com/6JAdnEICnb
">That's spicy! A no-look six from Sundar 6️⃣
— cricket.com.au (@cricketcomau) January 17, 2021
Live #AUSvIND: https://t.co/IzttOVtrUu pic.twitter.com/6JAdnEICnbThat's spicy! A no-look six from Sundar 6️⃣
— cricket.com.au (@cricketcomau) January 17, 2021
Live #AUSvIND: https://t.co/IzttOVtrUu pic.twitter.com/6JAdnEICnb
ಇದನ್ನು ನೋ ಲುಕ್ ಸಿಕ್ಸ್ ಎಂದುನ ಕರೆಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಷ್ಟು ಮಾತ್ರವಲ್ಲದೇ ಹೊಸ ಸಿಕ್ಸರ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನು ಸುಂದರ್ ಈ ಇನ್ನಿಂಗ್ಸ್ನಲ್ಲಿ 144 ಎಸೆತಗಳಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 62 ರನ್ ಸಿಡಿಸಿ, ತಂಡಕ್ಕೆ ನೆರವಾಗಿರೋದು ಮಾತ್ರವಲ್ಲದೇ ಬೌಲಿಂಗ್ನಲ್ಲಿ ಮೂರು ವಿಕೆಟ್ ಕೂಡಾ ಪಡೆದಿದ್ದಾರೆ.
3ನೇ ದಿನದಾಂತ್ಯಕ್ಕೆ ಭಾರತ ತಂಡ 330ಕ್ಕೆ ಆಲೌಟಾದರೆ, ಆಸ್ಟ್ರೇಲಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ 21 ರನ್ಗಳಿಸಿ ಒಟ್ಟಾರೆ 54 ರನ್ಗಳ ಮುನ್ನಡೆ ಪಡೆದುಕೊಂಡಿದೆ.