ETV Bharat / sports

ನನ್ನನ್ನಷ್ಟೇ ಅಲ್ಲ ಸೆಹ್ವಾಗ್​,ಜಹೀರ್​,ಭಜ್ಜಿಯನ್ನು ಬಿಸಿಸಿಐ ಗೌರವದಿಂದ ಕಾಣಲಿಲ್ಲ: ಯುವಿ ಆರೋಪ

ವಿಶ್ವ ಕ್ರಿಕೆಟ್​ನಲ್ಲಿ ಯುವರಾಜ್​ ಸಿಂಗ್​ ಒಬ್ಬ ಅದ್ಭುತ ಆಲ್​ರೌಂಡರ್ ಅವರು ಭಾರತಕ್ಕೆ ಎರಡು ವಿಶ್ವಕಪ್​ ತಂಡದುಕೊಂಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು ಕಳೆದ ವರ್ಷದ ಜೂನ್‌ನಲ್ಲಿ ತನ್ನ ಯಶಸ್ವಿ ವೃತ್ತಿಜೀವನಕ್ಕೆ ತೆರೆ ಎಳೆದಿದ್ದರು.

ಯುವರಾಜ್​ ಸಿಂಗ್​
ಯುವರಾಜ್​ ಸಿಂಗ್​
author img

By

Published : Jul 27, 2020, 3:54 PM IST

ನವದೆಹಲಿ: ಭಾರತ ತಂಡದ ಮಾಜಿ ಆಲ್​ರೌಂಡರ್​ ಯುವರಾಜ್​ ಸಿಂಗ್​ ತಮ್ಮ ಋತ್ತಿ ಜೀವನದ ಕೊನೆಯಲ್ಲಿ ಬಿಸಿಸಿಐ ಅವರನ್ನು ವೃತ್ತಿಪರತೆಗೆ ವಿರುದ್ಧವಾಗಿ ನೋಡಿಕೊಂಡಿತ್ತು. ನನ್ನನ್ನು ಮಾತ್ರವಲ್ಲ ಸೆಹ್ವಾಗ್​, ಜಹೀರ್​ ಹಾಗೂ ಹರ್ಭಜನ್​ ಸಿಂಗ್​ ಅವರಿಗೆ ಸೂಕ್ತ ಗೌರವ ನೀಡಲಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ವಿಶ್ವ ಕ್ರಿಕೆಟ್​ನಲ್ಲಿ ಯುವರಾಜ್​ ಸಿಂಗ್​ ಒಬ್ಬ ಅದ್ಭುತ ಆಲ್​ರೌಂಡರ್ ಅವರು ಭಾರತಕ್ಕೆ ಎರಡು ವಿಶ್ವಕಪ್​ ತಂಡದುಕೊಂಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು ಕಳೆದ ವರ್ಷದ ಜೂನ್‌ನಲ್ಲಿ ತನ್ನ ಯಶಸ್ವಿ ವೃತ್ತಿಜೀವನಕ್ಕೆ ತೆರೆ ಎಳೆದಿದ್ದರು.

ಭಾರತ ಕ್ರಿಕೆಟ್​ಗೆ ಸೇವೆ ಸಲ್ಲಿಸಿರುವ ಕೆಲವು ದಿಗ್ಗಜರನ್ನು ಉದಾಹರಣೆಯಾಗಿ ಕೊಟ್ಟಿರುವ ಯುವರಾಜ್​ ಸಿಂಗ್​ ಕ್ರಿಕೆಟ್ ವೃತ್ತಿಜೀವನದ ಅಂತ್ಯದಲ್ಲಿ ನನಗೆ ಸಾಕಷ್ಟು ಗೌರವ ಲಭಿಸಲಿಲ್ಲ ಎಂದು ಕಿಡಿಕಾರಿದ್ದಾರೆ.

ನನ್ನ ವೃತ್ತಿಜೀವನದ ಕೊನೆಯಲ್ಲಿ ಅವರು(ಬಿಸಿಸಿಐ) ನನ್ನನ್ನು ನಡೆಸಿಕೊಂಡ ರೀತಿ ವೃತ್ತಿಪರವಾಗಿರಲಿಲ್ಲ ಎಂದು ನಾನು ಭಾವಿಸಿದ್ದೇನೆ. ನನ್ನನ್ನಷ್ಟೇ ಅಲ್ಲ ಹಿಂದೆ ಲೆಜೆಂಡ್​ಗಳಾದ ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್ ಕಡೆ ನೋಡಿದಾಗಲೂ ಇಂತಹದ್ದೇ ಕೆಟ್ಟ ಅನುಭವವವನ್ನು ಅವರು ಎದುರಿಸಿದ್ದಾರೆ. ಇದು ಭಾರತೀಯ ಕ್ರಿಕೆಟ್‌ನ ಒಂದು ಭಾಗವಾಗಿದೆ. ನಾನು ಇದನ್ನು ಈ ಮೊದಲೇ ನೋಡಿದ್ದರಿಂದ ನನಗೇನು ಅಚ್ಚರಿ ಎನಿಸಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

" ಆದರೆ ಭವಿಷ್ಯದಲ್ಲಿ ಭಾರತದ ಪರ ದೀರ್ಘ ಕಾಲ ಆಡಿದ, ಆಟಗಾರರು ನಮ್ಮ ಹಾಗೆ ಕಠಿಣ ಪರಿಸ್ಥಿತಿ ಎದುರಿಸದಂತೆ ನೋಡಿಕೊಳ್ಳಬೇಕಾಗಿದೆ. ಹಾಗೆಯೇ ಅವರಿಗೆ ಸೂಕ್ತ ಗೌರವ ಸಿಗಬೇಕು. ಎರಡು ವಿಶ್ವಕಪ್ ಗೆದ್ದುಕೊಟ್ಟ ಗೌತಮ್ ಗಂಭೀರ್, ಟೆಸ್ಟ್ ಕ್ರಿಕೆಟ್‌ನಲ್ಲಿ ಸುನೀಲ್ ಗವಾಸ್ಕರ್ ಬಳಿಕ ಶ್ರೇಷ್ಠ ಮ್ಯಾಚ್ ವಿನ್ನರ್ ಆಗಿದ್ದ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಹಾಗೂ ಜಹೀರ್ ಖಾನ್‌ಗೆ ಗೌರವ ನೀಡಬೇಕಾಗಿದೆ " ಎಂದು ಯುವರಾಜ್ ಹೇಳಿದ್ದಾರೆ.

ಭಾರತ 2007ರ ಟ್ವೆಂಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್‌ ಗೆಲುವಿನಲ್ಲಿ ಯುವರಾಜ್ ಸಿಂಗ್​ ಪ್ರಮುಖ ಪಾತ್ರವಹಿಸಿದ್ದರು. ಅಂತಹ ಪ್ರಭಾವಶಾಲಿ ಸಾಧನೆಯ ಹೊರತಾಗಿಯೂ, ಯುವರಾಜ್ ತಾವೊಬ್ಬ ದಂತಕಥೆ ಎಂದು ಭಾವಿಸುವುತ್ತಿಲ್ಲ ಎಂದಿದ್ದಾರೆ.

ನಾನು ದಂತಕಥೆ ಎಂದು ನಾನು ಭಾವಿಸುವುದಿಲ್ಲ. ನಾನು ಆಟವನ್ನು ಸಮಗ್ರತೆಯಿಂದ ಆಡಿದ್ದೇನೆ ಆದರೆ ಹೆಚ್ಚು ಟೆಸ್ಟ್ ಕ್ರಿಕೆಟ್ ಆಡಲಿಲ್ಲ. ಉತ್ತಮ ಟೆಸ್ಟ್ ದಾಖಲೆಗಳನ್ನು ಹೊಂದಿರುವವರು ಲೆಜೆಂಡರಿ ಆಟಗಾರರು" ಎಂದು ಯುವರಾಜ್ ಹೇಳಿದ್ದಾರೆ.

ಯುವರಾಜ್​ ಸಿಂಗ್​ 304 ಏಕದಿನ ಪಂದ್ಯಗಳಿಂದ 8701 ರನ್​, 40 ಟೆಸ್ಟ್​ ಪಂದ್ಯಗಳಿಂದ 1900 ರನ್​ ಹಾಗೂ 58 ಟಿ20 ಪಂದ್ಯಗಳಿಂದ 1177 ರನ್​ಗಳಿಸಿದ್ದರು. ಜೊತೆಗೆ ಏಕದಿನ ಕ್ರಿಕೆಟ್​ನಲ್ಲಿ 111 ವಿಕೆಟ್, ಟಿ20 ಯಲ್ಲಿ 28 ವಿಲೆಟ್​ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.