ಕರಾಚಿ : ಭಾರತ ತಂಡದಲ್ಲಿನ ಪ್ರಭಾವಶಾಲಿ ಟೆಸ್ಟ್ ಆಟಗಾರರ ಉಪಸ್ಥಿತಿ ಮತ್ತು ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಅವರ ಪುನರಾಗಮನದಿಂದ ಉಭಯ ರಾಷ್ಟ್ರಗಳ ನಡುವೆ ತೀವ್ರ ಸ್ಪರ್ಧೆ ಇರಲಿದೆ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟರ್ ವಕಾರ್ ಯೂನಿಸ್ ಹೇಳಿದ್ದಾರೆ.
ಸಿಡ್ನಿಯಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದೊಂದಿಗೆ ಭಾರತದ ಆಸ್ಟ್ರೇಲಿಯಾ ಸರಣಿ ಶುಕ್ರವಾರ ಪ್ರಾರಂಭವಾಗಲಿದೆ. 2018ರಲ್ಲಿ ಟೆಸ್ಟ್ ಸರಣಿಯಲ್ಲಿನ ಸೋಲಿನಿಂದ ಆಸ್ಟ್ರೇಲಿಯಾ, ಭಾರತವನ್ನು ಕಠಿಣವಾಗಿ ಎದುರಿಸಲಿದೆ ಎಂದು ವಕಾರ್ ಹೇಳಿದ್ದಾರೆ.
"ಆಸ್ಟ್ರೇಲಿಯಾ ತವರಿನಲ್ಲಿ ಆಡುತ್ತಿದೆ ಮತ್ತು ಉತ್ತಮ ವೇಗಿಗಳನ್ನು ಬೆಳೆಸಿದೆ. ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಪುನರಾಗಮನದೊಂದಿಗೆ, ಆಸೀಸ್ ತುಂಬಾ ಪ್ರಬಲರಾಗಿದ್ದಾರೆಂದು ತೋರುತ್ತದೆ. ಆದರೆ, ಭಾರತವು ಕೆಲವು ಉತ್ತಮ ವೇಗದ ಬೌಲರ್‌ಗಳನ್ನು ಹೊಂದಿದ್ದು, ತಮ್ಮ ಕೊನೆಯ ಪ್ರವಾಸದಲ್ಲಿ ಅದ್ಭುತವಾಗಿ ಬೌಲ್ ಮಾಡಿದ್ದರು ಎಂದು ಯೂಟ್ಯೂಬ್ ಚಾನೆಲ್ಗೆ ತಿಳಿಸಿದ್ದಾರೆ
"ಪೂಜಾರ ಮತ್ತು ರಹಾನೆ ಅವರಂತಹ ಕೆಲವು ಗಮನಾರ್ಹ ಟೆಸ್ಟ್ ಆಟಗಾರರೊಂದಿಗೆ ಭಾರತೀಯ ಬ್ಯಾಟಿಂಗ್ ಕೂಡ ಸಾಕಷ್ಟು ಪ್ರಭಾವಶಾಲಿಯಾಗಿದೆ, ಆದ್ದರಿಂದ ನಾನು ಉತ್ತಮ ಸ್ಪರ್ಧೆ ನಿರೀಕ್ಷಿಸುತ್ತೇನೆ" ಎಂದಿದ್ದಾರೆ.
ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ನಂತರ ವಿರಾಟ್ ಕೊಹ್ಲಿ ಅಲಭ್ಯತೆ ಮತ್ತು ರೋಹಿತ್ ಶರ್ಮಾ ಹಾಗೂ ಇಶಾಂತ್ ಶರ್ಮಾ ಮೊದಲ ಎರಡು ಪಂದ್ಯಗಳಿಂದ ಹೊರಗುಳಿಯುತ್ತಿರುವುದು ಸರಣಿಯನ್ನು ಗೆಲ್ಲುವ ಟೀಂ ಇಂಡಿಯಾ ಕನಸಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದಿದ್ದಾರೆ.