ಸಿಡ್ನಿ: ತಮ್ಮನ್ನು ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬೆಂಬಲಿಸುತ್ತಿದ್ದ ತಂದೆಯನ್ನು ಕಳೆದುಕೊಂಡಿರುವ ಮೊಹಮ್ಮದ್ ಸಿರಾಜ್, ಮುಂದಿನ ಆಸ್ಟ್ರೇಲಿಯಾ ಸರಣಿಯಲ್ಲಿ ಭಾರತ ತಂಡಕ್ಕಾಗಿ ಉತ್ತಮ ಪ್ರದರ್ಶನ ತೋರುವ ಮೂಲಕ ಅಪ್ಪನ ಕನಸನ್ನು ನನಸು ಮಾಡುವ ಗುರಿಯನ್ನು ಹೊಂದಿದ್ದಾರೆ.
ಶುಕ್ರವಾರ ಸಿರಾಜ್ ಅವರ ತಂದೆ ಆನಾರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದರು. ಆದರೆ ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಲು ಭಾರತ ತಂಡ ಅನುಮತಿ ನೀಡಿದರೂ ಸಹಾ, ತಮ್ಮಪ್ಪನ ಕನಸನ್ನು ನನಸು ಮಾಡುವುದಕ್ಕಾಗಿ ಇಲ್ಲೆ ಇರುತ್ತೇನೆ ಎಂದು ಗಟ್ಟಿ ಮನಸ್ಸು ಮಾಡಿ ಸಿಡ್ನಿಯಲ್ಲಿ ಉಳಿದುಕೊಂಡಿದ್ದಾರೆ.
ಭಾರತ ತಂಡ 54 ದಿನಗಳ ಸುದೀರ್ಘ ಪ್ರವಾಸವನ್ನು ನವೆಂಬರ್ 27ರಿಂದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡುವ ಮೂಲಕ ಶುರುಮಾಡಲಿದೆ. ಇದರ ಬೆನ್ನಲ್ಲೇ ಟಿ20 ಮತ್ತು ಟೆಸ್ಟ್ ಸರಣಿ ನಡೆಯಲಿದೆ.
" ಇದು ನನಗೆ(ತಂದೆಯ ಮರಣ) ಬಹುದೊಡ್ಡ ನಷ್ಟ, ಏಕೆಂದರೆ ಅವರು ನನ್ನನ್ನು ಹೆಚ್ಚು ಬೆಂಬಲಿಸುವ ವ್ಯಕ್ತಿಯಾಗಿದ್ದರು. ನನ್ನನ್ನು ಭಾರತ ತಂಡದಲ್ಲಿ ಕಾಣುವುದು ಮತ್ತು ದೇಶವನ್ನು ಹೆಮ್ಮೆ ಪಡುವಂತೆ ಮಾಡುವುದು ನನ್ನ ತಂದೆಯ ಕನಸಾಗಿತ್ತು. ಈಗ ನಾನು ಅದನ್ನು ಇಡೇರಿಸುವ ಗುರಿಯನ್ನು ಹೊಂದಿದ್ದೇನೆ" ಎಂದು ಬಿಸಿಸಿಐ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಸಿರಾಜ್ ಹೇಳಿದ್ದಾರೆ.
-
Want to fulfill my father's dream: Siraj
— BCCI (@BCCI) November 23, 2020 " class="align-text-top noRightClick twitterSection" data="
The fast bowler speaks about overcoming personal loss and why he decided to continue performing national duties in Australia. Interview by @Moulinparikh
Full interview 👉https://t.co/xv8ohMYneK #AUSvIND pic.twitter.com/UAOVgivbx1
">Want to fulfill my father's dream: Siraj
— BCCI (@BCCI) November 23, 2020
The fast bowler speaks about overcoming personal loss and why he decided to continue performing national duties in Australia. Interview by @Moulinparikh
Full interview 👉https://t.co/xv8ohMYneK #AUSvIND pic.twitter.com/UAOVgivbx1Want to fulfill my father's dream: Siraj
— BCCI (@BCCI) November 23, 2020
The fast bowler speaks about overcoming personal loss and why he decided to continue performing national duties in Australia. Interview by @Moulinparikh
Full interview 👉https://t.co/xv8ohMYneK #AUSvIND pic.twitter.com/UAOVgivbx1
"ನನ್ನ ತಂದೆ ಈ ಜಗತ್ತಿನಲ್ಲಿ ಇಲ್ಲದಿದ್ದರೂ, ನನ್ನ ಹೃದಯದಲ್ಲಿ ಇನ್ನೂ ಚಿರವಾಗಿದ್ದಾರೆ. ನಾನು ನನ್ನ ತಾಯಿಯೊಂದಿಗೆ ಮಾತನಾಡಿದ್ದೇನೆ, ಅವರು ಕೂಡ ತಂದೆಯ ಕನಸನ್ನ ನೆನಪಿಸಿದರು. ಟೀಮ್ ಇಂಡಿಯಾ ಪರ ಉತ್ತಮವಾಗಿ ಆಡು ಎಂದು ಪ್ರೋತ್ಸಾಹಿಸಿದ್ದಾರೆ" ಸಿರಾಜ್ ಹೇಳಿದ್ದಾರೆ.
ಈ ಪರಿಸ್ಥಿತಿಯಲ್ಲಿ ತಂಡದ ಸಹಾ ಆಟಗಾರರು ನನ್ನನ್ನು ಕುಟುಂಬವನಂತೆ ಬೆಂಬಲಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಭಯ್ಯ ಬಲಿಷ್ಠನಾಗಿದ್ದುಕೊಂಡು ತಂದೆಯ ಕನಸನ್ನು ನೆರವೇರಿಸು ಎಂದು ದೈರ್ಯ ತುಂಬಿದ್ದಾರೆ ಎಂದು 26 ವರ್ಷದ ಸಿರಾಜ್ ತಿಳಿಸಿದ್ದಾರೆ.