ETV Bharat / sports

ರಾಮಾಯಣದಲ್ಲಿ ಬರೋ ಈ ಪಾತ್ರದಾರಿಯೇ ತಮ್ಮ ಬ್ಯಾಟಿಂಗ್​ಗೆ ಸ್ಪೂರ್ತಿ ಎಂದ ಸೆಹ್ವಾಗ್​

ಭಾರತ ಕ್ರಿಕೆಟ್​ನ ವಿದ್ವಂಸಕ ಬ್ಯಾಟ್ಸ್​ಮನ್​ ಸೆಹ್ವಾಗ್​ ತಮ್ಮ ಜೀವನದಲ್ಲಿ ಸ್ಪೂರ್ತಿ ಪಡೆದಿದ್ದ ವ್ಯಕ್ತಿಯ ಹೆಸರನ್ನು ತಿಳಿಸಿದ್ದಾರೆ.

ರಾಮಾಯಣ
ವಿರೇಂದ್ರ ಸೆಹ್ವಾಗ್​
author img

By

Published : Apr 13, 2020, 2:22 PM IST

ನವದೆಹಲಿ: ಭಾರತ ಕ್ರಿಕೆಟ್​ನಲ್ಲಿ ತನ್ನದೇ ಆದ ಆಟದ ಮೂಲಕ ಮಾಡಿರುವ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​ ತನಗಿಷ್ಟವಾದ ರಾಮಾಯಣದಲ್ಲಿ ಬರುವ ಪಾತ್ರದಾರಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ.

ಮಾಜಿ ಆರಂಭಿಕ ಬ್ಯಾಟ್ಸ್​ಮನ್​ ಸೆಹ್ವಾಗ್​ಗೆ ರಾಮಾಯಣದ ಅಂಗದ್​ (ಸೀತೆಯನ್ನು ಲಂಕಾದಿಂದ ರಕ್ಷಣೆ ಮಾಡಲು ರಾಮನಿಗೆ ನೆರವಾದ ವಾನರ ಸೇನೆ) ಪಾತ್ರ ಕ್ರಿಕೆಟ್​​​​ ಜೀವನಕ್ಕೆ ಪ್ರೇರಣೆಯಾಗಿದೆ ಎಂದು ಸೆಹ್ವಾಗ್ ತಿಳಿಸಿದ್ದಾರೆ.

ಪಾದಚಲನೆಯ ಮೂಲಕ ಕ್ರಿಕೆಟ್​ ಜಗತ್ತನ್ನೇ ಬೆರಗಾಗುವಂತಹ ಬ್ಯಾಟಿಂಗ್​ ಶೈಲಿಯನ್ನು ಹೊಂದಿದ್ದ ಸೆಹ್ವಾಗ್​ ತಮ್ಮ ಟ್ವಿಟರ್​ನಲ್ಲಿ ಅಂಗದನ ಫೋಟೋ ಶೇರ್​ ಮಾಡಿಕೊಂಡು , ಆತ ಏಕೆ ಸ್ಪೂರ್ತಿ ಎಂಬುದನ್ನು ತಿಳಿಸಿದ್ದಾರೆ.

"ನಾನು ಬ್ಯಾಟಿಂಗ್​ ಸ್ಪೂರ್ತಿಯನ್ನು ಎಲ್ಲಿಂದ ಪಡೆದಿದ್ದೇನೆ ಎಂಬುದು ಇಲ್ಲಿದೆ. ಪಾದಗಳನ್ನು ಅಲುಗಾಡಿಸುವುದು ಕಷ್ಟಮಾತ್ರವಲ್ಲ, ಸಾದ್ಯವೇ ಇಲ್ಲ.ಅಂಗದ್​ ಜೀ ರಾಕ್ಸ್​" ಎಂದು ಸೆಹ್ವಾಗ್​ ಟ್ವೀಟ್​ ಮಾಡಿದ್ದಾರೆ.

ರಾಮಾಯಣದಲ್ಲಿ ರಾಮ ಅಂಗದನನ್ನು ರಾವಣನ ಆಸ್ಥಾನಕ್ಕೆ ಕಳುಹಿಸಿ ಯುದ್ದವನ್ನು ತಪ್ಪಿಸುವ ಸಲುವಾಗಿ ದೂತನನ್ನಾಗಿ ಕಳುಹಿಸಿರುತ್ತಾನೆ. ಈ ಸಂದರ್ಭದಲ್ಲಿ ರಾವಣನ ದುರಹಂಕಾರವನ್ನು ಮುರಿಯಲು ತನ್ನ ಒಂದು ಕಾಲನ್ನು ಯಾರಾದರೂ ಎತ್ತಬಲ್ಲಿರಾ ಎಂದು ಸವಾಲು ಹಾಕುತ್ತಾನೆ. ಒಂದು ವೇಳೆ, ಆತನ ಒಂದು ಕಾಲನ್ನ ನೆಲದಿಂದ ಎತ್ತಿದರೆ ರಾಮ ಸೋಲೊಪ್ಪಿಕ್ಕೊಂಡು ಹಿಂದಿರುಗುತ್ತಾನೆ ಎಂದು ಅಂಗದ ಹೇಳುತ್ತಾನೆ. ಆದರೆ ಅಂಗದ ಕಾಲನ್ನು ಯಾರಿಂದಲೂ ಎತ್ತಲು ಸಾಧ್ಯವಾಗಲಿಲ್ಲ ಎಂಬುದು ಪುರಾಣಗಳಲ್ಲಿ ಉಲ್ಲೇಖವಾಗಿದೆ.

ಇದಕ್ಕಾಗಿ ಟೆಸ್ಟ್​ ಕ್ರಿಕೆಟ್​ನಲ್ಲಿ ಎರಡು ತ್ರಿಶತಕ ಸಿಡಿಸಿರುವ ಭಾರತ ಏಕೈಕ ಬ್ಯಾಟ್ಸ್​ಮನ್ ಆಗಿರುವ ಸೆಹ್ವಾಗ್​ ಅಂಗದ ತಮಗೆ ಸ್ಪೂರ್ತಿ ಎಂದು ತಿಳಿಸಿದ್ದಾರೆ. 80ರ ದಶಕದಲ್ಲಿ ಅತಿ ಹೆಚ್ಚು ಪ್ರಸಿದ್ದವಾಗಿದ್ದ ರಮಾಯಣ ಧಾರಾವಾಹಿ ಇದೀಗ ಮರುಪ್ರಸಾರವಾಗುತ್ತಿದ್ದು ಭಾರಿ ಜನಪ್ರಿಯತೆ ಪಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.