ಚೆನ್ನೈ: ಶನಿವಾರ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ 10 ರನ್ಗಳಿಂದ ಸೋಲುಕಂಡಿದೆ. ಆದರೆ, 2ನೇ ಓವರ್ನಲ್ಲಿ ಬ್ಯಾಟಿಂಗ್ ಬಂದು 20ನೇ ಓವರ್ ವರೆಗೂ ಬ್ಯಾಟಿಂಗ್ ಮಾಡಿದರೂ ತಂಡವನ್ನು ಗೆಲುವಿನ ಗಡಿ ದಾಟಿಸುವಲ್ಲಿ ವಿಫಲರಾದ ಕನ್ನಡಿಗ ಮನೀಶ್ ಆಟವನ್ನು ಸ್ವಾರ್ಥದ ಆಟ ಎಂದು ಟ್ವಿಟರ್ನಲ್ಲಿ ಪರೋಕ್ಷವಾಗಿ ಟೀಕಿಸಿದ್ದಾರೆ.
ವಾರ್ನರ್ 3 ರನ್ಗಳಿಗೆ 2ನೇ ಓವರ್ನಲ್ಲಿ ಔಟಾಗುತ್ತಿದ್ದಂತೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದಂತಹ ಪಾಂಡೆ 20 ಓವರ್ನ ಕೊನೆಯ ಎಸೆತ ಎದುರಿಸಿ ಅಜೇಯರಾಗುಳಿದರು. ಅವರು 44 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿ ಸಹಿತ 138ರ ಸ್ಟ್ರೈಕ್ರೇಟ್ನಲ್ಲಿ 61 ರನ್ಗಳಿಸಿದರು.
ಅರ್ಧಶತಕ ಸಿಡಿಸಿದರೂ ಪಂದ್ಯವನ್ನು ಗೆಲ್ಲಿಸುವಲ್ಲಿ ವಿಫಲರಾದ ಮನೀಶ್ ಪಾಂಡೆ ಸ್ಟ್ಯಾಟ್ ಪ್ಯಾಟಿಂಗ್ ಎಂದು ಪರೋಕ್ಷವಾಗಿ ಸೆಹ್ವಾಗ್ ಟೀಕಿಸಿದ್ದಾರೆ, ಸ್ಟ್ಯಾಟ್ ಪ್ಯಾಡಿಂಗ್ ಎಂದರೆ, ತಮ್ಮ ಅಂಕಿ - ಅಂಶಗಳಿಗಾಗಿ ಆಡುವುದು ಎಂದರ್ಥ. ಆದರೆ, ಸೆಹ್ವಾಗ್ ಯಾವುದೇ ಹೆಸರನ್ನು ಬಳಸದೇ ಈ ಟೀಕೆ ಮಾಡಿದ್ದಾರೆ.
"ಸ್ಟ್ಯಾಟ್ ಪ್ಯಾಡಿಂಗ್ ಬ್ಯಾಟ್ಸ್‌ಮನ್‌ಗಳನ್ನು ಗೇರ್‌ಗಳನ್ನು ತ್ವರಿತವಾಗಿ ಬದಲಾಯಿಸದೇ ದೀರ್ಘ ಓವರ್‌ಗಳನ್ನು ಬ್ಯಾಟಿಂಗ್ ಮಾಡುವುದು ತಂಡಕ್ಕೆ ಹಿನ್ನಡೆಯಾಗುತ್ತದೆ. ತಂಡದಲ್ಲಿ ಹಿಟ್ಟರ್ಗಳಿದ್ದರೂ ಇಂತಹ ಆಟಗಾರರು ಅವರಿಗೆ ಕೆಲವೇ ಎಸೆತಗಳಗಳನ್ನು ಬಿಟ್ಟುಕೊಡುತ್ತಾರೆ. ಇದು ಅವರಿಗೆ(ಹಿಟ್ಟರ್ಗಳಿಗೆ) ಪಂದ್ಯವನ್ನು ಮುಗಿಸಲು ತುಂಬಾ ಕಷ್ಟವಾಗಿಸುತ್ತಿದೆ.ಇದು ಕಳೆದ ವರ್ಷವೂ ನಡೆದಿತ್ತು. ಇಂತಹ ತಂಡಗಳು ಯಾವಾಗಲೂ ಸಮಸ್ಯೆಯನ್ನು ಹೊಂದಿರುತ್ತದೆ" ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಇದೇ ಆರೋಪಕ್ಕೆ ತುತ್ತಾಗಿದ್ದರು. ಆರೆಂಜ್ ಕ್ಯಾಪ್ ಪಡೆದಿದ್ದ ಅವರು, ತಂಡದಲ್ಲಿ ಹೆಚ್ಚು ಎಸೆತಗಳನ್ನಾಡಿ ಕೊನೆಯಲ್ಲಿ ಗೆಲುವು ತಂದುಕೊಡುವಲ್ಲಿ ವಿಫಲರಾಗುತ್ತಿದ್ದರು.
ಇದನ್ನು ಓದಿ:ನಾವು ಐಪಿಎಲ್ನಲ್ಲೇ ವಿನಾಶಕಾರಿ ಬ್ಯಾಟಿಂಗ್ ಬಳಗ ಹೊಂದಿದ್ದೇವೆ: ಕೆಕೆಆರ್ ನಾಯಕ ಮಾರ್ಗನ್