ETV Bharat / sports

ಟೆಸ್ಟ್ ರ‍್ಯಾಂಕಿಂಗ್.. ಅಬ್ಬರದ ಶತಕದಿಂದ ಮತ್ತೆ ಅಗ್ರಸ್ಥಾನಕ್ಕೇರಿದ ವಿರಾಟ್..!

author img

By

Published : Dec 4, 2019, 2:13 PM IST

ಅಹರ್ನಿಶಿ ಟೆಸ್ಟ್​ನಲ್ಲಿ 136 ರನ್ ಬಾರಿಸಿರುವ ವಿರಾಟ್ ಕೊಹ್ಲಿ 928 ಅಂಕದೊಂದಿಗೆ ಅಗ್ರಸ್ಥಾನಕ್ಕೆ ಜಿಗಿದಿದ್ದಾರೆ.

ICC men's Test rankings
ವಿರಾಟ್ ಕೊಹ್ಲಿ

ದುಬೈ: ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟವಾಗಿದ್ದು, ಕೆಲ ತಿಂಗಳ ಬಳಿಕ ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ.

ಇತ್ತೀಚೆಗೆ ಮುಕ್ತಾಯವಾದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಶತಕ ಬಾರಿಸಿ ಮಿಂಚಿದ್ದರು. ಮೊದಲ ಟೆಸ್ಟ್​ನಲ್ಲಿ ವಿರಾಟ್ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದರು. ಆದರೆ, ಅಹರ್ನಿಶಿ ಟೆಸ್ಟ್​ನಲ್ಲಿ 136 ರನ್ ಬಾರಿಸಿ ಮತ್ತೆ ಫಾರ್ಮ್​ಗೆ ಮರಳಿದ್ದರು. ಈ ಶತಕದ ನೆರವಿನಿಂದ ಕೊಹ್ಲಿ ಟೆಸ್ಟ್ ಶ್ರೇಯಾಂಕದಲ್ಲಿ ಆಸೀಸ್​ನ ಸ್ಟೀವ್ ಸ್ಮಿತ್ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ.

ICC men's Test rankings
ವಿರಾಟ್ ಕೊಹ್ಲಿ ಶತಕ ಸಂಭ್ರಮ

ವಿರಾಟ್ ಕೊಹ್ಲಿ 928 ಅಂಕದೊಂದಿಗೆ ಅಗ್ರಪಟ್ಟ ಅಲಂಕರಿಸಿದ್ದರೆ, ಸ್ಟೀವ್ ಸ್ಮಿತ್ 923 ಅಂಕದಿಂದ ದ್ವಿತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಮೂರನೇ ಸ್ಥಾನದಲ್ಲಿ ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್​(877 ಅಂಕ) ತಟಸ್ಥರಾಗಿದ್ದಾರೆ.

ICC men's Test rankings
ತ್ರಿಶತಕ ಸಿಡಿಸಿದ ವಾರ್ನರ್ ಸಂಭ್ರಮ

ಪಾಕ್ ವಿರುದ್ಧದ ಸರಣಿಯಲ್ಲಿ ಶತಕ ಹಾಗೂ ತ್ರಿಶತಕ ಸಾಧನೆ ಮಾಡಿದ್ದ ಆಸೀಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಏರಿಕೆ ಕಂಡಿದ್ದು 764 ಅಂಕದೊಂದಿಗೆ ಐದನೇ ಸ್ಥಾನಕ್ಕೆ ಜಿಗಿದಿದ್ದಾರೆ.

ವಿರಾಟ್ ಕೊಹ್ಲಿ ಹೊರತುಪಡಿಸಿದರೆ ನಾಲ್ಕನೇ ಸ್ಥಾನದಲ್ಲಿ ಚೇತೇಶ್ವರ ಪೂಜಾರ(791 ಅಂಕ) ಹಾಗೂ ಆರನೇ ಸ್ಥಾನದಲ್ಲಿ ಅಜಿಂಕ್ಯ ರಹಾನೆ(759 ಅಂಕ) ಅಗ್ರಹತ್ತರಲ್ಲಿರುವ ಭಾರತೀಯ ಆಟಗಾರರಾಗಿದ್ದಾರೆ. ಹತ್ತನೇ ಸ್ಥಾನದಲ್ಲಿದ್ದ ಕನ್ನಡಿಗ ಮಯಾಂಕ ಅಗರ್ವಾಲ್ ರ‍್ಯಾಂಕಿಂಗ್ ಕುಸಿತ ಕಂಡು ಅಗ್ರಹತ್ತರಿಂದ ಹೊರಬಿದ್ದಿದ್ದಾರೆ.

Intro:Body:

ಇತ್ತೀಚೆಗೆ ಮುಕ್ತಾಯವಾದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಶತಕ ಬಾರಿಸಿ ಮಿಂಚಿದ್ದರು. ಮೊದಲ ಟೆಸ್ಟ್​ನಲ್ಲಿ ವಿರಾಟ್ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದರು. ಆದರೆ ಅಹರ್ನಿಶಿ ಟೆಸ್ಟ್​ನಲ್ಲಿ 136 ರನ್ ಬಾರಿಸಿ ಮತ್ತೆ ಫಾರ್ಮ್​ಗೆ ಮರಳಿದ್ದರು. ಈ ಶತಕದ ನೆರವಿನಿಂದ ಕೊಹ್ಲಿ ಟೆಸ್ಟ್ ಶ್ರೇಯಾಂಕದಲ್ಲಿ ಆಸೀಸ್​ನ ಸ್ಟೀವ್ ಸ್ಮಿತ್ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ.

ವಿರಾಟ್ ಕೊಹ್ಲಿ 928 ಅಂಕದೊಂದಿಗೆ ಅಗ್ರಪಟ್ಟ ಅಲಂಕರಿಸಿದ್ದರೆ, ಸ್ಟೀವ್ ಸ್ಮಿತ್ 923 ಅಂಕದಿಂದ ದ್ವಿತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಮೂರನೇ ಸ್ಥಾನದಲ್ಲಿ ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್​(877 ಅಂಕ) ತಟಸ್ಥರಾಗಿದ್ದಾರೆ.

ಪಾಕ್ ವಿರುದ್ಧದ ಸರಣಿಯಲ್ಲಿ ಶತಕ ಹಾಗೂ ತ್ರಿಶತಕ ಸಾಧನೆ ಮಾಡಿದ್ದ ಆಸೀಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಏರಿಕೆ ಕಂಡಿದ್ದು 764 ಅಂಕದೊಂದಿಗೆ ಐದನೇ ಸ್ಥಾನಕ್ಕೆ ಜಿಗಿದಿದ್ದಾರೆ.

ವಿರಾಟ್ ಕೊಹ್ಲಿ ಹೊರತುಪಡಿಸಿದರೆ ನಾಲ್ಕನೇ ಸ್ಥಾನದಲ್ಲಿ ಚೇತೇಶ್ವರ ಪೂಜಾರ(791 ಅಂಕ) ಹಾಗೂ ಆರನೇ ಸ್ಥಾನದಲ್ಲಿ ಅಜಿಂಕ್ಯ ರಹಾನೆ(759 ಅಂಕ) ಅಗ್ರಹತ್ತರಲ್ಲಿರುವ ಭಾರತೀಯ ಆಟಗಾರರಾಗಿದ್ದಾರೆ. ಹತ್ತನೇ ಸ್ಥಾನದಲ್ಲಿದ್ದ ಕನ್ನಡಿಗ ಮಯಾಂಕ ಅಗರ್ವಾಲ್ ರ‍್ಯಾಂಕಿಂಗ್ ಕುಸಿತ ಕಂಡು ಅಗ್ರಹತ್ತರಿಂದ ಹೊರಬಿದ್ದಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.