ಮುಂಬೈ: ಬಿಸಿಸಿಐ ನಿಯಮ 38 (4) ರ ಅಡಿಯಲ್ಲಿ 'ಹಿತಾಸಕ್ತಿ ಸಂಘರ್ಷ(ಕಾನ್ಫ್ಲಿಕ್ಟ್ ಆಫ್ ಇಂಟರೆಸ್ಟ್)' ಷರತ್ತನ್ನು ಉಲ್ಲಂಘಿಸಿರುವ ಆರೋಪ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಕೇಳಿಬಂದಿದೆ.
ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸಂವಿಧಾನವನ್ನು ಪುನರ್ ನಿರ್ಮಾಣ ಮಾಡುವಾಗ ಲೋಧಾ ಸಮಿತಿ ಜಂಟಲ್ಮ್ಯಾನ್ ಆಟದಲ್ಲಿ ಹಿತಾಸಕ್ತಿ ಸಂಘರ್ಷ ವಿಚಾರವಾಗಿ ಉತ್ತಮ ಆಡಳಿತ ಪಡೆಯಲು ತೀವ್ರವಾಗಿ ಹೋರಾಡಬೇಕಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿತ್ತು.
ಬಿಸಿಸಿಐ ಅಧ್ಯಕ್ಷ ಗಂಗೂಲಿ, ಎನ್ಸಿಎ ಮುಖ್ಯಸ್ಥ ದ್ರಾವಿಡ್ ಸೇರಿದಂತೆ ಹಲವಾರು ಮಾಜಿ ಕ್ರಿಕೆಟಿಗರ ಅನೇಕ ಹುದ್ದೆಗಳನ್ನು ಹೊಂದಿದ್ದರಿಂದ ಒಂದು ಹುದ್ದೆಯನ್ನು ತ್ಯಜಿಸಬೇಕಾಗಿದೆ. ಇದೀಗ ಪ್ರಸ್ತುತ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಥಾನವನ್ನು ಪ್ರಶ್ನಿಸಿ ಸಂಜೀವ್ ಗುಪ್ತಾ ಸುಪ್ರಿಂ ಕೋರ್ಟ್ ನೇಮಿಸಿರುವ ಬಿಸಿಸಿಐ ಎಥಿಕ್ಸ್ ಆಫೀಸರ್ ಡಿ.ಕೆ ಜೈನ್ ಅವರಿಗೆ ಪತ್ರ ಬರೆದಿದ್ದಾರೆ.
ಗುಪ್ತಾರ ಇ-ಮೇಲ್ನಲ್ಲಿ, ಕೊಹ್ಲಿ ಹೊಂದಿರುವ ವ್ಯವಹಾರಗಳ ಬಗ್ಗೆ ಮಾತನಾಡಿದ್ದು, ಇದು ಬಿಸಿಸಿಐ ಸಂವಿಧಾನದಲ್ಲಿ ನೋಂದಾಯಿಸಿರುವ, ಸುಪ್ರೀಂಕೋರ್ಟ್ ಅಂಗೀಕರಿಸಿದ ಲೋಧಾ ಸಮಿತಿಯ ಶಿಫಾರಸುಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಸನ್ನ ಖಾಯಂ ಸದಸ್ಯ ಸಂಜೀವ್ ಗುಪ್ತಾ ಪ್ರಕಾರ, ವಿರಾಟ್ ಕೊಹ್ಲಿ, ಭಾರತ ತಂಡದ ಆಟಗಾರ ಮತ್ತು ನಾಯಕನಾಗಿ ಒಂದು ಹುದ್ದೆಯನ್ನು ಹೊಂದಿರುವುದರ ಜೊತೆಗೆ ಸ್ಪೋರ್ಟ್ಸ್ ಮಾರ್ಕೆಟಿಂಗ್ ಕಂಪನಿಯ ಡೈರೆಕ್ಟರ್ ಹುದ್ದೆಗಳನ್ನು ಹೊಂದಿರುವುದು ಬಿಸಿಸಿಐ ನಿಯಮ 38(4) ಅನ್ನು ಉಲ್ಲಂಘನೆಯಾಗಿದೆ ಎಂದು ಗುರುತಿಸಿ ಆರೋಪಿಸಿದ್ದಾರೆ.
ಕೊಹ್ಲಿ, ವಿರಾಟ್ ಕೊಹ್ಲಿ ಸ್ಪೋರ್ಟ್ಸ್ ಎಲ್ಎಲ್ಪಿಯಲ್ಲೂ ನಿರ್ದೇಶಕ ಹುದ್ದೆಯನ್ನು ಪಡೆದಿದ್ದಾರೆ. ಮತ್ತು ಕಾರ್ನರ್ಸ್ಟೋನ್ ವೇಂಚರ್ಸ್ ಪಾರ್ಟರ್ನ್ಸ್ ಎಲ್ಎಲ್ಪಿಯ ಮೂರು ನಿರ್ದೇಶಕರಲ್ಲಿ ಕೊಹ್ಲಿಯೂ ಒಬ್ಬರಾಗಿದ್ದಾರೆ.
ದಿನಾಂಕ 21.08.18ರ ನಿಯಮ 38(4)(ಅಪೆಕ್ಸ್ ನ್ಯಾಯಾಲಯದಿಂದ ಅನುಮೋದನೆ) ಬಿಸಿಸಿಐ ಸಂವಿಧಾನದ ಅನುಸಾರವಾಗಿ, ವಿರಾಟ್ ಕೊಹ್ಲಿ ಅವರಿಗೆ ಯಾವುದಾದರು ಒಂದು ಹುದ್ದೆಯನ್ನು ನೀಡುವಂತೆ ನಿರ್ದೇಶಿಸಿದ ಆದೇಶವನ್ನು ಕೂಡಲೇ ಅಂಗೀರಿಸಬೇಕು ಎಂದು ಎಥಿಕ್ಸ್ ಅಫೀಸರ್ಗೆ ವಿನಮ್ರವಾಗಿ ಕೋರುತ್ತೇನೆ ಎಂದು ಗುಪ್ತಾ ಪತ್ರದಲ್ಲಿ ತಿಳಿಸಿದ್ದಾರೆ.