ತಿರುವನಂತಪುರಂ: ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದ್ದು, ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ ಇದೀಗ ಉಭಯ ತಂಡ 1-1 ಅಂತರದಲ್ಲಿ ಸಮಬಲ ಸಾಧಿಸಿವೆ.
ಆದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದ ಶಿಮ್ರಾನ್ ಹೆಟ್ಮಾಯರ್ ಸಿಕ್ಸರ್ ಲೈನ್ನತ್ತ ಬಾರಿಸಿದ್ದ ಚೆಂಡನ್ನು ವಿರಾಟ್ ಕೊಹ್ಲಿ ಅದ್ಭುತವಾಗಿ ಕ್ಯಾಚ್ ಪಡೆದುಕೊಳ್ಳುವ ಮೂಲಕ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
-
@imVkohli is fittest cricketer. Superb pic.twitter.com/t3TESwTJYi
— atul dixit (@atuldix73445347) December 8, 2019 " class="align-text-top noRightClick twitterSection" data="
">@imVkohli is fittest cricketer. Superb pic.twitter.com/t3TESwTJYi
— atul dixit (@atuldix73445347) December 8, 2019@imVkohli is fittest cricketer. Superb pic.twitter.com/t3TESwTJYi
— atul dixit (@atuldix73445347) December 8, 2019
14ನೇ ಓವರ್ ಎಸೆಯಲು ಮೈದಾನಕ್ಕಿಳಿದ ರವೀಂದ್ರ ಜಡೇಜಾ ಓವರ್ನಲ್ಲಿ ಸ್ಪೋಟಕ ಬ್ಯಾಟ್ಸ್ಮನ್ ಹೆಟ್ಮಾಯರ್ ಕ್ಯಾಚ್ ಹಿಡಿದು ಮ್ಯಾಚ್ ನೋಡಲು ಬಂದಿದ್ದ ಕ್ರೀಡಾಭಿಮಾನಿಗಳ ಮನ ಗೆದ್ದಿದ್ದಾರೆ. ಸ್ಪೈಡರ್ಮ್ಯಾನ್ ರೀತಿಯಲ್ಲಿ ಬೌಂಡರಿ ಲೈನ್ನಲ್ಲಿ ವಿರಾಟ್ ಕೊಹ್ಲಿ ಕ್ಯಾಚ್ ಹಿಡಿದುಕೊಂಡಿದ್ದಾರೆ.
ಅವರು ಪಡೆದುಕೊಂಡಿರುವ ಕ್ಯಾಚ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.