ಪುಣೆ: ನಾಯಕ ವಿರಾಟ್ ಕೊಹ್ಲಿ ಪುಣೆಯಲ್ಲಿ 50 ಟೆಸ್ಟ್ ಮ್ಯಾಚ್ಗಳಲ್ಲಿ ಭಾರತ ತಂಡವನ್ನು ಮುನ್ನಡೆಸುವ ಮೂಲಕ ಇಷ್ಟೊಂದು ಟೆಸ್ಟ್ಗಳಲ್ಲಿ ನಾಯಕತ್ವ ವಹಿಸಿದ 2ನೇ ಆಟಗಾರ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಪುಣೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಅವರು ಗಂಗೂಲಿ ಅವರನ್ನ ಹಿಂದಿಕ್ಕಿ 2ನೇ ಸ್ಥಾನಕ್ಕೆ ಏರಿದ್ದಾರೆ.
60 ಟೆಸ್ಟ್ ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ್ದ ಎಂ ಎಸ್ ಧೋನಿ ಮೊದಲ ಸ್ಥಾನದಲ್ಲಿದ್ದಾರೆ. 49 ಟೆಸ್ಟ್ ಮ್ಯಾಚ್ಗಳಲ್ಲಿ ನಾಯಕತ್ವ ವಹಿಸಿಕೊಂಡಿದ್ದ ಗಂಗೂಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
30 ವರ್ಷದ ವಿರಾಟ್ ಕೊಹ್ಲಿ ನಾಯಕತ್ವ ವಹಿಸಿಕೊಂಡ 49 ಟೆಸ್ಟ್ ಪಂದ್ಯಗಳಲ್ಲಿ 27 ಗೆಲುವು ಸಾಧಿಸಿದ್ದಾರೆ. ಧೋನಿ 60 ಟೆಸ್ಟ್ ಪಂದ್ಯಗಳಲ್ಲಿ ಅಷ್ಟೇ ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿದ್ದಾರೆ. ಇನ್ನು ನಾಯಕತ್ವ ವಹಿಸಿದ 50ನೇ ಪಂದ್ಯದಲ್ಲಿ ಕೊಹ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
-
It will be Match No. 50 as Test Captain for @imVkohli when he takes the field in the 2nd Test against South Africa. Congratulations Skip! 👏👏🇮🇳 #TeamIndia #INDvSA pic.twitter.com/Itfw2BiJgG
— BCCI (@BCCI) October 9, 2019 " class="align-text-top noRightClick twitterSection" data="
">It will be Match No. 50 as Test Captain for @imVkohli when he takes the field in the 2nd Test against South Africa. Congratulations Skip! 👏👏🇮🇳 #TeamIndia #INDvSA pic.twitter.com/Itfw2BiJgG
— BCCI (@BCCI) October 9, 2019It will be Match No. 50 as Test Captain for @imVkohli when he takes the field in the 2nd Test against South Africa. Congratulations Skip! 👏👏🇮🇳 #TeamIndia #INDvSA pic.twitter.com/Itfw2BiJgG
— BCCI (@BCCI) October 9, 2019
ಅತಿಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದವರು
ಎಂ.ಎಸ್ ಧೋನಿ- 60
ವಿರಾಟ್ ಕೊಹ್ಲಿ- 50
ಸೌರವ್ ಗಂಗೂಲಿ- 49
ಸುನಿಲ್ ಗವಸ್ಕರ್/ ಮೊಹಮ್ಮದ್ ಅಝುರುದ್ಧಿನ್- 47
ಮನ್ಸೂರ್ ಅಲಿಖಾನ್ ಪಟೌಡಿ- 40