ETV Bharat / sports

ಟೆಸ್ಟ್​ ರ‍್ಯಾಂಕಿಂಗ್​ನಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದ ಕೊಹ್ಲಿ... ಬಾಬರ್​ ಅಜಂ ಶ್ರೇಷ್ಠ ಸಾಧನೆ

author img

By

Published : Dec 24, 2019, 3:27 PM IST

ಸೋಮವಾರ ಬಿಡುಗಡೆಯಾದ ಏಕದಿನ ಕ್ರಿಕೆಟ್ ಬ್ಯಾಟಿಂಗ್​ ರ‍್ಯಾಂಕಿಂಗ್​ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದ ವಿರಾಟ್​ ಕೊಹ್ಲಿ ಮಂಗಳವಾರ ಬಿಡುಗಡೆಯಾದ ಟೆಸ್ಟ್​ ರ‍್ಯಾಂಕಿಂನಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

Virat Kohli Regains Top Spot in Test Rankings

ಲಂಡನ್​: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಟೆಸ್ಟ್​ ಬ್ಯಾಟಿಂಗ್​ ರ‍್ಯಾಂಕಿಂಗ್​ನಲ್ಲಿ ತಮ್ಮ ಅಧಿಪತ್ಯ ಮುಂದುವರಿಸಿದ್ದಾರೆ.

ಸೋಮವಾರ ಬಿಡುಗಡೆಯಾದ ಏಕದಿನ ಕ್ರಿಕೆಟ್ ಬ್ಯಾಟಿಂಗ್​ ರ‍್ಯಾಂಕಿಂಗ್​ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದ ವಿರಾಟ್​ ಕೊಹ್ಲಿ ಮಂಗಳವಾರ ಬಿಡುಗಡೆಯಾದ ಟೆಸ್ಟ್​ ರ‍್ಯಾಂಕಿಂನಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಈ ಮೂಲಕ ವಿರಾಟ್​ ಕೊಹ್ಲಿ ಎಲ್ಲ ಮಾದರಿಯ ಕ್ರಿಕೆಟ್​ನಲ್ಲೂ ಟಾಪ್​ 10 ರೊಳಗೆ ಕಾಣಿಸಿಕೊಂಡ ಏಕೈಕ ಭಾರತೀಯ ಬ್ಯಾಟ್ಸ್​​ಮನ್​ ಎನಿಸಿಕೊಂಡಿದ್ದಾರೆ. ಕೊಹ್ಲಿ ಬಿಟ್ಟರೆ ಪಾಕ್​ನ ಬಾಬರ್​ ಅಜಂ ಮಾತ್ರ ಎಲ್ಲ ಮಾದರಿಯ ರ‍್ಯಾಂಕಿಂಗ್​ನಲ್ಲಿ ಟಾಪ್​ 10ರೊಳಗೆ ಕಾಣಿಸಿಕೊಂಡಿರುವ ಮತ್ತೊಬ್ಬ ಬ್ಯಾಟ್ಸ್​ಮನ್​ ಆಗಿದ್ದಾರೆ.

Babar Azam achieves his career-highest rating to rise to No.6 on the @MRFWorldwide ICC Test Rankings for batting!

Updated rankings: https://t.co/UQn9xI4e8K pic.twitter.com/XFRahIlKOd

— ICC (@ICC) December 24, 2019 ">

ವಿರಾಟ್ ಕೊಹ್ಲಿ 928 ಅಂಕದೊಂದಿಗೆ ಅಗ್ರಪಟ್ಟ ಅಲಂಕರಿಸಿದ್ದರೆ, ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಸ್ಟಿವ್​ ಸ್ಮಿತ್ 913 ಅಂಕ ಪಡೆದಿದ್ದಾರೆ. 3ನೇ ಸ್ಥಾನದಲ್ಲಿ ನ್ಯೂಜಿಲ್ಯಾಂಡ್​ನ ಕೇನ್​ ವಿಲಿಯಮ್ಸ್( ​, 4ನೇ ಸ್ಥಾನದಲ್ಲಿ ಚೇತೇಶ್ವರ್​ ಪೂಜಾರ(791), 5ನೇ ಸ್ಥಾನದಲ್ಲಿ ಮಾರ್ನಸ್​ ಲಾಬುಶೇನ್(786)​, 6ನೇ ಸ್ಥಾನದಲ್ಲಿ ಪಾಕಿಸ್ಥಾನದ ಬಾಬರ್​ ಅಜಂ(767), 7ನೇ ಸ್ಥಾನದಲ್ಲಿ ಭಾರತದ ಅಜಿಂಕ್ಯಾ ರಹಾನೆ(759), 8ನೇ ಸ್ಥಾನದಲ್ಲಿ ಡೇವಿಡ್ ವಾರ್ನರ್(755)​, 9ನೇ ಸ್ಥಾನದಲ್ಲಿ ಜೋ ರೂಟ್​ (752)ಹಾಗೂ 10 ನೇ ಸ್ಥಾನದಲ್ಲಿ ನ್ಯೂಜಿಲ್ಯಾಂಡ್​ನ ರಾಸ್​ ಟೇಲರ್​(714)ಇದ್ದಾರೆ.

ಕನ್ನಡಿಗ ಮಯಾಂಕ್​ ಅಗರ್​ವಾಲ್​ 12 ನೇಸ್ಥಾನದಲ್ಲಿದ್ದರೆ, ರೋಹಿತ್​ ಶರ್ಮಾ 15ನೇ ಸ್ಥಾನದಲ್ಲಿದ್ದಾರೆ.

ಲಂಡನ್​: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಟೆಸ್ಟ್​ ಬ್ಯಾಟಿಂಗ್​ ರ‍್ಯಾಂಕಿಂಗ್​ನಲ್ಲಿ ತಮ್ಮ ಅಧಿಪತ್ಯ ಮುಂದುವರಿಸಿದ್ದಾರೆ.

ಸೋಮವಾರ ಬಿಡುಗಡೆಯಾದ ಏಕದಿನ ಕ್ರಿಕೆಟ್ ಬ್ಯಾಟಿಂಗ್​ ರ‍್ಯಾಂಕಿಂಗ್​ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದ ವಿರಾಟ್​ ಕೊಹ್ಲಿ ಮಂಗಳವಾರ ಬಿಡುಗಡೆಯಾದ ಟೆಸ್ಟ್​ ರ‍್ಯಾಂಕಿಂನಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಈ ಮೂಲಕ ವಿರಾಟ್​ ಕೊಹ್ಲಿ ಎಲ್ಲ ಮಾದರಿಯ ಕ್ರಿಕೆಟ್​ನಲ್ಲೂ ಟಾಪ್​ 10 ರೊಳಗೆ ಕಾಣಿಸಿಕೊಂಡ ಏಕೈಕ ಭಾರತೀಯ ಬ್ಯಾಟ್ಸ್​​ಮನ್​ ಎನಿಸಿಕೊಂಡಿದ್ದಾರೆ. ಕೊಹ್ಲಿ ಬಿಟ್ಟರೆ ಪಾಕ್​ನ ಬಾಬರ್​ ಅಜಂ ಮಾತ್ರ ಎಲ್ಲ ಮಾದರಿಯ ರ‍್ಯಾಂಕಿಂಗ್​ನಲ್ಲಿ ಟಾಪ್​ 10ರೊಳಗೆ ಕಾಣಿಸಿಕೊಂಡಿರುವ ಮತ್ತೊಬ್ಬ ಬ್ಯಾಟ್ಸ್​ಮನ್​ ಆಗಿದ್ದಾರೆ.

ವಿರಾಟ್ ಕೊಹ್ಲಿ 928 ಅಂಕದೊಂದಿಗೆ ಅಗ್ರಪಟ್ಟ ಅಲಂಕರಿಸಿದ್ದರೆ, ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಸ್ಟಿವ್​ ಸ್ಮಿತ್ 913 ಅಂಕ ಪಡೆದಿದ್ದಾರೆ. 3ನೇ ಸ್ಥಾನದಲ್ಲಿ ನ್ಯೂಜಿಲ್ಯಾಂಡ್​ನ ಕೇನ್​ ವಿಲಿಯಮ್ಸ್( ​, 4ನೇ ಸ್ಥಾನದಲ್ಲಿ ಚೇತೇಶ್ವರ್​ ಪೂಜಾರ(791), 5ನೇ ಸ್ಥಾನದಲ್ಲಿ ಮಾರ್ನಸ್​ ಲಾಬುಶೇನ್(786)​, 6ನೇ ಸ್ಥಾನದಲ್ಲಿ ಪಾಕಿಸ್ಥಾನದ ಬಾಬರ್​ ಅಜಂ(767), 7ನೇ ಸ್ಥಾನದಲ್ಲಿ ಭಾರತದ ಅಜಿಂಕ್ಯಾ ರಹಾನೆ(759), 8ನೇ ಸ್ಥಾನದಲ್ಲಿ ಡೇವಿಡ್ ವಾರ್ನರ್(755)​, 9ನೇ ಸ್ಥಾನದಲ್ಲಿ ಜೋ ರೂಟ್​ (752)ಹಾಗೂ 10 ನೇ ಸ್ಥಾನದಲ್ಲಿ ನ್ಯೂಜಿಲ್ಯಾಂಡ್​ನ ರಾಸ್​ ಟೇಲರ್​(714)ಇದ್ದಾರೆ.

ಕನ್ನಡಿಗ ಮಯಾಂಕ್​ ಅಗರ್​ವಾಲ್​ 12 ನೇಸ್ಥಾನದಲ್ಲಿದ್ದರೆ, ರೋಹಿತ್​ ಶರ್ಮಾ 15ನೇ ಸ್ಥಾನದಲ್ಲಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.