ಹೈದರಾಬಾದ್: ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಗಳಿಸಿದೆ. ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಭರ್ಜರಿ ದ್ವಿಶತಕ ಗಳಿಸಿದ್ದರು. ಈ ಬಗ್ಗೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.
ಮಯಾಂಕ್ ಅಂಗರ್ವಾಲ್ ಮೈದಾನದಲ್ಲಿ ದಿವಶತಕದತ್ತ ಮುನ್ನುಗ್ಗುತ್ತಿದ್ದಂತೆ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪೆವಿಲಿಯನ್ನಲ್ಲಿ ನಿಂತು ಕನ್ನಡಿಗನನ್ನು ಹುರಿದುಂಬಿಸಿದರು. ದ್ವಿಶತಕ ಸಿಡಿಸುವಂತೆ ಸನ್ನೆ ಮಾಡಿ ಯುವ ಆಟಗಾರನನ್ನು ಪ್ರೋತ್ಸಾಹಿಸಿದರು. ಈ ಪಂದ್ಯದ ಬಳಿಕ, ಮಯಾಂಕ್ ದ್ವಿಶತಕದತ್ತ ಮುನ್ನುಗ್ಗಲು ನಿಮ್ಮ ಸಲಹ ಸೂಚನೆ ಎಂದು ಕೇಳಲಾದ ಪ್ರಶ್ನೆಗೆ ಕೊಹ್ಲಿ ಉತ್ತರಿಸಿದ್ದಾರೆ.
-
On being asked about his gesture to @mayankcricket to go for his double ton, here's what @imVkohli had to say👌 pic.twitter.com/b6hGIYRrXV
— BCCI (@BCCI) November 16, 2019 " class="align-text-top noRightClick twitterSection" data="
">On being asked about his gesture to @mayankcricket to go for his double ton, here's what @imVkohli had to say👌 pic.twitter.com/b6hGIYRrXV
— BCCI (@BCCI) November 16, 2019On being asked about his gesture to @mayankcricket to go for his double ton, here's what @imVkohli had to say👌 pic.twitter.com/b6hGIYRrXV
— BCCI (@BCCI) November 16, 2019
'ಒಬ್ಬ ಯುವ ಆಟಗಾರ ಮೈದಾನಕ್ಕೆ ಬಂದು ದೊಡ್ಡ ಮೊತ್ತ ಕಲೆ ಹಾಕುವುದು ಅಷ್ಟು ಸುಲಭವಲ್ಲ. ನಾನು ಒಬ್ಬ ಬ್ಯಾಟ್ಸ್ಮನ್ ಆಗಿರುವುದರಿಂದ ಆ ಸವಾಲಿನ ಬಗ್ಗೆ ನನಗೆ ಗೊತ್ತಿದೆ. ದೊಡ್ಡ ಮೊತ್ತ ಕಲೆಹಾಕಲು ಸಮಯ ಬೇಕು. ಆಟದ ಬಗ್ಗೆ ಗಮನ ಇಲ್ಲದೇ ಹೋದರೆ ಮುಂದಿನ ಆರು ಎಸೆತಗಳನ್ನು ಎದುರಿಸುವುದು ಕಠಿಣವಾಗಬಹುದು. ನಾನು ಹೇಳುವುದಿಷ್ಟೇ, ನಾನು ಯುವ ಆಟಗಾರನಾಗಿ ಮಾಡಿದ ತಪ್ಪುಗಳನ್ನು ನೀವು ಪುನರಾವರ್ತನೆ ಮಾಡಬಾರಬಾದು ಎಂದಷ್ಟೇ ಹೇಳುತ್ತೇನೆ' ಎಂದು ವಿರಾಟ್ ಯುವ ಆಟಗಾರರಿಗೆ ಸಲಹೆ ನೀಡಿದ್ದಾರೆ.
ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದಲ್ಲಿ ಕೊಹ್ಲಿ ಟೀಂ ಇನ್ನಿಂಗ್ಸ್ ಮತ್ತು 130ರ ರನ್ಗಳ ಅಂತರದಿಂದ ಜಯ ಗಳಿಸಿದೆ.