ದುಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ಟಿ-20 ಶ್ರೇಯಾಂಕದಲ್ಲಿ ಒಂದು ಸ್ಥಾನ ಬಡ್ತಿ ಪಡೆದು 5ನೇ ಸ್ಥಾನಕ್ಕೇರಿದ್ದಾರೆ. ಆದರೆ 4 ಪಂದ್ಯಗಳಲ್ಲಿ ವಿಫಲರಾಗಿದ್ದ ಕೆ.ಎಲ್.ರಾಹುಲ್ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಸರಣಿ ಆರಂಭದಲ್ಲಿ ಅವರು 2ನೇ ಸ್ಥಾನದಲ್ಲಿದ್ದರು.
ಕೊಹ್ಲಿ ಈ ಸರಣಿಯಲ್ಲಿ 3 ಅರ್ಧಶತಕ ಸಹಿತ 231 ರನ್ ಗಳಿಸಿ ಇಂಗ್ಲೆಂಡ್ ವಿರುದ್ಧ 3-2ರಲ್ಲಿ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಕನ್ನಡಿಗ ಕೆ.ಎಲ್.ರಾಹುಲ್ರನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರುವ ಮೂಲಕ ಮೂರು ಮಾದರಿಯಲ್ಲೂ ಭಾರತದ ಅಗ್ರ ರ‍್ಯಾಂಕಿಂಗ್ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
-
↗️ Batsmen Virat Kohli, Devon Conway move up
— ICC (@ICC) March 24, 2021 " class="align-text-top noRightClick twitterSection" data="
↗️ Adil Rashid climbs up one spot in bowlers rankings
The weekly updates of the @MRFWorldwide ICC Men's T20I Player Rankings are out!
Full list: https://t.co/EdMBsm6zwM pic.twitter.com/IzroX6YUqT
">↗️ Batsmen Virat Kohli, Devon Conway move up
— ICC (@ICC) March 24, 2021
↗️ Adil Rashid climbs up one spot in bowlers rankings
The weekly updates of the @MRFWorldwide ICC Men's T20I Player Rankings are out!
Full list: https://t.co/EdMBsm6zwM pic.twitter.com/IzroX6YUqT↗️ Batsmen Virat Kohli, Devon Conway move up
— ICC (@ICC) March 24, 2021
↗️ Adil Rashid climbs up one spot in bowlers rankings
The weekly updates of the @MRFWorldwide ICC Men's T20I Player Rankings are out!
Full list: https://t.co/EdMBsm6zwM pic.twitter.com/IzroX6YUqT
ಕೊನೆಯ ಪಂದ್ಯದಲ್ಲಿ 34 ಎಸೆತಗಳಲ್ಲಿ 64 ರನ್ ಚಚ್ಚಿದ್ದ ರೋಹಿತ್ ಶರ್ಮಾ 3 ಸ್ಥಾನ ಬಡ್ತಿ ಪಡೆದರೂ 14ನೇ ಶ್ರೇಯಾಂಕ ಪಡೆದಿದ್ದಾರೆ. ಶ್ರೇಯಸ್ ಐಯ್ಯರ್ ಜೀವನ ಶ್ರೇಷ್ಠ 26, ಸೂರ್ಯ ಕುಮಾರ್ ಯಾದವ್ 66 ಮತ್ತು ಪಂತ್ 69ನೇ ಸ್ಥಾನಕ್ಕೇರಿದ್ದಾರೆ. ಮೊದಲ 3ರಲ್ಲಿ ಇಂಗ್ಲೆಂಡ್ನ ಡೇವಿಡ್ ಮಲನ್, ಆಸೀಸ್ ನಾಯಕ ಆ್ಯರೋನ್ ಫಿಂಚ್ ಮತ್ತು ಪಾಕ್ನ ಬಾಬರ್ ಅಜಮ್ ಇದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ಭುವನೇಶ್ವರ್ ಕುಮಾರ್ ಬರೋಬ್ಬರಿ 21 ಸ್ಥಾನ ಬಡ್ತಿ ಪಡೆದು 24ಕ್ಕೇರಿದ್ದಾರೆ. ಇಂಗ್ಲೆಂಡ್ ಪರ ಆದಿಲ್ ರಶೀದ್ ಒಂದು ಸ್ಥಾನ ಮೇಲೇರಿ 4ಕ್ಕೆ ಬಡ್ತಿ ಪಡೆದರೆ, ತಲಾ 12 ಸ್ಥಾನ ಏರಿಕೆ ಕಂಡಿರುವ ಜೋಫ್ರಾ ಆರ್ಚರ್ 22, ಮಾರ್ಕ್ವುಡ್ 27ನೇ ಶ್ರೇಯಾಂಕ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಶಂಸಿ ಅಫ್ಘಾನಿಸ್ತಾನದ ರಶೀದ್ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.