ಲಂಡನ್: ಕೇಸರಿ ಬಣ್ಣದ ಜರ್ಸಿ ಇಂಗ್ಲೆಂಡ್ ವಿರುದ್ಧ ಆಡಲು ಮಾತ್ರ ತೊಡುತ್ತಿದ್ದೇವೆ. ಆದರೆ, ಟೀಂ ಇಂಡಿಯಾ ಎಂದಿಗೂ ನೀಲಿ ಬಣ್ಣದ ಜರ್ಸಿ ತೊಡಲು ಹೆಮ್ಮೆ ಪಡುತ್ತದೆ ಎಂದು ಕೊಹ್ಲಿ ತಿಳಿಸಿದ್ದಾರೆ.
ಇಂಗ್ಲೆಂಡ್ ತಂಡದ ಎದುರು ವಿಶ್ವಕಪ್ನಲ್ಲಿ ಕೇಸರಿ ಬಣ್ಣದ ಜರ್ಸಿ ತೊಡುತ್ತಿರುವುದರ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತ ತಂಡದ ನಾಯಕ ಕೊಹ್ಲಿ, ಹೊಸ ಜರ್ಸಿ ತುಂಬಾ ಚೆನ್ನಾಗಿದೆ. ಉತ್ತಮ ಫಿಟ್ ಇದ್ದು, ಅದನ್ನು ತೊಡಲು ನಮಗೆ ಖುಷಿಯಿದೆ. ಆದರೆ, ನಮ್ಮ ತಂಡಕ್ಕೆ ಯಾವಾಗಲೂ ನೀಲಿ ಬಣ್ಣವೇ ಸೂಕ್ತವಾದ ಜರ್ಸಿ. ಅದನ್ನು ತೊಟ್ಟು ಆಡುವುದೇ ನಮಗೆ ಹೆಮ್ಮೆ ಎಂದು ತಿಳಿಸಿದ್ದಾರೆ.
-
Captain @imVkohli gives the new jersey an 8/10 - What about you #TeamIndia #ENGvIND #CWC19 pic.twitter.com/lYdqqS7TuZ
— BCCI (@BCCI) June 29, 2019 " class="align-text-top noRightClick twitterSection" data="
">Captain @imVkohli gives the new jersey an 8/10 - What about you #TeamIndia #ENGvIND #CWC19 pic.twitter.com/lYdqqS7TuZ
— BCCI (@BCCI) June 29, 2019Captain @imVkohli gives the new jersey an 8/10 - What about you #TeamIndia #ENGvIND #CWC19 pic.twitter.com/lYdqqS7TuZ
— BCCI (@BCCI) June 29, 2019
ಈ ವಿಶ್ವಕಪ್ನಲ್ಲಿ ಇಂಗ್ಲೆಂಡ್, ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ನೀಲಿ ಜರ್ಸಿ ಹೊಂದಿರುವುದರಿಂದ ನೋಡುಗರಿಗೆ ಗೊಂದಲ ಉಂಟಾಗಲಿದೆ ಎಂದು ಅಫ್ಘಾನಿಸ್ತಾನ ಹಾಗೂ ಭಾರತ ತಂಡಗಳಿಗೆ ಐಸಿಸಿ ಎರಡು ಜರ್ಸಿ ತೊಡಲು ತಿಳಿಸಿತ್ತು. ಇದರಂತೆ ಭಾರತ ಕೇಸರಿ ಬಣ್ಣ ಜರ್ಸಿಯನ್ನು, ಆಫ್ಘಾನಿಸ್ತಾನ ಕೆಂಪು ಬಣ್ಣದ ಜರ್ಸಿಯನ್ನು ಆಯ್ಕೆ ಮಾಡಿಕೊಂಡಿದ್ದವು.
ಜೂನ್ 18 ರಂದು ಇಂಗ್ಲೆಂಡ್ ತಂಡದೆದುರು ಆಫ್ಘಾನಿಸ್ತಾನ ತಂಡ ತೋಳಿನಲ್ಲಿ ಕೆಂಪು ಬಣ್ಣವಿರುವ ಜರ್ಸಿ ತೊಟ್ಟಿದ್ದರು. ಇದೀಗ ಭಾರತ ತಂಡ ನಾಳೆ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಕೇಸರಿ ಬಣ್ಣದ ಜರ್ಸಿ ತೊಡಲಿದೆ.