ನವದೆಹಲಿ: ಎಂಎಸ್ ಧೋನಿ ಹಾಗೂ ರೋಹಿತ್ ಶರ್ಮಾಗೆ ಹೋಲಿಸಿದರೆ ವಿರಾಟ್ ಕೊಹ್ಲಿ ನಾಯಕರಾಗಿ ಪ್ರಭಲರಲ್ಲ ಎಂದು ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ತಿಳಿಸಿದ್ಧಾರೆ.
ಭಾರತದ ಮಾಜಿ ನಾಯಕ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಹಾಗೂ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ನಾಯಕನಾಗಿ ತಮ್ನ ತಂಡವನ್ನು ತಲಾ ಮೂರು ಬಾರಿ ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಆದರೆ ಕೊಹ್ಲಿ ನಾಯಕನಾಗಿ ಆರ್ಸಿಬಿಯನ್ನು ಒಂದು ಬಾರಿಯೂ ಚಾಂಪಿಯನ್ ಪಟ್ಟಕ್ಕೇರಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಕೊಹ್ಲಿಯನ್ನು ರೋಹಿತ್ ಹಾಗೂ ಧೋನಿಯ ಜೊತೆ ಕೊಹ್ಲಿ ನಾಯಕತ್ವವನ್ನು ಹೋಲಿಕೆ ಮಾಡಬಾರದು ಎಂದು ಗಂಭೀರ್ ಹೇಳಿದ್ದಾರೆ.
ಕಳೆದ ಏಳೆಂಟು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ವಹಿಸಿಕೊಂಡರೂ ಒಮ್ಮೆಯೂ ಐಪಿಎಲ್ ಪ್ರಶಸ್ತಿ ಗೆಲ್ಲದ ವಿರಾಟ್ ಕೊಹ್ಲಿಯನ್ನು ನಾಯಕನನ್ನಾಗಿಯೇ ಆರ್ಸಿಬಿ ಮುಂದುವರಿಸಿರುವುದು ಅವರ ಅದೃಷ್ಠ, ಇದಕ್ಕೆ ಫ್ರಾಂಚೈಸಿಗೆ ವಿರಾಟ್ ಕೊಹ್ಲಿ ಕೃತಜ್ಞರಾಗಿರಬೇಕು ಎಂದು ಡೆಲ್ಲಿ ಡ್ಯಾಶರ್ ಗೌತಮ್ ಗಂಭೀರ್ ಖಾಸಗಿ ಕಾರ್ಯಜಕ್ರಮವೊಂದರಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕೊಹ್ಲಿ ಬೆಂಬಲಕ್ಕೆ ಗಂಗೂಲಿ:
ಇನ್ನು ಕೊಹ್ಲಿ ಬೆಂಬಲಕ್ಕೆ ನಿಂತಿರುವ ಮಾಜಿ ನಾಯಕ ಗಂಗೂಲಿ ಗಂಭೀರ್ ಹೇಳಿಕೆಗೆ ತದ್ವಿರುದ್ಧವಾಗಿ ಮಾತನಾಡಿದ್ದಾರೆ. ಕೊಹ್ಲಿ ನಾಯಕನಾಗಿ ತಮ್ಮ ಭಾರತ ತಂಡವನ್ನು ಯಾವರೀತಿ ಮುನ್ನಡೆಸಿದ್ದಾರೆಂಬುದನ್ನು ಕಳೆದೆರಡು ವರ್ಷಗಳಿಂದ ನೋಡಿದ್ದೇವೆ, ಅವರ ನಾಯಕತ್ವದ ಬಗ್ಗೆ ಯಾವದೇ ಪ್ರಶ್ನೆ ಬೇಡ, ಕೊಹ್ಲಿ ಖಂಡಿತಾ ಆರ್ಸಿಬಿ ತಂಡಕ್ಕೆ ನಾಯಕನಾಗಕಲು ಅರ್ಹರು, ಮುಂದೊಂದು ದಿನ ಆರ್ಸಿಬಿ ಚಾಂಪಿಯನ್ ಆಗುತ್ತದೆ ಎಂದು ಕೊಹ್ಲಿ ನಾಯಕತ್ವವನ್ನು ಕೊಂಡಾಡಿದ್ದಾರೆ.