ETV Bharat / sports

ಮೊದಲ ಸ್ಥಾನದಲ್ಲೇ ಮುಂದುವರಿದ ಕೊಹ್ಲಿ.... ಟಾಪ್ ​10ಗೆ ಎಂಟ್ರಿಕೊಟ್ಟ ಬುಮ್ರಾ - ಟೆಸ್ಟ್​ ಬೌಲಿಂಗ್​ ರ್ಯಾಂಕ್​ ಟಾಪ್ ​10ಗೆ ಎಂಟ್ರಿಕೊಟ್ಟ ಬುಮ್ರಾ

ವೆಸ್ಟ್​ ಇಂಡೀಸ್​ ವಿರುದ್ಧ ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿದ್ದ ಬುಮ್ರಾ ನೂತನ ಐಸಿಸಿ ಶ್ರೇಯಾಂಕದಲ್ಲಿ 9 ಸ್ಥಾನ ಏರಿಕೆ ಕಂಡು ಮೊದಲ ಬಾರಿಗೆ ಟಾಪ್​ 10 ಒಳಗೆ ಕಾಣಿಸಿಕೊಂಡಿದ್ದಾರೆ.

Virat Kohli
author img

By

Published : Aug 28, 2019, 11:37 AM IST

ಮುಂಬೈ: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ವೆಸ್ಟ್​ ವಿಂಡೀಸ್​ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ದೊಡ್ಡ ಮೊತ್ತ ಗಳಿಸಲು ವಿಫಲವಾದ ಬೆನ್ನಲ್ಲೇ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಉಳಿಸಿಕೊಂಡರೂ 12 ರೇಟಿಂಗ್ ಅಂಕ ಕಳೆದುಕೊಂಡಿದ್ದಾರೆ.

ನೂತನ ಟೆಸ್ಟ್​ ಶ್ರೇಯಾಂಕ ಬಿಡುಗಡೆಯಾಗಿದ್ದು, ಕೊಹ್ಲಿ ನಂಬರ್ ​ಒನ್​ ಸ್ಥಾನ ಉಳಿಸಿಕೊಂಡರು 922 ಇದ್ದ ರೇಟಿಂಗ್​ ಅಂಕ 910ಕ್ಕೆ ಕುಸಿದಿದ್ದಾರೆ. 913 ಅಂಕ ಪಡೆದಿದ್ದ ಸ್ಮಿತ್​ ಕೂಡ 9 ಅಂಕ ಕಳೆದುಕೊಂಡು 904 ಅಂಕ ಪಡೆದು 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಕೊಹ್ಲಿ ಬಿಟ್ಟರೆ ಪೂಜಾರಾ 4 ಸ್ಥಾನದಲ್ಲಿರುವ ಮತ್ತೊಬ್ಬ ಭಾರತೀಯ. ಇನ್ನು ಎರಡೂ ಇನ್ನಿಂಗ್ಸ್​ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ರಹಾನೆ 21 ನೇ ಸ್ಥಾನದಿಂದ 11ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ವಿಂಡೀಸ್​ ವಿರುದ್ಧ ಅದ್ಭುತ ಬೌಲಿಂಗ್​ ಪ್ರದರ್ಶನ ತೋರಿದ ಬುಮ್ರಾ 16 ರಿಂದ 7 ನೇ ಶ್ರೇಯಾಂಕಕ್ಕೆ ಜಿಗಿದಿದ್ದಾರೆ. ಜಡೇಜಾ 6 ರಿಂದ 10ಕ್ಕೆ ಅಶ್ವಿನ್​ 10ರಿಂದ 13ಕ್ಕೆ ಕುಸಿದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.