ETV Bharat / sports

ವಿರಾಟ್​ ಕೊಹ್ಲಿ ಎಲ್ಲಾ ಮಾದರಿಯಲ್ಲೂ ಅತ್ಯುತ್ತಮ ಬ್ಯಾಟ್ಸ್​ಮನ್​: ಪಾಕ್ ವೇಗಿ ಜುನೈದ್​ ಖಾನ್​ - ಪಾಕ್ ವೇಗಿ ಜುನೈದ್​ ಖಾನ್​

ಕೊಹ್ಲಿ ಸ್ಥಿರತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜುನೈದ್​, ಪ್ರಸ್ತುತ ಕೊಹ್ಲಿ ಪ್ರತಿಸ್ಪರ್ಧಿಗಳಾದ ಇಂಗ್ಲೆಂಡ್​ ತಂಡದ ನಾಯಕ ಜೋ ರೂಟ್​, ಆಸ್ಟ್ರೇಲಿಯಾದ ಸ್ಟಿವ್​ ಸ್ಮಿತ್​, ನ್ಯೂಜಿಲ್ಯಾಂಡ್​ನ ಕೇನ್​ ವಿಲಿಯಮ್ಸನ್​ ಹಾಗೂ ಪಾಕಿಸ್ತಾನದ ಸೀಮಿತ ಓವರ್​ಗಳ ನಾಯಕ ಬಾಬರ್​ ಅಜಾಮ್​ ಅವರಿಗಿಂತ ​ಕೊಹ್ಲಿ ಮುಂದಿದ್ದಾರೆ ಎಂದು ಜುನೈದ್​ ತಿಳಿಸಿದ್ದಾರೆ.

Virat Kohli is the best batsman
ವಿರಾಟ್​ ಕೊಹ್ಲಿ ಎಲ್ಲಾ ಮಾದರಿಯಲ್ಲೂ ಅತ್ಯುತ್ತಮ ಬ್ಯಾಟ್ಸ್​ಮನ್​
author img

By

Published : Jul 27, 2020, 4:36 PM IST

ಲಾಹೋರ್​: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ಅತ್ಯುತ್ತಮ ಬ್ಯಾಟ್ಸ್​ಮನ್​ ಎಂದು ಪಾಕಿಸ್ತಾನದ ಎಡಗೈ ವೇಗಿ ಜುನೈದ್​ ಖಾನ್​ ಅಭಿಪ್ರಾಯಪಟ್ಟಿದ್ದಾರೆ.

ಕೊಹ್ಲಿ ಸ್ಥಿರತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜುನೈದ್​, ಪ್ರಸ್ತುತ ಕೊಹ್ಲಿ ಪ್ರತಿಸ್ಪರ್ಧಿಗಳಾದ ಇಂಗ್ಲೆಂಡ್​ ತಂಡದ ನಾಯಕ ಜೋ ರೂಟ್​, ಆಸ್ಟ್ರೇಲಿಯಾದ ಸ್ಟಿವ್​ ಸ್ಮಿತ್​ , ನ್ಯೂಜಿಲ್ಯಾಂಡ್​ನ ಕೇನ್​ ವಿಲಿಯಮ್ಸನ್​ ಹಾಗೂ ಪಾಕಿಸ್ತಾನದ ಸೀಮಿತ ಓವರ್​ಗಳ ನಾಯಕ ಬಾಬರ್​ ಅಜಾಮ್​ ಅವರಿಗಿಂತ ​ಕೊಹ್ಲಿ ಮುಂದಿದ್ದಾರೆ ಎಂದು​ ತಿಳಿಸಿದ್ದಾರೆ.

ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ಕೊಹ್ಲಿ ಉತ್ತಮ ಎನ್ನುವುದರಲ್ಲಿ ಯಾವುದೇ ರೀತಿಯ ಅನುಮಾನಗಳಿಲ್ಲ. ನೀವು ಯಾರಿಗೆ ಈ ಪ್ರಶ್ನೆ ಕೇಳಿದರೂ, ಬಾಬರ್​ ಅಜಾಮ್​, ಜೋ ರೂಟ್​, ಕೇನ್​ ವಿಲಿಯಮ್ಸನ್​ ಸ್ಟಿವ್ ಸ್ಮಿತ್​ ಹಾಗೂ ಕೊಹ್ಲಿಯನ್ನು ವಿಶ್ವದ ಟಾಪ್​ಬ್ಯಾಟ್ಸ್​ಮನ್​ಗಳೆಂತಲೂ, ಆ ಲಿಸ್ಟ್​ನಲ್ಲಿ ಕೊಹ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರು ಮೂರು ಮಾದರಿಯ ಕ್ರಿಕೆಟ್​ನಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ ಎಂದು ಯೂಟ್ಯೂಬ್​ ಚಾನಲ್​ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಜುನೈದ್​ ಖಾನ್​
ಜುನೈದ್​ ಖಾನ್​

ಪಾಕಿಸ್ತಾನ ತಂಡ 2012ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದನ್ನು ನೆನಪಿಸಿಕೊಂಡ ಜುನೈದ್​, ನಾನು ಅಂದು ಕೊಹ್ಲಿಗೆ ಹಾಕಿದ ಮೊದಲ ಎಸೆತ ವೈಡ್​ ಆಗಿತ್ತು. ನಂತರದ ಎಸೆತದಲ್ಲಿ ಆತ ರನ್‌ ಗಳಿಸಿರಲಿಲ್ಲ. ಆಗ ನಾನು ಈತ ಮಾನ್ಯ ಬ್ಯಾಟ್ಸ್‌ಮನ್ ಎಂದುಕೊಂಡಿದ್ದೆ ಎಂದು ಹೇಳಿದ್ದಾರೆ.

ಆ ಪ್ರವಾಸದಲ್ಲಿ ಎರಡೂ ಮಾದರಿಯಲ್ಲಿ ವೈಫಲ್ಯ ಕಂಡಿದ್ದ ಕೊಹ್ಲಿ ಐದು ಇನಿಂಗ್ಸ್‌ಗಳಿಂದ ಕೇವಲ 49 (9, 27, 0, 6, 7) ರನ್‌ ಗಳಿಸಲಷ್ಟೇ ಶಕ್ತರಾಗಿದ್ದರು. ಏಕದಿನ ಸರಣಿಯಲ್ಲಿ ಮೂರೂ ಪಂದ್ಯಗಳಲ್ಲಿ ಕೊಹ್ಲಿ ಜುನೈದ್‌ ಖಾನ್​ಗೆ ವಿಕೆಟ್ ‌ಒಪ್ಪಿಸಿದ್ದರು. ಪಾಕ್‌ ವೇಗಿ ಹಾಕಿದ 24 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ ಕೇವಲ 3 ರನ್‌ ಗಳಿಸಿದ್ದರು.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

'ಅದೇ ಸಂದರ್ಭದಲ್ಲಿ ಕೊಹ್ಲಿ, ಇವು ಭಾರತದ ಪಿಚ್‌ಗಳು, ಇಲ್ಲಿ ಚೆಂಡು ಹೆಚ್ಚು ವೇಗ ಮತ್ತು ಸ್ವಿಂಗ್​ ಆಗುವುದಿಲ್ಲ ಎಂದು ತಮಾಷೆಯಾಗಿ ಹೇಳಿದ್ದರು. ಅದಕ್ಕೆ ನಾನು, ನೋಡೋಣ. ಏಕೆಂದರೆ ನನ್ನಲ್ಲಿ ಸಾಕಷ್ಟು ಆವೇಗವಿದೆ ಎಂದಿದ್ದೆ' ಎಂಬುದನ್ನು ಜುನೈದ್​ ನೆನಪಿಸಿಕೊಂಡಿದ್ದಾರೆ.

2012ರಲ್ಲಿ ಪಾಕಿಸ್ತಾನ ಭಾರತ ಪ್ರವಾಸ ಕೈಗೊಂಡಿದ್ದ ವೇಳೆ ಟಿ20 ಸರಣಿಯಲ್ಲಿ 1-1ರಲ್ಲೂ ಸಮಬಲ ಸಾಧಿಸಿದರೆ ಏದಕಿನ ಸರಣಿಯನ್ನು 2-1ರಲ್ಲಿ ಗೆದ್ದುಕೊಂಡಿತ್ತು. ಬ್ಯಾಟಿಂಗ್​ನಲ್ಲಿ ನಾಸಿರ್ ಜೆಮ್​ಶೆಡ್​ ಹಾಗೂ ಬೌಲಿಂಗ್​ನಲ್ಲಿ ಜುನೈದ್​ ಖಾನ್​ ಅದ್ಭುತ ಪ್ರದರ್ಶನ ತೋರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.