ಪೋರ್ಟ್ ಆಫ್ ಸ್ಪೇನ್: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವೃತ್ತಿ ಜೀವನಕ್ಕೆ ಕಾಲಿಟ್ಟು ದಶಕ ಕಳೆದಿದ್ದು, ಈ ಅವಧಿಯಲ್ಲಿ 20000 ಅಂತಾರಾಷ್ಟ್ರೀಯ ರನ್ಗಳಿಸಿದ ಮೊಟ್ಟ ಮೊದಲ ಕ್ರಿಕೆಟಿಗ ಎಂಬ ಐತಿಹಾಸಿಕ ದಾಖಲೆಗೆ ಪಾತ್ರರಾಗಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಬುಧವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ತಮ್ಮ 43 ನೇ ಶತಕ ಸಿಡಿಸಿ ಭಾರತ ತಂಡಕ್ಕೆ 6 ವಿಕೆಟ್ಗಳ ಗೆಲುವು ತಂದುಕೊಟ್ಟಿದ್ದರು. ಕೊಹ್ಲಿ 2010 ರಿಂದ 2019ರ ವರೆಗಿನ ಅವಧಿಯಲ್ಲಿ 20 ಸಾವಿರ ಅಂತಾರಾಷ್ಟ್ರೀಯ ಕ್ರಿಕೆಟ್ ರನ್ ಗಳಿಸಿದ ದಾಖಲೆಗೆ ಪಾತ್ರರಾಗಿದ್ದಾರೆ.
ಕೊಹ್ಲಿ 10 ವರ್ಷಗಳ ಅವಧಿಯಲ್ಲಿ 20 ಸಾವಿರ ರನ್ಗಳಿಸಿದ ಮೊದಲ ಕ್ರಿಕೆಟಿಗ ಎನಿಸಿದ್ದಾರೆ. ಇವರನ್ನು ಬಿಟ್ಟರೆ 10 ವರ್ಷಗಳ ಅವಧಿಯಲ್ಲಿ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 18962 ರನ್ಸ್ , ಜಾಕ್ ಕಾಲೀಸ್ 16,777 , ಮಹೇಲಾ ಜಯವರ್ಧನೆ 16,304, ಕುಮಾರ್ ಸಂಗಾಕ್ಕರ 15,999, ಸಚಿನ್ ತೆಂಡೂಲ್ಕರ್ 15,962, ರಾಹುಲ್ ದ್ರಾವಿಡ್ 15853ಮ ಹಾಶಿಮ್ ಆಮ್ಲಾ 15185 ರನ್ಗಳಿಸಿದ ದಾಖಲೆ ಹೊಂದಿದ್ದಾರೆ.
-
@imVkohli 20000+ runs in a decade. What a consistency. Hats off! 🎩 #Kohli #Virat #INDvsWI pic.twitter.com/7H4EOD9v0l
— Vin (@vinodindia) August 14, 2019 " class="align-text-top noRightClick twitterSection" data="
">@imVkohli 20000+ runs in a decade. What a consistency. Hats off! 🎩 #Kohli #Virat #INDvsWI pic.twitter.com/7H4EOD9v0l
— Vin (@vinodindia) August 14, 2019@imVkohli 20000+ runs in a decade. What a consistency. Hats off! 🎩 #Kohli #Virat #INDvsWI pic.twitter.com/7H4EOD9v0l
— Vin (@vinodindia) August 14, 2019
ಇದೇ ಪಂದ್ಯದಲ್ಲಿ ಕೊಹ್ಲಿ ನಾಯಕನಾಗಿ 21ನೇ ಶತಕ ಪೂರೈಸಿದ್ದಾರೆ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ನಾಯಕನಾಗಿ 22 ಶತಕ ದಾಖಲಿಸಿದ್ದು, ಕೊಹ್ಲಿ ಇನ್ನೊಂದು ಶತಕ ಬಾರಿಸಿದರೆ ಪಾಂಟಿಂಗ್ ದಾಖಲೆ ಸರಿಗಟ್ಟಲಿದ್ದಾರೆ.
ಇದೇ ಪಂದ್ಯದಲ್ಲಿ ನಾಯಕನಾಗಿ ವೇಗವಾಗಿ(176) 10000 ಸಾವಿರ ಅಂತಾರಾಷ್ಟ್ರೀಯ ರನ್ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡರು. ಎರಡನೇ ಸ್ಥಾನದಲ್ಲಿರುವ ರಿಕಿ ಪಾಂಟಿಂಗ್ 225 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಕೊಹ್ಲಿ ಬಿಟ್ಟರೆ 176 ಇನ್ನಿಂಗ್ಸ್ಗಳಲ್ಲಿ ಯಾವೊಬ್ಬ ನಾಯಕ 8000 ರನ್ ಕೂಡ ದಾಟಿಲ್ಲ ಎಂಬುದು ಗಮನಾರ್ಹ.
ಒಟ್ಟಾರೆ ಕೊಹ್ಲಿ ರನ್ಮಷಿನ್ ಎಂಬ ಹೆಸರಿನ ಜೊತೆಗೆ ಸೆಂಚುರಿ ಮಷಿನ್ ಕೂಡ ಆಗುತ್ತಿದ್ದಾರೆ. ಬ್ಯಾಟಿಂಗ್ ದಾಖಲೆಗಳನ್ನು ಒಂದೊಂದಾಗಿ ತಮ್ಮ ಹೆಸರಿಗೆ ಬರೆದುಕೊಳ್ಳುತ್ತಿರುವ ಕೊಹ್ಲಿ ಮುಂದೊಂದು ದಿನ ಸಚಿನ್ರ ಗರಿಷ್ಠ ಸ್ಕೋರ್ ದಾಖಲೆಯನ್ನು ಮುರಿದರೂ ಅಚ್ಚರಿ ಪಡಬೇಕಾಗಿಲ್ಲ.