ETV Bharat / sports

ಆದಿತ್ಯ ತಾರೆ ಶತಕ: ಯುಪಿ ಮಣಿಸಿ 4ನೇ ಬಾರಿ ವಿಜಯ್ ಹಜಾರೆ ಟ್ರೋಫಿ ಗೆದ್ದ ಮುಂಬೈ

ಭಾನುವಾರ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಉತ್ತರ ಪ್ರದೇಶ 50 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 312 ರನ್ ​ಗಳಿಸಿತ್ತು. ಆರಂಭಿಕ ಬ್ಯಾಟ್ಸ್​ಮನ್ ಮಾಧವ್ ಕೌಶಿಕ್ 156 ಎಸೆತಗಳಲ್ಲಿ 15 ಬೌಂಡರಿ ಮತ್ತು 4 ಸಿಕ್ಸರ್​ ಸಹಿತ ಅಜೇಯ 158 ರನ್​ ಗಳಿಸಿದರೆ, ಸಮರ್ಥ್ ಸಿಂಗ್ 56, ಅಕ್ಷದೀಪ್ ನಾಥ್​ 55 ರನ್ ​ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.

author img

By

Published : Mar 14, 2021, 5:19 PM IST

ವಿಜಯ್ ಹಜಾರೆ ಟ್ರೋಫಿ
ವಿಜಯ್ ಹಜಾರೆ ಟ್ರೋಫಿ

ನವದೆಹಲಿ: ಆದಿತ್ಯ ತಾರೆ ಅವರ ಅಜೇಯ ಶತಕ ಮತ್ತು ನಾಯಕ ಪೃಥ್ವಿ ಶಾ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶವನ್ನು 6 ವಿಕೆಟ್​ಗಳಿಂದ ಬಗ್ಗುಬಡಿದ ಮುಂಬೈ 2021ರ ವಿಜಯ್ ಹಜಾರೆ ಟ್ರೋಫಿಯನ್ನು ಎತ್ತಿಹಿಡಿದಿದೆ.

ಭಾನುವಾರ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಉತ್ತರ ಪ್ರದೇಶ, 50 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 312 ರನ್ ​ಗಳಿಸಿತ್ತು. ಆರಂಭಿಕ ಬ್ಯಾಟ್ಸ್​ಮನ್ ಮಾಧವ್ ಕೌಶಿಕ್ 156 ಎಸೆತಗಳಲ್ಲಿ 15 ಬೌಂಡರಿ ಮತ್ತು 4 ಸಿಕ್ಸರ್​ ಸಹಿತ ಅಜೇಯ 158 ರನ್​ ಗಳಿಸಿದರೆ, ಸಮರ್ಥ್ ಸಿಂಗ್ 56, ಅಕ್ಷದೀಪ್ ನಾಥ್​ 55 ರನ್ ​ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.

ಮುಂಬೈ ಪರ ತನುಷ್ ಕೊಟಿಯನ್ 2 ವಿಕೆಟ್​ ಹಾಗೂ ಪ್ರಶಾಂತ್ ಸೋಲಂಕಿ ಒಂದು ವಿಕೆಟ್ ಪಡೆದರು.

313 ರನ್​ಗಳ ಗುರಿ ಪಡೆದ ಮುಂಬೈ ತಂಡಕ್ಕೆ ನಾಯಕ ಪೃಥ್ವಿ ಶಾ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಅವರು ಕೇವಲ 39 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್​ಗಳ ಸಹಿತ 73 ರನ್ ​ಗಳಿಸಿ ಮೊದಲ ವಿಕೆಟ್​ಗೆ ಜೈಸ್ವಾಲ್​(29) ಜೊತೆಗೆ ಕೇವಲ 9.1 ಓವರ್​ಗಳಲ್ಲಿ 89 ರನ್​ಗಳ ಜೊತೆಯಾಟದ ಕೊಡುಗೆ ನೀಡಿದರು.

ಇವರಿಬ್ಬರ ನಂತರ ಒಂದಾದ ಆದಿತ್ಯ ತಾರೆ ಮತ್ತು ಶಾಮ್ಸ್ ಮುಲಾನಿ 3ನೇ ವಿಕೆಟ್​ಗೆ 88 ರನ್​ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ಸನಿಹ ತಂದರು. 43 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 36 ರನ್ ​ಗಳಿಸಿದ್ದ ಮುಲಾನಿ ಔಟಾದದರು. ನಂತರ ತಾರೆ ಜೊತೆಯಾದ ಶಿವಂ ದುಬೆ 4ನೇ ವಿಕೆಟ್​ಗೆ 88 ರನ್​ ಸೇರಿಸಿದರು. ಅವರು 28 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್​ ಸೇರಿದಂತೆ 42 ರನ್ ​ಗಳಿಸಿ ಗೆಲುವಿಗೆ ಕೇವಲ 10 ಅಗತ್ಯವಿದ್ದಾಗ ಔಟಾದರು.

ಆದರೆ ಜವಾಬ್ದಾರಿಯುವ ಬ್ಯಾಟಿಂಗ್ ನಡೆಸಿದ ತಾರೆ 107 ಎಸೆತಗಳಲ್ಲಿ 18 ಬೌಂಡರಿ ಸಹಿತ ಅಜೇಯ 118 ರನ್​ ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಮುಂಬೈ ತಂಡ 4ನೇ ಬಾರಿ ವಿಜಯ್ ಹಜಾರೆ ಟ್ರೋಫಿಯನ್ನು ಗೆಲ್ಲುವ ಮೂಲಕ ಅತಿ ಹೆಚ್ಚು ಬಾರಿ ಈ ಟೂರ್ನಿಯನ್ನು ಗೆದ್ದ 2ನೇ ತಂಡ ಎಂಬ ದಾಖಲೆಯನ್ನು ಕರ್ನಾಟಕದ ಜೊತೆ ಹಂಚಿಕೊಂಡಿದೆ. ತಮಿಳುನಾಡು ತಂಡ 5 ಬಾರಿ ಗೆಲ್ಲುವ ಮೂಲಕ ಅಗ್ರಸ್ಥಾನದಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.