ETV Bharat / sports

ಆಂಧ್ರ ಮಣಿಸಿ ವಿಜಯ ಹಜಾರೆ ಟ್ರೋಫಿ ಸೆಮಿಫೈನಲ್ ಪ್ರವೇಶಿಸಿದ ಗುಜರಾತ್​

author img

By

Published : Mar 8, 2021, 5:08 PM IST

ನವದೆಹಲಿಯ ಅರುಣ​ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಮೊದಲ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ 50 ಓವರ್​ಗಳಲ್ಲಿ ನಾಯಕ ಪ್ರಿಯಾಂಕ್ ಪಾಂಚಾಲ್​ ಅವರ (134) ಶತಕದ ನೆರವಿನಿಂದ 7 ವಿಕೆಟ್ ಕಳೆದುಕೊಂಡು 299 ರನ್​ ಗಳಿಸಿತ್ತು.

ವಿಜಯ ಹಜಾರೆ ಕ್ವಾರ್ಟರ್​ ಫೈನಲ್
ವಿಜಯ ಹಜಾರೆ ಕ್ವಾರ್ಟರ್​ ಫೈನಲ್

ನವದೆಹಲಿ: ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಪ್ರಾಬಲ್ಯ ಸಾಧಿಸಿದ ಗುಜರಾತ್​ ತಂಡ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ಆಂಧ್ರ ಪ್ರದೇಶ ತಂಡವನ್ನು 118 ರನ್​ಗಳ ಅಂತರದಿಂದ ಗೆಲುವು ಸಾಧಿಸಿ ಮೊದಲ ತಂಡವಾಗಿ ವಿಜಯ ಹಜಾರೆ ಟ್ರೋಫಿ ಸೆಮಿಫೈನಲ್ ಪ್ರವೇಶಿಸಿದೆ.

ನವದೆಹಲಿಯ ಅರುಣ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಮೊದಲ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ 50 ಓವರ್​ಗಳಲ್ಲಿ ನಾಯಕ ಪ್ರಿಯಾಂಕ್ ಪಾಂಚಾಲ್​ ಅವರ (134) ಶತಕದ ನೆರವಿನಿಂದ 7 ವಿಕೆಟ್ ಕಳೆದುಕೊಂಡು 299 ರನ್​ಗಳಿಸಿತ್ತು.

ಆರಂಭಿಕನಾಗಿ ಕಣಕ್ಕಿಳಿದಿದ್ದ ಪಾಂಚಾಲ್​ 131 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್​ ಸಹಿತ 134 ರನ್​ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ರಾಹುಲ್ ವಿ ಶಾ 36, ರಿಪಲ್ ಪಟೇಲ್ 35 ರನ್​ ಗಳಿಸಿದರು.

ಆಂಧ್ರ ಪ್ರದೇಶದ ಪರ ಎಂ. ಹರೀಶ ಕುಮಾರ್ ರೆಡ್ಡಿ 60 ರನ್​ ನೀಡಿ 3 ವಿಕೆಟ್​ ಪಡೆದರೆ, ಲಲಿತ್​ ಮೋಹನ್​ ಮತ್ತು ಸಸಿಕಾಂತ್​ ತಲಾ 2 ವಿಕೆಟ್ ಪಡೆದರು.

300 ರನ್​ಗಳ ಗುರಿ ಪಡೆದ ಆಂಧ್ರ ಪ್ರದೇಶ ತಂಡ 41.2 ಓವರ್​ಗಳಲ್ಲಿ 180 ರನ್​ಗಳಿಗೆ ಆಲೌಟ್​ ಆಗುವ ಮೂಲಕ 118 ರನ್​ಗಳ ಸೋಲು ಕಂಡಿತು. ವಿಕೆಟ್ ಕೀಪರ್ ರಿಕಿ ಭುವಿ 67 ರನ್​ಗಳಿಸಿದ್ದು ಬಿಟ್ಟರೆ ಆಂಧ್ರ ಬ್ಯಾಟ್ಸ್​ಮನ್​ಗಳಿಂದ ದಿಟ್ಟ ಹೋರಾಟ ಕಂಡು ಬರಲಿಲ್ಲ.

ಗುಜರಾತ್​ ಪರ ಅರ್ಜಾನ್ ನಾಗ್ವಾಸ್ವಾಲಾ 28 ರನ್​ ನೀಡಿ 4 ವಿಕೆಟ್​ ಪಡೆದರು. ಪಿಯೂಷ್ ಚಾವ್ಲಾ 33ಕ್ಕೆ 3 , ಕರನ್ ಪಟೇಲ್​, ಸಿಟಿ ಗಜ ಮತ್ತು ಹೆಚ್​ಪಿ ಪಟೇಲ್ ತಲಾ ಒಂದು ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.