ETV Bharat / sports

ಭಾರತಕ್ಕೆ ಆಗಮಿಸಿದ ಟೀಂ ಇಂಡಿಯಾ ಆಟಗಾರರು: ಕ್ವಾರಂಟೈನ್​ ಇಲ್ಲದೇ ಮನೆ ತಲುಪಿದ ಪ್ಲೇಯರ್ಸ್​ - ಭಾರತಕ್ಕೆ ಬಂದಿಳಿದ ಕ್ರಿಕೆಟ್ ಆಟಗಾರರು

ಮುಂಬೈಗೆ ಆಗಮಿಸಿದ ರಹಾನೆ, ರವಿಶಾಸ್ತ್ರಿ, ರೋಹಿತ್, ಶಾರ್ದುಲ್ ಮತ್ತು ಪೃಥ್ವಿ ಶಾ ತಮ್ಮ ತಮ್ಮ ಮನೆ ತಲುಪಿದ್ದು, ಅವರನ್ನು ಕ್ವಾರಂಟೈನ್ ಮಾಡಿಲ್ಲ ಎಂದು ಬೃಹನ್​ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ತಿಳಿಸಿದೆ.

Team India arrives home after series win against Australia
ಭಾರತಕ್ಕೆ ಆಗಮಿಸಿದ ಟೀಂ ಇಂಡಿಯಾ ಆಟಗಾರರು
author img

By

Published : Jan 21, 2021, 12:20 PM IST

ಮುಂಬೈ (ಮಹಾರಾಷ್ಟ್ರ): ಗಬ್ಬಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದ ನಂತರ, ಭಾರತೀಯ ಕ್ರಿಕೆಟಿಗರಾದ ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ, ಪೃಥ್ವಿ ಶಾ ಮತ್ತು ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಮುಂಬೈಗೆ ಆಗಮಿಸಿದ್ದಾರೆ.

ಆಸ್ಟ್ರೇಲಿಯದಿಂದ ಮುಂಬೈಗೆ ಆಗಮಿಸಿದ ಆಟಗಾರರು ತಮ್ಮ ಮನೆಗಳನ್ನು ತಲುಪಿದ್ದಾರೆ. 'ಆಸ್ಟ್ರೇಲಿಯಾದಿಂದ ಮರಳಿದ ಭಾರತೀಯ ಕ್ರಿಕೆಟಿಗರಿಗೆ ತಮ್ಮ ಮನೆಗಳಿಗೆ ತೆರಳಲು ಅನುಮತಿ ನೀಡಲಾಗಿದೆ, ಅವರನ್ನು ಕ್ವಾರಂಟೈನ್ ಮಾಡಿಲ್ಲ' ಎಂದು ಬೃಹನ್​ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ತಿಳಿಸಿದೆ.

ಭಾರತಕ್ಕೆ ಆಗಮಿಸಿದ ಟೀಂ ಇಂಡಿಯಾ ಆಟಗಾರರು

ಆಸ್ಟ್ರೇಲಿಯಾದಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ನಮ್ಮ ಆಟಗಾರರು ಮತ್ತು ತಂಡವನ್ನು ಸನ್ಮಾನಿಸುವ ಬಗ್ಗೆ ನಾವು ನಿರ್ಧರಿಸುತ್ತೇವೆ. ಆಟಗಾರರನ್ನು ಸನ್ಮಾನಿಸಲು ಇಂಗ್ಲೆಂಡ್ ಸರಣಿಯ ಮೊದಲು ಸೂಕ್ತ ಸಮಯವನ್ನು ಹುಡುಕಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​ಅಧ್ಯಕ್ಷ ವಿಜಯ್ ಪಾಟೀಲ್ ತಿಳಿಸಿದ್ದಾರೆ.

  • Indian cricketers Ajinkya Rahane, Prithvi Shaw and Team India's coach Ravi Shastri arrive in Mumbai from Australia after winning the Border–Gavaskar Trophy. pic.twitter.com/TrMzrRdg4F

    — ANI (@ANI) January 21, 2021 " class="align-text-top noRightClick twitterSection" data=" ">

ಮುಂಬೈಗೆ ಆಗಮಿಸಿದ ರಹಾನೆ, ರವಿಶಾಸ್ತ್ರಿ, ರೋಹಿತ್, ಶಾರ್ದುಲ್ ಮತ್ತು ಪೃಥ್ವಿ ಶಾ ಅವರನ್ನು ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಅಧಿಕಾರಿಗಳು ಸನ್ಮಾನಿಸಿದರು.

ನೆಟ್​ ಬೌಲರ್​ ಆಗಿ ಆಸ್ಟ್ರೇಲಿಯಾ ತೆರಳಿ ಮೂರು ಸ್ವರೂಪದ ಕ್ರಿಕೆಟ್​ಗೂ ಪದಾರ್ಪಣೆ ಮಾಡಿ ಗಮನ ಸೆಳೆದಿದ್ದ ಟಿ. ನಟರಾಜನ್ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ತಮಿಳುನಾಡಿನತ್ತ ಪ್ರಯಾಣ ಬೆಳೆಸಿದ್ದಾರೆ. ಇತ್ತ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

  • Delhi | I am so happy that we retained the trophy. The whole team is very happy with the way we played the series: Indian cricketer Rishabh Pant on his return to India after winning the Border–Gavaskar Trophy in Australia pic.twitter.com/V87RiDt9oE

ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ವಾಷಿಂಗ್ಟನ್ ಸುಂದರ್ ಮತ್ತು ಬೌಲಿಂಗ್ ಕೋಚ್ ಭರತ್ ಅರುಣ್ ಸೇರಿದಂತೆ ಚೆನ್ನೈ ಆಟಗಾರರು ಪ್ರಸ್ತುತ ದುಬೈನಲ್ಲಿದ್ದು, ಶುಕ್ರವಾರ ಮುಂಜಾನೆ ಭಾರತ ತಲುಪುವ ನಿರೀಕ್ಷೆಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.