ನವದೆಹಲಿ: ತೆರೆಮರೆಯಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ಕೈಗೊಂಡಿರುವ ಮಹತ್ವಾಕಾಂಕ್ಷೆಯ ಯೋಜನೆ ಖೇಲೋ ಇಂಡಿಯಾ ಯೋಜನೆಗೆ ಹೆಚ್ಚಿ ಒತ್ತು ನೀಡಲಾಗುವುದು ಎಂದು ಹಣಖಾಸು ಸಚಿವೆ ನಿರ್ಮಲ ನೀತಾರಾಮನ್ ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ.
-
To popularize sports at all levels, National Sports Education Board for development of sportspersons to be set up under @kheloindia : FM @nsitharaman https://t.co/iK5EWIia1b #BudgetForNewIndia #Budget2019
— PIB India (@PIB_India) July 5, 2019 " class="align-text-top noRightClick twitterSection" data="
">To popularize sports at all levels, National Sports Education Board for development of sportspersons to be set up under @kheloindia : FM @nsitharaman https://t.co/iK5EWIia1b #BudgetForNewIndia #Budget2019
— PIB India (@PIB_India) July 5, 2019To popularize sports at all levels, National Sports Education Board for development of sportspersons to be set up under @kheloindia : FM @nsitharaman https://t.co/iK5EWIia1b #BudgetForNewIndia #Budget2019
— PIB India (@PIB_India) July 5, 2019
ದೇಶದೆಲ್ಲೆಡೆ ಖೇಲೋ ಇಂಡಿಯಾ ಯೋಜನೆ ಕ್ರೀಡೆಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಖೇಲೋ ಇಂಡಿಯಾ ಯೋಜನೆಯಡಿ, ಯುವಕರಲ್ಲಿ ಎಲ್ಲಾ ರೀತಿಯ ಕ್ರೀಡೆಗಳನ್ನು ಉತ್ತೇಜಿಸುವ ಉದ್ದೇಶದಿಂದ ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿಯನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ.
ದೇಶದಲ್ಲಿ ಕ್ರೀಡಾ ಕ್ರಾಂತಿ ನಡೆಸಲು ಖೇಲೋ ಇಂಡಿಯಾ ಆರಂಭಿಸಲಾಗಿದ್ದು, ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ 1000 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರ 8 ವರ್ಷಗಳ ಕಾಲ ವಾರ್ಷಿಕ ₹5 ಲಕ್ಷ ಆರ್ಥಿಕ ನೆರವು ನೀಡಲಿದೆ.
2017ರಲ್ಲಿ ಪ್ರಾರಂಭವಾದ ಖೇಲೋ ಇಂಡಿಯಾ ಯೋಜನೆ ಅಡಿಯಲ್ಲಿ ಪ್ರತೀ ವರ್ಷ ಕ್ರಿಡಾಕೂಟವನ್ನ ಆಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.