ETV Bharat / sports

ಅಂಪೈರ್​ ಕೃಪಕಟಾಕ್ಷದಿಂದ ಸಚಿನ್​ ದ್ವಿಶತಕ ಸಾಧನೆ ಮಾಡಿದ್ದರು: ಡೇಲ್​ ಸ್ಟೈನ್​ ಅಚ್ಚರಿಯ ಹೇಳಿಕೆ

author img

By

Published : May 17, 2020, 12:36 PM IST

ಕ್ರಿಕೆಟ್​ನ ಬ್ಯಾಟಿಂಗ್​ ದಾಖಲೆಯ ಸಿಂಹಪಾಲನ್ನು ತಮ್ಮ ಹೆಸರಿನಲ್ಲಿಯೇ ಬರೆದುಕೊಂಡಿರುವ ತೆಂಡೂಲ್ಕರ್​ 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ದ್ವಿಶತಕ ಸಿಡಿಸಿದ್ದರು. ಇದು ಏಕದಿನ ಕ್ರಿಕೆಟ್​ನಲ್ಲಿ ದಾಖಲಾಗಿದ್ದ ಚೊಚ್ಚಲ ದ್ವಿಶತಕವಾಗಿತ್ತು. ಆದ್ರೆ ಸಚಿನ್​ ಅವರ ಈ ಸಾಧನೆ ಕುರಿತು ಬೌಲರ್​​ ಡೇಲ್​ ಸ್ಟೈನ್​ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಂಪೈರ್​ ಕೃಪಕಟಾಕ್ಷದಿಂದ ಸಚಿನ್​ ದ್ವಿಶತಕ ಸಾಧನೆ ಮಾಡಿದ್ದರು ಎಂದಿದ್ದಾರೆ.

ಸಚಿನ್​ ದ್ವಿಶತಕ
ಡೇಲ್​ ಸ್ಟೈನ್​

ಲಂಡನ್​: ಏಕದಿನ ಕ್ರಿಕೆಟ್​ನ ಇತಿಹಾಸದಲ್ಲಿ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ಮೊದಲ ದ್ವಿಶತಕ ಸಿಡಿಸಿದ್ದರ ಬಗ್ಗೆ ಬೌಲರ್​ರೊಬ್ಬರು​ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಂಪೈರ್​ ಕೃಪಕಟಾಕ್ಷದಿಂದ ಸಚಿನ್​ ದ್ವಿಶತಕ ಸಿಡಿಸಿದ್ದರು ಎನ್ನುವ ಮೂಲಕ ದಕ್ಷಿಣ ಆಫ್ರಿಕಾದ ವೇಗಿ ಸ್ಟೈನ್​ ಅಚ್ಚರಿ ಮೂಡಿಸಿದ್ದಾರೆ.

ಕ್ರಿಕೆಟ್​ನ ಬ್ಯಾಟಿಂಗ್​ ದಾಖಲೆಯ ಸಿಂಹಪಾಲನ್ನು ತಮ್ಮ ಹೆಸರಿನಲ್ಲಿಯೇ ಬರೆದುಕೊಂಡಿರುವ ಸಚಿನ್​ ತೆಂಡೂಲ್ಕರ್​ 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ದ್ವಿಶತಕ ಸಿಡಿಸಿದ್ದರು. ಇದು ಏಕದಿನ ಕ್ರಿಕೆಟ್​ನಲ್ಲಿ ದಾಖಲಾಗಿದ್ದ ಚೊಚ್ಚಲ ದ್ವಿಶತಕವಾಗಿತ್ತು.

ಆದರೆ ಹರಿಣಗಳ ವೇಗಿ ಡೇಲ್​ ಸ್ಟೈನ್​, "ಸಚಿನ್​ ನಮ್ಮ ವಿರುದ್ಧ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ್ದರು. ನನಗೆ ಇನ್ನೂ ನೆನೆಪಿದೆ, ಅವರು 190ರ ಆಸುಪಾಸಿನಲ್ಲಿದ್ದಾಗ ನನ್ನ ಓವರ್​ನಲ್ಲಿ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದಿದ್ದರು. ಆದ್ರೆ ಅಂಪೈರ್​ ಇಯಾನ್​ ಗೌಲ್ಡ್​ ಔಟ್​ ನೀಡಲಿಲ್ಲ" ಎಂದು ಇಂಗ್ಲೆಂಡ್​ ವೇಗಿ ಜೇಮ್ಸ್​ ಆ್ಯಂಡರ್ಸನ್​ ಜೊತೆ ನಡೆಸಿದ ಲೈವ್​ ಸಂವಾದದಲ್ಲಿ ಈ ವಿಷಯ ತಿಳಿಸಿದ್ದಾರೆ.

ಅಂಪೈರ್​ ಬಳಿ ತೆರಳಿ "ಏಕೆ ಔಟ್​ ನೀಡಲಿಲ್ಲ? ಎಂದು ಕೇಳಿದೆ. ಅದಕ್ಕೆ ಅವರು, ಗೆಳೆಯ , ಸುತ್ತಲೂ ನೋಡು, ನಾನೇನಾದರು ಔಟ್​ ನೀಡಿದರೆ, ನಾನು ಹೋಟೆಲ್​ಗೆ ಹೋಗಲು ಸಾಧ್ಯವಿಲ್ಲ" ಎಂದು ಅಂಪೈರ್​ ತಿಳಿಸಿದ್ದನ್ನು ಸ್ಮರಿಸಿದ್ದಾರೆ.

ಆದರೆ ಸ್ಟೈನ್​ ಹೇಳಿದ ಮಾತು ಶುದ್ಧ ಸುಳ್ಳು ಎಂಬುದು ತಿಳಿದುಬಂದಿದೆ. ಹೇಗೆಂದರೆ ಸಚಿನ್​ 190 ರನ್​ ಗಳಿಸಿದ್ದ ವೇಳೆ ಅವರಿಗೆ ಸ್ಟೈನ್​ ಮಾಡಿದ್ದು 3 ಎಸೆತ. ಆ ಮೂರು ಎಸೆತಗಳನ್ನು ಸಚಿನ್​ ಬ್ಯಾಟ್​ನಿಂದ ಟಚ್​ ಮಾಡಿರುವುದು ರಿಪ್ಲೇನಲ್ಲಿ ಸ್ಪಷ್ಟವಾಗಿದೆ. ಆದರೆ ಸ್ಟೈನ್​ ಏಕೆ ಸುಳ್ಳು ಹೇಳಿದ್ದಾರೆ ಎಂದು ಅವರಿಂದಲೇ ಬಹಿರಂಗವಾಗಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.