ಪಾಟ್‌ಶೆಫ್‌ಸ್ಟ್ರೂಮ್: ಯಶಸ್ವಿ ಜೈಸ್ವಾಲ್ ಅರ್ಧಶತಕದ ನಡುವೆಯೂ ಭಾರತ ಕಿರಿಯರ ತಂಡ ಬಾಂಗ್ಲಾದೇಶ ತಂಡ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 177 ರನ್ಗಳಿಗೆ ಆಲೌಟ್ ಆಗಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಧಾನರಗತಿ ಆರಂಭ ಪಡೆಯಿತು. ಪಾಕಿಸ್ತಾನದ ವಿರುದ್ಧ ಅದ್ಭುತ ಬ್ಯಾಟಿಂಗ್ ನಡೆಸಿದ್ದ ದಿವ್ಯಾನ್ಶ್ ಸಕ್ಸೇನಾ 17 ಎಸೆತಗಳನ್ನೆದುರಿಸಿ ಕೇವಲ 2 ರನ್ಗಳಿಗೆ ಔಟಾದರು. ನಂತರ ಬಂದ ತಿಲಕ್ ವರ್ಮಾ ಜೈಸ್ವಾಲ್ ಜೊತೆಗ ಸೇರಿ ಎರಡನೇ ವಿಕೆಟ್ಗೆ 94 ರನ್ಗಳ ಜೊತಯಾಟ ನೀಡಿದರು.
ಈ ಹಂತದಲ್ಲಿ ಅವಿಶೇಕ್ ದಾಸ್ ಬೌಲಿಂಗ್ನಲ್ಲಿ 38 ರನ್ಗಳಿಸಿದ್ದ ತಿಲಕ್ ವರ್ಮಾ, ತಂಜಿಮ್ ಬೌಲಿಂಗ್ನಲ್ಲಿ ಮೊಹಮ್ಮದ್ ಹಸನ್ಗೆ ಕ್ಯಾಚ್ ನೀಡಿ ಔಟಾದರು. ನಂತರ ಬಂದ ನಾಯಕ ಪ್ರಿಯಂ ಗರ್ಗ್ ಕೇವಲ 7 ರನ್ಗಳಿಸಿ ರಕಿಬುಲ್ ಹಸ್ ವಿಕೆಟ್ ಒಪ್ಪಿಸಿದರು.
-
India are all out for 177!
— Cricket World Cup (@cricketworldcup) February 9, 2020 " class="align-text-top noRightClick twitterSection" data="
Bangladesh need 178 to win the #U19CWC trophy! #INDvBAN | #FutureStars
">India are all out for 177!
— Cricket World Cup (@cricketworldcup) February 9, 2020
Bangladesh need 178 to win the #U19CWC trophy! #INDvBAN | #FutureStarsIndia are all out for 177!
— Cricket World Cup (@cricketworldcup) February 9, 2020
Bangladesh need 178 to win the #U19CWC trophy! #INDvBAN | #FutureStars
ಒಂದು ಕಡೆ ವಿಕೆಟ್ ಬೀಳುತ್ತಿದ್ದರು ಅದ್ಭುತ ಬ್ಯಾಟಿಂಗ್ ನಡೆಸಿದ ಯಶಸ್ವಿ ಜೈಸ್ವಾಲ್ 121 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು. ಉಳಿದಂತೆ ಜುರೆಲ್ 22 ರನ್ಗಳಿಸಿ ಬೇಡದ ರನ್ ಕದಿಯಲು ಹೋಗಿ ರನ್ಔಟಾಗುವ ಮೂಲಕ ಭಾರತಕ್ಕೆ ನಿರಾಶೆ ಮೂಡಿಸಿದರು. ಸಿದ್ದೇಶ್ ವೀರ್(0), ಅಥರ್ವ ಅಂಕೋಲಕರ್ 3, ರವಿ ಬಿಷ್ನೋಯ್ 2, ಸುಶಾಂತ್ ಮಿಶ್ರಾ 1, ಕಾರ್ತಿಕ್ ತ್ಯಾಗಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದರು.
ಒಟ್ಟಾರೆ ಭಾರತ 47.2 ಓವರ್ಗಳಲ್ಲಿ 177 ರನ್ಗಳಿಗೆ ಆಲೌಟ್ ಆಯಿತು. ಬಾಂಗ್ಲಾದೇಶದ ಪರ ಶೋರಿಫ್ ಇಸ್ಲಾಮ್ 31ಕ್ಕೆ 2, ತಂಜಿಮ್ ಹಸನ್ ಸಕಿಭ್ 2, ಅವಿಶೇಕ್ ದಾಸ್ 40ಕ್ಕೆ3 ಹಾಗೂ ರಕಿಬುಲ್ ಹಸಮ್ ಒಂದು ವಿಕೆಟ್ ಪಡೆದರು.