ETV Bharat / sports

'ಇದು ನಿನ್ನ ಜೀವನದ ಬೆಸ್ಟ್​ ಇನ್ನಿಂಗ್ಸ್​ ಆಗಲಿದೆ'.. ಪಾಂಡೆಗೆ ಹಿಟ್​ಮ್ಯಾನ್ ವಿಶ್

author img

By

Published : Dec 2, 2019, 10:29 PM IST

ಇಂದು ಬೆಳಗ್ಗೆ ತಮಿಳು ನಟಿಯನ್ನ ವರಿಸಿದ ಕರ್ನಾಟಕ ಕ್ರಿಕೆಟ್ ತಂಡದ ಆಟಗಾರ ಮನೀಷ್ ಪಾಂಡೆಗೆ ಹಿಟ್​ಮ್ಯಾನ್ ರೋಹಿತ್ ಶರ್ಮಾ ಶುಭ ಕೋರಿದ್ದಾರೆ.

ಮನೀಷ್ ಪಾಂಡೆಗೆ ಶುಭ ಕೋರಿದ ರೋಹಿತ್ ಶರ್ಮಾ,Rohit Sharma wish Manish Pandey
ಪಾಂಡೆಗೆ ಹಿಟ್​ಮ್ಯಾನ್ ವಿಶ್

ಮುಂಬೈ: ನಿನ್ನೆಯಷ್ಟೆ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನ ಗೆಲ್ಲಿಸಿ ಇಂದು ತಮಿಳು ನಟಿಯನ್ನ ವರಿಸಿದ ಕನ್ನಡಿಗ ಮನೀಷ್ ಪಾಂಡೆಗೆ ಹಿಟ್​ಮ್ಯಾನ್ ಶುಭ ಕೋರಿದ್ದಾರೆ.

ಮುಂಬೈನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಮನೀಷ್ ಪಾಂಡೆ ತಮಿಳು ನಟಿ ಆಶ್ರಿತಾ ಶೆಟ್ಟಿಯನ್ನ ವರಿಸಿದ್ದಾರೆ. ಈ ಮೂಲಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಮನೀಷ್​ಗೆ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಶುಭಕೋರಿದ್ದಾರೆ.

ಮನೀಷ್ ವಿವಾಹ ಫೋಟೋವನ್ನ ಟ್ವೀಟ್​ ಮಾಡಿರುವ ರೋಹಿತ್​, 'ಇಬ್ಬರಿಗೂ ಶುಭವಾಗಲಿ, ನನ್ನನ್ನ ನಂಬು ಇದೇ ನಿನ್ನ ಜೀವನದ ಬೆಸ್ಟ್​ ಇನ್ನಿಂಗ್ಸ್ ​ಆಗಲಿದೆ ' ಎಂದು ಪಾಂಡೆಯನ್ನ ಹಾರೈಸಿದ್ದಾರೆ.

ಟೀಂ ಇಂಡಿಯಾದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕೆಲ ಪಂದ್ಯಗಳನ್ನು ಆಡಿರುವ ಮನೀಷ್ ಪಾಂಡೆ ಸದ್ಯ ದೇಶೀಯ ಕ್ರಿಕೆಟ್​ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟೂರ್ನಿ ಗೆಲುವಿನ ಮರುದಿನವೇ ವಿವಾಹ ಮಾಡಿಕೊಂಡಿದ್ದು, ಡಬಲ್ ಸಂಭ್ರಮದಲ್ಲಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.