ಶಾರ್ಜಾ: ಸ್ಮೃತಿ ಮಂಧಾನ ನಾಯಕತ್ವದ ಟ್ರೈಲ್ಬ್ಲೇಜರ್ಸ್ ತಂಡ ಹಾಲಿ ಚಾಂಪಿಯನ್ ಸೂಪರ್ ನೋವಾಸ್ ತಂಡವನ್ನು 16 ರನ್ಗಳಿಂದ ಮಣಿಸಿ ಚೊಚ್ಚಲ ವುಮೆನ್ಸ್ ಟಿ20 ಚಾಲೆಂಜ್ ಚಾಂಪಿಯನ್ ಆಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟ್ರೈಲ್ಬ್ಲೇಜರ್ಸ್ ತಂಡ 20 ಓವರ್ಗಳಲ್ಲಿ 118 ರನ್ಗಳಿಸಿತ್ತು. ನಾಯಕ ಸ್ಮೃತಿ ಮಂಧಾನ 68 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತಕ್ಕೆ ಕಾರಣರಾಗಿದ್ದರು.
ಸೂಪರ್ ನೋವಾಸ್ ತಂಡದ ರಾಧ ಯಾದವ್ ಕೇವಲ 20 ರನ್ ನೀಡಿ 5 ವಿಕೆಟ್ ಪಡೆದು ಟ್ರೈಲ್ಬ್ಲೇಜರ್ಸ್ ತಂಡ ಬೃಹತ್ ಮೊತ್ತ ದಾಖಲಿಸದಂತೆ ತಡೆದರು.
ಇನ್ನು 119 ರನ್ಗಳ ಗುರಿ ಪಡೆದ ಸೂಪರ್ ನೋವಾಸ್ ಬ್ಲೈಜರ್ಸ್ ತಂಡದ ಬೌಲರ್ಗಳ ಮುಂದೆ ರನ್ಗಳಿಸಲಾಗದೆ ನಿರಂತರವಾಗಿ ವಿಕೆಟ್ ಕಳೆದುಕೊಂಡು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 102 ರನ್ಗಳಿಸಲಷ್ಟೇ ಶಕ್ತವಾಗಿ 16 ರನ್ಗಳ ಸೋಲುಕಂಡಿತು.
-
#Trailblazers WIN the #JioWomensT20Challenge pic.twitter.com/LXJClXZcn3
— IndianPremierLeague (@IPL) November 9, 2020 " class="align-text-top noRightClick twitterSection" data="
">#Trailblazers WIN the #JioWomensT20Challenge pic.twitter.com/LXJClXZcn3
— IndianPremierLeague (@IPL) November 9, 2020#Trailblazers WIN the #JioWomensT20Challenge pic.twitter.com/LXJClXZcn3
— IndianPremierLeague (@IPL) November 9, 2020
ನಾಯಕಿ ಹರ್ಮನ್ ಪ್ರೀತ್ ಕೌರ್ 36 ಎಸೆತಗಳಲ್ಲಿ 30 ರನ್ಗಳಿಸಿದ್ದೇ ಗರಿಷ್ಠ ಸ್ಕೋರರ್ ಆದರು. ಸಿರಿವರ್ದನೆ 19 ರನ್ಗಳಿಸಿದರು.
ಟ್ರೈಲ್ ಬ್ಲೇಜರ್ಸ್ ಪರ ಸಲ್ಮಾ ಖತುನ್ 18ಕ್ಕೆ 3, ದೀಪ್ತಿ ಶರ್ಮಾ 9ಕ್ಕೆ 2 ಹಾಗೂ ಎಕ್ಲೆಸ್ಟೋನ್ 26ಕ್ಕೆ 1 ವಿಕೆಟ್ ಪಡೆದು ಮಿಂಚಿದರು.