ETV Bharat / sports

ವಿಶ್ವದ ನಂಬರ್​​ 1 ಟೆಸ್ಟ್​​ ತಂಡ ಸೋಲಿಸಿದ್ದು ನಿಜಕ್ಕೂ ತೃಪ್ತಿದಾಯಕ: ಕಿವೀಸ್​ ಕ್ಯಾಪ್ಟನ್​ ಕೇನ್​! - ಟೀಂ ಇಂಡಿಯಾ ಟೆಸ್ಟ್​ ಸೋಲು

ವಿಶ್ವದ ನಂಬರ್​ 1 ಟೆಸ್ಟ್​ ತಂಡವನ್ನ ಸೋಲಿಸಿರುವುದು ನಿಜಕ್ಕೂ ತೃಪ್ತಿ ನೀಡಿದೆ ಎಂದು ಕಿವೀಸ್​ ತಂಡದ ಕ್ಯಾಪ್ಟನ್​​ ಕೇನ್​ ವಿಲಿಯಮ್ಸನ್​ ಹೇಳಿದ್ದಾರೆ.

kane williamson
kane williamson
author img

By

Published : Mar 2, 2020, 1:21 PM IST

ಕ್ರೈಸ್ಟ್​ಚರ್ಚ್​​: ಟೆಸ್ಟ್​​ ಕ್ರಿಕೆಟ್​​ನಲ್ಲಿ ನಂಬರ್​ 1ಸ್ಥಾನದಲ್ಲಿರುವ ಟೀಂ ಇಂಡಿಯಾ ಇದೀಗ ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ವೈಟ್​ವಾಶ್​ ಮುಖಭಂಗಕ್ಕೊಳಗಾಗಿದ್ದು, ಬರೋಬ್ಬರಿ 8 ವರ್ಷಗಳ ಬಳಿಕ ಟೆಸ್ಟ್​ ಸರಣಿಯಲ್ಲಿ ಸೋಲು ಕಂಡಿದೆ.

ಕಿವೀಸ್​ ಕ್ಯಾಪ್ಟನ್​ ಕೇನ್ ವಿಲಿಯಮ್ಸನ್​

ಮೊದಲ ಟೆಸ್ಟ್​​ನಲ್ಲಿ 10 ವಿಕೆಟ್​ಗಳ ಸೋಲು ಕಂಡಿದ್ದ ಟೀಂ ಇಂಡಿಯಾ ಎರಡನೇ ಟೆಸ್ಟ್​ನಲ್ಲಿ 7 ವಿಕೆಟ್​ ಅಂತರದಿಂದ ಟೆಸ್ಟ್​ ಪಂದ್ಯ ಸೋಲುವ ಮೂಲಕ ಕ್ಲಿನ್​​ ಸ್ವೀಪ್​ ಮುಖಭಂಗಕ್ಕೊಳಗಾಗಿದೆ. ಸರಣಿಯಲ್ಲಿ ಭರ್ಜರಿ ಗೆಲುವು ದಾಖಲು ಮಾಡಿದ ಬಳಿಕ ಕಿವೀಸ್​ ತಂಡದ ಕ್ಯಾಪ್ಟನ್​ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದರು.

ಟೆಸ್ಟ್​ನಲ್ಲಿ ನಂಬರ್​ 1ಸ್ಥಾನದಲ್ಲಿರುವ ತಂಡವನ್ನ ಸೋಲಿಸಿರುವುದು ನಿಜಕ್ಕೂ ತೃಪ್ತಿ ನೀಡಿದೆ ಎಂದಿದ್ದಾರೆ. ಎರಡು ಟೆಸ್ಟ್​​ ಪಂದ್ಯಗಳಲ್ಲಿ ಟಾಸ್​ ಗೆದ್ದಿದ್ದ ಕೇನ್​, ಗೆಲುವು ಸಾಧಿಸಬೇಕಾದರೆ ಟಾಸ್​ ಮುಖ್ಯವಾಗಲ್ಲ. ಬದಲಾಗಿ ತಂಡದಲ್ಲಿನ ಬ್ಯಾಟಿಂಗ್ ​ಹಾಗೂ ಬೌಲಿಂಗ್​ ವಿಭಾಗ ಸಮತೋಲನದಿಂದ ಕೂಡಿರಬೇಕು. ನಮ್ಮ ತಂಡದ ಗೆಲುವಿಗೆ ಅದೇ ಮುಖ್ಯವಾಯ್ತು ಎಂದಿದ್ದಾರೆ.

ಟೀಂ ಇಂಡಿಯಾದಲ್ಲಿ ಅದ್ಭುತ ಬೌಲರ್​ಗಳಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿ ಹೊಂದುಕೊಂಡು ತಮ್ಮ ಕೈಚೆಳಕ ತೋರಬಲ್ಲರು. ಆದರೆ, ಇಲ್ಲಿನ ಪಿಚ್​ ಅರಿತುಕೊಳ್ಳಲು ಅವರು ವಿಫಲರಾದರೂ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.