ETV Bharat / sports

ಹ್ಯಾಟ್ರಿಕ್ ಬೌಂಡರಿ ಬಾರಿಸಿದ ನಂತರ​ ವಿಂಡೀಸ್‌ ವೇಗಿಗೆ ದ್ರಾವಿಡ್ 'ಬೆಸ್ಟ್' ಸಲಹೆ‌ - Tino best on Indian cricketers

'ಭಾರತೀಯ ಕ್ರಿಕೆಟಿಗರು ತುಂಬಾ ಮೃದು ಸ್ವಭಾವದವರು. ರಾಹುಲ್​ ದ್ರಾವಿಡ್​ ಮತ್ತು ಇತರೆ ಹಲವು ಆಟಗಾರರು ವಿನಮ್ರತೆಯುಳ್ಳವರಾಗಿದ್ದರು'- ಟಿನೋ ಬೆಸ್ಟ್‌

ಟಿನೋ ಬೆಸ್ಟ್​ -ದ್ರಾವಿಡ್​
ಟಿನೋ ಬೆಸ್ಟ್​ -ದ್ರಾವಿಡ್​
author img

By

Published : Jul 19, 2020, 6:53 PM IST

ನವದೆಹಲಿ: ವಿಂಡೀಸ್‌ನ ಮಾಜಿ ವೇಗಿ ಟಿನೊ ಬೆಸ್ಟ್​ ತಮ್ಮ ಆರಂಭದ ದಿನಗಳಲ್ಲಿ ಭಾರತದೆದುರಿನ ಪಂದ್ಯದಲ್ಲಿ ರಾಹುಲ್​ ದ್ರಾವಿಡ್​ ಸತತ ಮೂರು ಬೌಂಡರಿ ಬಾರಿಸಿದ್ದ ಘಟನೆಯನ್ನು ಸ್ಮರಿಸಿದ್ದಾರೆ. ಆ ಪಂದ್ಯದ ನಂತರ ತಮ್ಮನ್ನು ಭೇಟಿಯಾಗಿದ್ದ ದ್ರಾವಿಡ್​ ಹುರಿದುಂಬಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ಭಾರತೀಯ ಕ್ರಿಕೆಟಿಗರು ತುಂಬಾ ಮೃದು ಸ್ವಭಾವದವರು. ರಾಹುಲ್​ ದ್ರಾವಿಡ್​ ಮತ್ತು ಇತರೆ ಹಲವು ಆಟಗಾರರು ವಿನಮ್ರತೆಯುಳ್ಳವರಾಗಿದ್ದರು ಎಂದು ಅವರು​ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಅವರು ತಮಗೆ 1.5 ಬಿಲಿಯನ್​ ಜನರ ಬೆಂಬಲವಿದೆ ಎಂಬ ಭಾವನೆಯಲ್ಲಿ ಇರುವುದಿಲ್ಲ. ಅದಕ್ಕೆ ನಾನು ಅವರನ್ನು ನಿಜವಾಗಿಯೂ ಮೆಚ್ಚುತ್ತೇನೆ. ಅವರಲ್ಲಿ ಯಾವುದೇ ರೀತಿಯಾ ದುರ್ವರ್ತನೆ ಇರಲಿಲ್ಲ. ಆಟದಲ್ಲಿ ಸದಾ ಗೌರವ ಮತ್ತು ಪ್ರೀತಿಯನ್ನು ತೋರಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ಟಿನೋ ಬೆಸ್ಟ್​
ಟಿನೋ ಬೆಸ್ಟ್​

ಭಾರತದ ವಿರುದ್ಧ 2005ರಲ್ಲಿ ಇಂಡಿಯನ್ ಆಯಿಲ್ ಕಪ್​ನಲ್ಲಿ ನಾನು ಮೊದಲ ಬಾರಿಗೆ ಆಡಿದ್ದೆ. ರಾಹುಲ್ ದ್ರಾವಿಡ್ ಅವರಿಗೆ ಈ ವೇಳೆ ನಾನು ಬೌಲಿಂಗ್ ಮಾಡಿದ್ದೆ. ಈ ಸಂದರ್ಭದಲ್ಲಿ ಅವರು ಸತತ ಮೂರು ಎಸೆತಗಳಿಗೆ ಬೌಂಡರಿ ಬಾರಿಸಿದ್ದರು. ನನಗಿನ್ನೂ ನೆನಪಿದೆ. ಈ ಪಂದ್ಯದ ಬಳಿಕ ನನ್ನ ಜೊತೆಗೆ ದ್ರಾವಿಡ್ ಸಣ್ಣ ಮಾತುಕತೆ ನಡೆಸಿ ಹುರಿದುಂಬಿಸಿದ್ದರು ಎಂದು 38 ವರ್ಷದ ಆಟಗಾರ ಹೇಳುತ್ತಾರೆ.

ಟಿನೋ ಬೆಸ್ಟ್​
ಟಿನೋ ಬೆಸ್ಟ್​

ಯಂಗ್ ಮ್ಯಾನ್, ನಿನ್ನ ಶಕ್ತಿ ಇಷ್ಟವಾಯಿತು. ಅದನ್ನು ಯಾವಾಗಲೂ ಕಾಯ್ದುಕೊಂಡಿರು. ಕೇವಲ ಬೌಂಡರಿಗಳನ್ನು ಬಾರಿಸಲ್ಪಟ್ಟೆ ಎಂಬ ಕಾರಣಕ್ಕೆ ನಿಲ್ಲಿಸಬೇಡ ಎಂದಿದ್ದರು. ನಾನು ಯಾವಾಗಲೂ ಭಾರತೀಯ ಕ್ರಿಕೆಟಿಗರಿಂದ ಸಾಕಷ್ಟು ಪ್ರೀತಿ ಗಳಿಸಿಕೊಂಡಿದ್ದೇನೆ. ಯುವರಾಜ್​ ಸಿಂಗ್​ ನನಗೆ ಅವರ ಬ್ಯಾಟ್ ನೀಡಿದ್ದರೆಂದು ವಿಂಡೀಸ್​ ಮಾಜಿ ವೇಗಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.